ಕಿರುತೆರೆಯ ಜನಪ್ರಿಯ ಕಾರ್ಯಕ್ರಮದಲ್ಲಿ ನಮ್ಮ ಹಾಸನದ ಈ ಇಬ್ಬರ ಪ್ರತಿಭೆಗೆ ಮತ್ತೆ ಒಲಿದ ಪ್ರಶಸ್ತಿ

0

ಹಾಸನ/ಬೆಂಗಳೂರು : ಜೀ ಕನ್ನಡವಾಹಿನಿಯ ಕಾಮಿಡಿ ಕಿಲಾಡಿಗಳು ಸೀಜ಼ನ್ ಆಲ್ ಟೈಮ್ ಚಾಂಪಿಯನ್ಸ್ ವಿಭಾಗದ ರಿಯಾಲಿಟಿ ಷೋನ ಸ್ಪರ್ಧೆಯಲ್ಲಿ ತಂಡದ ನಾಯಕನಾಗಿ ಭಾಗವಹಿಸಿರುವ ಹಾಸನದ ಹುಡುಗ ಮಡೆನೂರು ಮನು” ಹಾಗೂ

ಹೊಳೇನರಸೀಪುರದ ಸಂತೋಷ್ ಅವರು ತಮ್ಮ ನಗೆಗುಳಿಯ ಪ್ರತಿಭೆಯನ್ನು ಪ್ರದರ್ಶಿಸಿ 2ನೇ ಸ್ಥಾನಗಳಿಸುವ ಮೂಲಕ ಕರುನಾಡಿಗೆ ಹಾಸ್ಯಗಳ ರಸದೌತಣ ಉಣಬಡಿಸಿ ಹಾಸನ ಜಿಲ್ಲೆಗೆ ಕೀರ್ತಿ ತಂದು ಕಲಾ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಹಾಗೂ ಕನ್ನಡ ಚಲನಚಿತ್ರ ರಂಗದಲ್ಲಿ ಹಾಸ್ಯ ಕಲಾವಿದರ ಫ್ಯೂಚರ್ ಸ್ಟಾರ್ಸ್ ಆಗಿ ಬಿಂಬಿತರಾಗಿದ್ದಾರೆ

ಮಡೆನೂರು ಮನು ಹಾಸನ ತಾಲ್ಲೂಕಿನ ಮಡೆನೂರು ಗ್ರಾಮದವರು ತಾಯಿ ಅನುಸೂಯ ಹಾಗೂ ತಂದೆ ಚಂದ್ರೇಗೌಡ ಎಂಬುವರ ಮಗನಾದ ಮನು ಓದಿದ್ದು ಕೇವಲ 9ನೇ ತರಗತಿಯಾದರೂ ತನ್ನಲ್ಲಿದ್ದ ಪ್ರತಿಭೆಯ ಮೂಲಕ ಇಷ್ಟು ಎತ್ತರಕ್ಕೆ ಬೆಳೆದಿರುವುದು ಜಿಲ್ಲೆಯ ಎಲ್ಲ ಮೆಚ್ಚುಗೆ ಪಡೆದಿರೋದು ಒಂದಾದರೆ ., ಕಳೆದ ವಷ್ಟೆ ಮದುವೆ ಯಾಗಿ ಹೊಸ ಜೀವನ ಆರಂಭಿಸಿದ ನಮ್ಮ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸಂತೋಷ್ ಮತ್ತೊಬ್ಬ ಹಾಸ್ಯ ಚಟಾಕಿಗಳ ಸರದಾರ

ಮೊದ ಮೊದಲು ಆರ್ಕೇಸ್ಟಾ ಇತರೆ ಮನೋರಂಜನಾ ಕಾರ್ಯಕ್ರಮ ಗಳಲ್ಲಿ ಮಿಮಿಕ್ರಿ, ಕಾಮಿಡಿ ನಟನೆ ಮಾಡುವ ಮೂಲಕ ಗಮನಸೆಳೆದಿದ್ದ ಮನು  ನಂತರದಲ್ಲಿ ಜೀ ವಾಹಿನಿಯಲ್ಲಿ ನಡೆಯುತ್ತಿರುವ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನ ಮೊದಲ ಸೀಸನ್‌ನಲ್ಲಿ ಪ್ರಥಮ ಸ್ಥಾನಗಳಿಸಿದ್ದವರು , 

