ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ಕಳೆದ ಶನಿವಾರದಿಂದ ಈ ವರೆಗೂ ಅನವಶ್ಯಕವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬರೋಬ್ಬರಿ 200 +.. ದ್ವಿಚಕ್ರ ವಾಹನ ಗಳ ಪೊಲೀಸರ ವಶಕ್ಕೆ
• ” ಬೆಳಿಗ್ಗೆ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ , ಆದರೂ ಜನರು 10 ಗಂಟೆ ನಂತರವೂ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದರು , ಮಹಾತ್ಮ ಗಾಂಧಿ ವೃತ್ತ, ಚೆನ್ನಾಂಬಿಕ ವೃತ್ತ, ಡಾ. ಅಂಬೇಡ್ಕರ್ ವೃತ್ತದಲ್ಲಿ ಅನವಶ್ಯಕವಾಗಿ ಓಡಾಡುತ್ತಿದ್ದ ದ್ವಿಚಕ್ರ ವಾಹನಗಳ ವಶಕ್ಕೆ ಪಡೆಯಲಾಗಿದೆ ., ಸಂಜೆ ದಂಡ ವಿಧಿಸಿ ಎಚ್ಚರಿಸಿ ಕೆಲವು ವಾಹನ ಬಿಟ್ಟಿದ್ದೇವೆ ” – PSI ಕುಮಾರ್
• ಮೇ 10 ಇಂದಿನಿಂದ ಕಟ್ಟುನಿಟ್ಟಿನ ಲಾಕ್ಡೌನ್ ಇದೆ. ಅನವಶ್ಯಕವಾಗಿ ಓಡಾಡುವ ಹಾಗೂ ವಾಹನಗಳಲ್ಲಿ ಸಂಚರಿಸುವ ಜನರನ್ನು ಬಂಧಿಸಲು ಅವಕಾಶವಿದೆ. ಎಫ್ಐಆರ್ ದಾಖಲಿಸಿ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯು ತ್ತೇವೆ “

ಹೊಳೇನರಸೀಪುರ ಪಟ್ಟಣದ ಪೇಟೆ ಮುಖ್ಯ ರಸ್ತೆಯ ಕೆಲವು ಚಿನ್ನ ಬೆಳ್ಳಿ ಅಂಗಡಿ, ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರನ್ನು ಅಂಗಡಿ ಒಳಕ್ಕೆ ಕರೆದು, ರೋಲಿಂಗ್ ಶಟರ್ ಹಾಕಿಕೊಂಡು ವ್ಯಾಪಾರ ಮಾಡುತ್ತಿರುವುದು ಗೊತ್ತಾಗಿದೆ. ಇಂದಿನಿಂದ ಇಂತಹ ಪ್ರಕರಣ ಗಳು ಕಂಡು ಬಂದರೆ ಪ್ರಕರಣ ದಾಖಲಿಸುತ್ತೇವೆ ಎಂದರು