ಹಾಸನ : ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ನಗರಸಭಾ ಉಪಾಧ್ಯಕ್ಷ, ಇರ್ಷಾದ್ ಪಾಷ ರವರು ಇಂದು ದೈವಾದೀನರಾಗಿದ್ದಾರೆ

0

ಬಹು ಅಂಗಾಂಗವೈಫಲ್ಯದಿಂದ ಬಳಲುತ್ತಿದ್ದ ಇವರು ಮಂಗಳೂರು ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರು ಫಲಕಾರಿಯಾಗಿರಲಿಲ್ಲ.


ಜೆಡಿಎಸ್ ಪಕ್ಷದ ಕಟ್ಟಾಳಾಗಿ ನಿಷ್ಠೆಯಿಂದ ಕೆಲಸ ಮಾಡುವ ಪಕ್ಷದ ಕಟ್ಟಾಳಾಗಿದ್ದರು ಇವರು ಜೆಡಿಎಸ್ ಪಾಳಯದಲ್ಲಿ. ಇವರ ಪತ್ನಿ ನಗರಸಭೆಯ ಹಾಲಿ ಸದಸ್ಯರಾಗಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಸ್ವರೂಪ್ರಕಾಶ್ ಪರ ಗಟ್ಟಿಯಾಗಿ ನಿಂತಿದ್ದರು. ಚುನಾವಣೆ ಸಂದರ್ಭದಲ್ಲಿ ಸಕ್ರಿಯವಾಗಿ ಓಡಾಡುತ್ತಿದ್ದ ಇರ್ಷಾದ್ ಪಾಶ, ನಂತರದಲ್ಲಿ ಇವರ ಆರೋಗ್ಯ ಬಹಳಷ್ಟು ