ಹಾಸನ / ಬೇಲೂರು : ದಿನಾಂಕ 16.ಡಿ.2021 ರಂದು ಶಾಲಾವರಣದಲ್ಲಿ ಯುವ ಬ್ರಿಗೇಡ್ ವತಿಯಿಂದ ಇನ್ಫೋಸಿಸ್ ಫೌಂಡೇಶನ್ ಆಯೋಗದಲ್ಲಿ ಕೈಹಿಡಿದು ನಡೆಸೆನ್ನನು ಎಂಬ ಕಾರ್ಯಕ್ರಮದ ಅಡಿಯಲ್ಲಿ ಶಾಲೆಯ ಮಕ್ಕಳಿಗೆ ಟ್ಯಾಬ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಪುಷ್ಪಗಿರಿ ಮಹಾಸಂಸ್ಥಾನ ಶ್ರೀ ಮಠದ ಪುಷ್ಪಗಿರಿ ಇವರು ಇಂದಿನ ತಾಂತ್ರಿಕ ಯುಗದಲ್ಲಿ ಇಂತಹ ಟ್ಯಾಬ್ ಗಳ ಅವಶ್ಯಕತೆ ಮಕ್ಕಳ ಕಲಿಕೆಗೆ ಪೂರಕವಾಗಿದ್ದು ” ಓದು ಒಕ್ಕಲು , ಬುದ್ಧಿ ಮಕ್ಕಾಲು ” ಎಂಬಂತೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು ಮಕ್ಕಳು ಅತಿಯಾದ ಮೊಬೈಲ್ ಬಳಕೆಯಿಂದ ದೃಷ್ಟಿ ದೋಷ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಇದರಿಂದ ದೂರವಿರಬೇಕೆಂದು ಕಿವಿಮಾತು ಹೇಳಿದರು ಯುವ ಬ್ರಿಗೇಡ್ ನ ಸಮಾಜಮುಖಿ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸಿದರು ಅಲ್ಲದೆ ಮಠದ ವತಿಯಿಂದ ಗ್ರಾಮೀಣ ಭಾಗದ ಬಡಮಕ್ಕಳ ಶಿಕ್ಷಣಕ್ಕೆ ಸೂಕ್ತ ನೆರವು ನೀಡಲಾಗುವುದು ಎಂದು ತಿಳಿಸಿದರು
ಯುವ ಬ್ರಿಗೇಡ್ ನ ಗಣೇಶ್ HG ಜಿಲ್ಲಾ ಸಂಚಾಲಕ್ , ವಿಭಾಗ ಸಂಚಾಲಕ ಲೋಹಿತ್ ಹಾಗೂ ವಿಭಾಗ ಸಂಚಾಲಕರಾದ ಶ್ರೀನಿವಾಸ್ ರವರು ಯುವ ಬ್ರಿಗೇಡ್ ಸಮಾಜಮುಖಿ ಕೆಲಸಗಳು ಹಾಗೂ ಅವುಗಳ ಬಳಕೆಯಿಂದ ಗ್ರಾಮೀಣ ಭಾಗದ ವಿದ್ಯಾಭ್ಯಾಸಕ್ಕೆ ಮಕ್ಕಳ ಕಲಿಕೆಗೆ ತಿಳಿಸಿದರು
ಬೇಲೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ,, ಶ್ರೀಯುತ ಲೋಕೇಶ್ ಎಸ್ಆರ್ ಅವರು ಮಕ್ಕಳಿಗೆ ಕೌಶಲ್ಯಾಧಾರಿತ ಶಿಕ್ಷಣ ನೀಡಬೇಕೆಂದು ತಿಳಿಸುತ್ತಾ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲೇ ಇದೆ ಎಂದು ತಿಳಿಸುವ ಒಂದು ಕಥೆ ಸಾರವನ್ನು ಹೇಳಿದರು ಆರಕ್ಷಕ ಉಪ ನಿರೀಕ್ಷಕರು ಅವರು ಅಪರಾಧಗಳು ಹಾಗೂ ಸುರಕ್ಷತೆಯ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು
ನಾಮ ನಿರ್ದೇಶಕ ಸದಸ್ಯರಾದ ಶ್ರೀ ಸೋಮಸುಂದರ್ ಎಂವಿ ಹಾಗೂ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಸಿಬ್ಬಂದಿ ವರ್ಗ ಹಾಗೂ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಸ್ಥಳ ಸರ್ಕಾರಿ ಪ್ರೌಢಶಾಲೆ ಎಚ್ ಮಲ್ಲಾಪುರ ಬೇಲೂರು ತಾಲೂಕು ಹಾಸನ ಜಿಲ್ಲೆ