ಹಾಸನ : 2020-21 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರವು ಆಯೋಜಿಸಲಾಗಿದ್ದಂತಹ, ರಾಜ್ಯಮಟ್ಟದ ‘ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ’ (NTSE) ಯಲ್ಲಿ, ರಾಯಲ್ ಅಪೋಲೊ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿಯಾದಂತಹ, ಕೆ. ಅಭಿಜ್ಞಾ ಇವರು ಆಯ್ಕೆಯಾಗಿರುತ್ತಾರೆ. ಈ ಮೂಲಕ NCERT ಯವರು ನಡೆಸುವ ರಾಷ್ಟ್ರಮಟ್ಟದ NTS ಪರೀಕ್ಷೆಗೆ ಅರ್ಹರಾಗಿರುತ್ತಾರೆ. ಈ ಸ್ಪರ್ಧಾತ್ಮಕ ಶೈಕ್ಷಣಿಕ ಸಾಧನೆಯಿಂದ ಇವರು ಜಿಲ್ಲೆಗೆ ಮತ್ತು ಶಾಲೆಗೆ ಕೀರ್ತಿ ತಂದಿರುತ್ತಾರೆ. ರಾಷ್ಟ್ರಮಟ್ಟದ ಅಂತಿಮ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ, ಪಿ.ಯು.ಸಿ ಇಂದ ಪಿ.ಎಚ್.ಡಿ ಹಂತದ ಶಿಕ್ಷಣದವರೆಗೆ ‘ಪ್ರತಿಭಾನ್ವಿತ ವಿದ್ಯಾರ್ಥಿ ವೇತನ’ದ ಸೌಲಭ್ಯವಿರುತ್ತದೆ. ನಮ್ಮ ಹಾಸನದ ರಾಯಲ್ ಅಪೊಲೊ ಶಾಲೆಯ
ಕೆ.ಅಭಿಜ್ಞಾರವರಿಗೆ ಹಾಗೂ ಇವರ ಪೋಷಕರಾದ ಕೇಶವಮೂರ್ತಿ- ವಿಜಯಕುಮಾರಿ ದಂಪತಿಗಳಿಗೆ, ಶಾಲಾ ಆಡಳಿತ ಮಂಡಳಿ, ಸ್ಪರ್ಧಾತ್ಮಕ ಪರೀಕ್ಷೆಯ ಮಾರ್ಗದರ್ಶಕರಾದ ಬಿ. ಶಿವಕುಮಾರ್, ಬೋಧಕ, ಬೋಧಕೇತರ, ಸಿಬ್ಬಂದಿ ವರ್ಗದವರೆಲ್ಲರ ಪರವಾಗಿ ಹೃತ್ಪೂರ್ವಕವಾದ ಅಭಿನಂದನೆಗಳು , ಹಾಸನ ಜನತೆಯ ಪರವಾಗಿ ಅಭಿಜ್ಞ ಅವರ ಮುಂದಿನ ದಿವ್ಯ ಭವಿಷ್ಯಕ್ಕೆ ಶುಭಾಶಯಗಳು