ಬೇಲೂರಿನ ಅನ್ಕೆ ಸಂತೆಯಲ್ಲಿ ಅಕ್ರಮವಾಗಿ ಹಾಸನ ಜಿಲ್ಲೆಯ ಎಲ್ಲಾ ಕಸಾಯಿಖಾನೆಗಳಿಗೆ ಸಾಗಿಸಲು ಗೋವುಗಳ ಸಂಗ್ರಹಿಸಿಡಲು ನಿರ್ಮಿಸಿದ್ದ ಶೆಡ್ ಅನ್ನು ಬಜರಂಗದಳ ಕಾರ್ಯಕರ್ತರ ಆರೋಪದ ತನಿಖೆ ನಂತರ ಸಾರ್ವಜನಿಕರ ಸಮ್ಮುಖದಲ್ಲಿ ಪೋಲಿಸರು ಧ್ವಂಸ ಮಾಡಿದ್ದಾರೆ.
ಈ ಶೆಡ್ ನಲ್ಲಿ ಪ್ರಸ್ತುತ 40 ಅಧಿಕ ರಾಸುಗಳು ರಕ್ಷಣೆ ಮಾಡಲಾಗಿದೆ ಈ ಶೆಡ್ ನಿಂದಲೇ Ashok Leyland KA 19 ವಾಹನದಲ್ಲಿ ತುಂಬಿಸಿ ಬೇಲೂರಿನ ಕಸಾಯಿಖಾನೆ’ಗೆ ಸಾಗಿಸುತ್ತಿದ್ದಾಗ ಬೇಲೂರಿನ ಪೋಲಿಸ್ ಠಾಣೆ ಮುಂಭಾಗ ಬಜರಂಗದಳ ಕಾರ್ಯಕರ್ತರು ವಾಹನವನ್ನು ಹಿಡಿದಿದ್ದಾರೆ ಈ ವಾಹನದಲ್ಲಿ 5 ಹಸುಗಳನ್ನು ಒಂದರ ಮೇಲೊಂದು ತುಂಬಿಸಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ., ಬೇಲೂರಿನ ಬಜರಂಗದಳ ಸಂಚಾಲಕರು ಸುದ್ದಿಗಾರರೊಂದಿಗೆ ಮಾತನಾಡಿ ಪ್ರಸ್ತುತ 10 ಕ್ಕೂ ಅಧಿಕ ಕಸಾಯಿಖಾನೆಗಳಿದ್ದು ಎಲ್ಲವನ್ನು ಅನಧಿಕೃತವಾಗಿ ಸಂಬಂಧ ಪಟ್ಟ ಪುರಸಭೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಕ್ರಮ ಕೈಗೊಳ್ಳುತ್ತಿಲ್ಲ
ಅದರಿಂದ ಈ ಬಗ್ಗೆ ಗಮನ ಹರಿಸಿ ಕಸಾಯಿಖಾನೆಗಳನ್ನು ತೆರವು ಗೊಳಿಸಬೇಕು ಇಲ್ಲದಿದ್ದರೆ ಬೇಲೂರು ತಾಲ್ಲೂಕು ಬಂದ್ ಮಾಡಿ ಪ್ರತಿಭಟಿಸಲಾಗುವುದು ಈ ಕಾರ್ಯಾಚರಣೆಯಲ್ಲಿ ಸಂಪೂರ್ಣವಾಗಿ ಸಹಕರಿಸಿದ ಪೋಲಿಸ್ ಇಲಾಖೆಗೆ ಅಭಿನಂದನೆಗಳು…ಎಂದು ವಿವರಿಸಿದ್ದಾರೆ !!