ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಸಕಲೇಶಪುರದ ಸಾಗರ್

0

ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಸಕಲೇಶಪುರದ ಸಾಗರ್

ಸಕಲೇಶಪುರ: ಪಟ್ಟಣದ ಬಾಳೆಗದ್ದೆ ಜನತಾ ಮನೆ ಬಡಾವಣೆಯ ನಿವಾಸಿ ಸಾಗರ್ (21) ಕಳೆದ ಒಂದು ವಾರದ ಹಿಂದೆ ತನ್ನ ಮನೆಯಲ್ಲಿ ಕ್ಷುಲಕ ಕಾರಣಕ್ಕೆ ವಿಷ ಸೇವನೆ ಮಾಡಿದ್ದರಿಂದ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗತ್ತು. ಚಿಕಿತ್ಸೆ ಫಲಕಾರಿಯಾಗದಿದ್ದರಿಂದ ಯುವಕ ಶುಕ್ರವಾರ ಜಿಲ್ಲಾಸ್ಪತ್ರೆಯಲ್ಲಿ ನಿಧನನಾಗಿದ್ದು ಈ ಹಿನ್ನೆಲೆಯಲ್ಲಿ ಆತನ ಸ್ನೇಹಿತರು ಮೃತ ಯುವಕನ ಕುಟುಂಬದವರ ಮನವೊಲಿಸಿ

ಯುವಕನ ಕಣ್ಣುಗಳನ್ನು ದಾನ ಮಾಡಿಸುವ ಮುಖಾಂತರ ಇಬ್ಬರು ಅಂಧರಿಗೆ ದಾರಿದೀಪವಾಗಿದ್ದಾರೆ. ಮೃತ ಯುವಕ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಪದವಿ ಓದುತ್ತಿದ್ದು ಕ್ಷುಲಕ ಕಾರಣಕ್ಕೆ ವಿಷ ಕುಡಿದು ಸಾವನ್ನಪ್ಪಿ ಬದುಕನ್ನು ಹಾಳು ಮಾಡಿಕೊಂಡಿದ್ದಾನೆ.

ಪ್ರೇಮ ವೈಫಲ್ಯವೆ ಮೃತನ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ.ಮೃತನ ಅಂತ್ಯ ಸಂಸ್ಕಾರ ನಾಳೆ ಹಾನುಬಾಳ್ ಸಮೀಪದ ವೆಂಕಟಹಳ್ಳಿ ಗ್ರಾಮದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here