ಫ್ಯಾಷನ್ ಲೋಕಕ್ಕೆ ಕಾಲಿಟ್ಟ ಲಂಕೇಶ್ ಕುಟುಂಬದ ಕುಡಿ
ಫ್ಯಾಷನ್ ಲೋಕದಲ್ಲಿ ಮಿಂಚುತ್ತಿರೋ ಇಂದ್ರಜಿತ್ ಲಂಕೇಶ್ ಪುತ್ರ
ಸಿನಿಮಾರಂಗಕ್ಕೆ ಕಾಲಿಡುವ ಮುನ್ನವೇ ಫ್ಯಾಷನ್ ಇಂಡಸ್ಟ್ರಿಯಲ್ಲಿ ಸಮರ್ಜಿತ್ ಲಂಕೇಶ್ ಬ್ಯುಸಿ
ವಿದ್ಯಾಭ್ಯಾಸ ಮುಗಿಸಿ ಸಿನಿಮಾರಂಗಕ್ಕೆ ಎಂಟ್ರಿಕೊಡಲು ಸಿದ್ಧತೆ ಮಾಡಿಕೊಂಡಿರೋ ಸಮರ್ಜಿತ್ ಲಂಕೇಶ್ ..
ಡ್ಯಾನ್ಸ್, ಫೈಟ್ಸ್, ಆ್ಯಕ್ಟಿಂಗ್ ಟ್ರೈನಿಂಗ್ ಪಡೆದು ರೆಡಿಯಾಗಿರೋ ಇಂದ್ರಜಿತ್ ಪುತ್ರ
ಶೀಘ್ರದಲ್ಲೇ ಸಿನಿಮಾ ಇಂಡಸ್ಟ್ರಿಗೆ ಹೀರೋ ಆಗಿ ಎಂಟ್ರಿಕೊಡಲಿರೋ ಸ್ಟಾರ್ ನಿರ್ದೇಶಕನ ಪುತ್ರ
ಸದ್ಯ ಫ್ಯಾಷನ್ ಲೋಕದಲ್ಲಿ ಮಾಡೆಲ್ ಆಗಿ ಶೈನ್ ಆಗ್ತಿರೋ ಸಮರ್ಜಿತ್ ಲಂಕೇಶ್
ಮಗನ ಬೆಳವಣಿಗೆಗೆ ಸಂತಸ ವ್ಯಕ್ತಪಡಿಸಿರೋ ಇಂದ್ರಜಿತ್
ಈಗಾಗಲೇ ಕಾರ್ಪೋರೇಟ್ ಆಡ್ ಶೂಟ್ ಗಳಲ್ಲಿ ಗುರುತಿಸಿಕೊಂಡಿದ್ದಾರೆ ಸಮರ್ಜಿತ್
ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ದರಾದ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್
ಸ್ಯಾಂಡಲ್ ವುಡ್ ಅಂಗಳಕ್ಕೆ ಮತ್ತೊಬ್ಬ ಯುವ ನಟನ ಎಂಟ್ರಿ
ನಟ ಹಾಗೂ ಸ್ಟಾರ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಿನಿಮಾ ರಂಗಕ್ಕೆ ಕಾಲಿಡಲು ಸದ್ದಾಗಿ ಸಿದ್ದರಾಗಿದ್ದಾರೆ… ಈಗಾಗಲೇ ಫ್ಯಾಷನ್ ಲೋಕದಲ್ಲಿ ಮಿಂಚಿನ ಸಂಚಲನವನ್ನು ಮೂಡಿಸಿರುವಂತಹ ಸಮರ್ಜಿತ್ ಇಂದ್ರಜಿತ್ ಚಿತ್ರರಂಗಕ್ಕೂ ಶೀಘ್ರದಲ್ಲೇ ಪಾದಾರ್ಪಣೆ ಮಾಡಲಿದ್ದಾರೆ…
ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಜಾಹೀರಾತುಗಳಲ್ಲಿ ಭಾಗಿಯಾಗಿರುವಂತಹ ಸಮರ್ಜಿತ್ ಇಂದ್ರಜಿತ್ ಚಿತ್ರರಂಗಕ್ಕೆ ಬರಲು ಸಕಲ ತಯಾರಿಯನ್ನು ಮಾಡಿಕೊಂಡಿದ್ದಾರೆ …ಮಾರ್ಷಲ್ ಆರ್ಟ್ಸ್, ಸ್ಟಂಟ್ ಡ್ಯಾನ್ಸ್ ಹೀಗೆ ಸಾಕಷ್ಟು ವಿಭಾಗದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದು… ಪರ್ಫೆಕ್ಟ್ ಆಕ್ಟರ್ ಆಗಿ ಚಿತ್ರರಂಗಕ್ಕೆ ಕಾಲಿಡಬೇಕು ಎಂದು ನಿರ್ಧಾರ ಮಾಡಿದ್ದಾರೆ… ಈಗಾಗಲೇ ಸಮರ್ಜಿತ್ ತಂದೆ ಸ್ಯಾಂಡಲ್ವುಡ್ ಹಾಗೂ ಬಾಲಿವುಡ್ ನಲ್ಲಿ ಸ್ಟಾರ್ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು ಮಗ ಕೂಡ ತಂದೆಯಂತೆ ಚಿತ್ರರಂಗದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳಲು ತಯಾರಿ ಮಾಡಿಕೊಂಡಿದ್ದಾರೆ…
ಇತ್ತೀಚಿಗಷ್ಟೇ ರೆಡ್ ಎಫ್ಎಂ ಮ್ಯೂಸಿಕ್ ಕಾನ್ಸರ್ಟ್ ನಲ್ಲಿ ಸಮರ್ಜಿತ್ ರ್ಯಾಂಪ್ ವಾಕ್ ಮಾಡುವ ಮೂಲಕ ಫ್ಯಾಷನ್ ಲೋಕದಲ್ಲಿಯೂ ತೊಡಗಿಸಿಕೊಂಡಿರೋಸೂಚನೆ ಕೊಟ್ಟಿದ್ದಾರೆ…ಇನ್ನು ಸಮರ್ಜಿತ್ ಚಿತ್ರರಂಗಕ್ಕೆ ಬೇಕಿರುವಂತೆ ಥಿಯೇಟರ್ ನಲ್ಲಿ ಪದವಿ ಪಡೆದುಕೊಂಡಿದ್ದು ಆಕ್ಟಿಂಗ್ ವರ್ಕ್ ಶಾಪ್ ಅನ್ನು ನ್ಯೂ ವರ್ಕ್ ನಲ್ಲಿ ಮುಗಿಸಿಕೊಂಡು ಬಂದಿದ್ದಾರೆ ಈಗಾಗಲೇ ಸಾಕಷ್ಟು ಬ್ರಾಂಡ್ ಗಳಿಗೆ ಮಾಡೆಲ್ ಕೆಲಸ ಮಾಡುತ್ತಿದ್ದಾರೆ… ರಂಗಶಂಕರ ರಂಗಮಂದಿರದಲ್ಲಿ ಸಾಕಷ್ಟು ನಾಟಕಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ… ಸಮರ್ಜಿತ್ ಚಿತ್ರರಂಗದ ಎಂಟ್ರಿಗೆ ಈಗಾಗಲೇ ಇಂದ್ರಜಿತ್ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದು ಶೀಘ್ರದಲ್ಲೇ ಕನ್ನಡ ಸಿನಿಮಾರಂಗಕ್ಕೆ ತಮ್ಮ ಪುತ್ರನನ್ನ ನಾಯಕನಾಗಿ ಪರಿಚಯಿಸಲಿದ್ದಾರೆ