ಹಾಸನ / ಚನ್ನರಾಯಪಟ್ಟಣ : ಪ್ರತಿವರ್ಷ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯುತ್ತಿತ್ತು ಆದರೆ ಈ ವರ್ಷ ಸರ್ಕಾರ ರಥೋತ್ಸವವನ್ನು ನಿಷೇಧಿಸಿರುವ ಹಿನ್ನೆಲೆ : ಸಂಪ್ರದಾಯ ಬಿಡಬಾರದು ಎಂಬಂತೆ
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಹೋಬಳಿಯ ಬೂಕನಬೆಟ್ಟದ ರಂಗನಾಥಸ್ವಾಮಿಯ 91ನೇ ವರ್ಷದ ಬ್ರಹ್ಮರಥೋತ್ಸವವು ಬುಧವಾರ ಕೆಲವೇ ಭಕ್ತರ ಸಮ್ಮುಖದಲ್ಲಿ 10 ಮೀಟರ್ ಮಾತ್ರ ರಥವನ್ನು ಎಳೆದು ಸರಳವಾಗಿ ನಡೆಸಲಾಯಿತು
ಸುಪ್ರಭಾತ, ದಿವ್ಯ ಅಲಂಕಾರ, ನಿತ್ಯಸೇವೆ, ಅಗ್ನಿ ಪ್ರತಿಷ್ಠೆ, ಕಳಶ ಪ್ರತಿಷ್ಠೆ , ಮಂಗಳ ವಾದ್ಯದೊಂದಿಗೆ, ಭಾವ ಭಕ್ತಿಯಿಂದ ರಥವನ್ನು ಬೆಳಿಗ್ಗೆ 9 ಗಂಟೆಗೆ ಎಳೆದರು. ರಥವು ಚಲಿಸುವಾಗ ಭಕ್ತರು ಬಾಳೆಹಣ್ಣು ಮತ್ತು
ಧವನವನ್ನು ಎಸೆದು, ಜಾತ್ರೆಗೆ ಬಂದವರಿಗೆ ಉಪಹಾರ ನೀಡುವ ಮೂಲಕ ಕೆಲವು ಭಕ್ತರು ದೇವರಿಗೆ ಹರಕೆ ಸಲ್ಲಿಸಿದರು
ಬೆಂಗಳೂರು, ಮಂಡ್ಯ, ಮೈಸೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ರಥೋತ್ಸವ ಬೇಗ ಮುಗಿದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ತಾಲ್ಲೂಕು ಆಡಳಿತವು ಕೋವಿಡ್–19 ಹಿನ್ನೆಲೆಯಲ್ಲಿ ಇದೇ ತಿಂಗಳ 6ರಂದು ರದ್ದುಪಡಿಸಿರುವುದಾಗಿ ತಿಳಿಸಿತ್ತು.