ಈ ಸೀಸನ್‌ನ ಒಂದೇ ತಂಡದಲ್ಲಿದ್ದ  ಹೊಳೇನರಸೀಪುರ ಸಂತೋಷ್, ಮಂಥನ, ಅನಿಷ್, ಸಂಜು ಬಸಯ್ಯ, ರಾಜಣ್ಣ ಇವರುಗಳು ಜೊತೆಗೂಡಿ ಸಾಕಷ್ಟು ಮನೋತಂಜನಾ ಪ್ಯಾಕ್ ವೀಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಂತೆ ಮಾಡಿತ್ತು , ಈ ತಂಡದ ನಿರ್ದೇಶಕರಾಗಿ ಏಕಾಂಗಿ ಗಡ್ಡ ಸತೀಶ್, ಶರಣಯ್ಯ ಇಬ್ಬರೂ ಕೂಡ ಇವರಿಗೆ ಮಾರ್ಗ ದರ್ಶಕರಾಗಿ ಸಹಕಾರ ನೀಡಿದ್ದರ ಬಗ್ಗೆ ನಮ್ಮ ಹಾಸನ್ ನ್ಯೂಸ್ ತಂಡದ ಬಳಿ ಹೇಳಲು ಹೆಮ್ಮೆಪಟ್ಟರು

ಕಾಮಿಡಿ ಕಿಲಾಡಿ ಶೋನಲ್ಲಿ ರನ್ನರ್ ಅಪ್ ಆಗಿ ಗೆಲುವು ಪಡೆದ ನಮ್ಮ ಹಾಸನದ ಮಡೆನೂರು ಮನು ಹಾಗೂ ಸಂತೋಷ್ ತಂಡಕ್ಕೆ ಹಾಸನ ಜನತೆಯ ಪರವಾಗಿ ಅಭಿನಂದನೆಗಳು

ಹೊಸ ಮನೆ , ಮಗಳ ಜನನ ಇತ್ತೀಚೆಗೆ ಸ್ಪರ್ಧೆಯಲ್ಲಿ ಗೆದ್ದ ಖುಷಿ ಜವಾಬ್ದಾರಿ ಹಿಮ್ಮಡಿಗೊಳಿಸಿದೆ ಎಂದರು.. ಈಗಾಗಲೇ 10ಕ್ಕು ಹೆಚ್ಚು ಕನ್ನಡ ಚಲನ ಚಿತ್ರಗ ಳಲ್ಲಿ ನಟಿಸಿದ ಮನು, ಅಲ್ಲೂ ಸಹ ಜನ ಮೆಚ್ಚಿಗೆಗಳಿಸಿ, ಮುಂದಿನ ದಿನಗಳಲ್ಲಿ  ಇನ್ನಷ್ಟು ಸದಭಿರುಚಿಯ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಹೆಬ್ಬಯಕೆ ವ್ಯಕ್ತಪಡಿಸಿದರು

ಪ್ರಸ್ತುತ ಲಾಕ್ ಡೌನ್ ಬಿಡುವಿನ ಸಮಯದಲ್ಲಿ ತಮ್ಮ ಸ್ವಗ್ರಾಮದಲ್ಲಿರುವ ತನ್ನ ಜಮೀನಿನಲ್ಲಿ ಕೆಲಸಮಾಡಿದ್ದ ಹಳೆಯದನ್ನು ಯಾವುದು ಮರೆತಿಲ್ಲ ,  ಮೇಕೆ ಫಾರಂ ಮಾಡಿದ್ದು, ಜೊತೆಗೆ ರೈತರ ಒಡನಾಟವು ಇರುವುದು ಅವರ ಸರಳತೆ , ಶ್ರಮಪಡುವ ಮನಸ್ಥಿತಿ ಮಾದರಿಯಾಗಲಿದೆ. ಇವರಿಗೆ ಇನ್ನೂ ಹೆಚ್ಚಿನ ಕಲಾ ಅವಕಾಶಗಳು ಇವರ ಪ್ರತಿಭೆಗೆ ದಕ್ಕಲಿ ಎಂದು ಆಶೀಸೋಣ.

ಧನ್ಯವಾದಗಳು

LEAVE A REPLY

Please enter your comment!
Please enter your name here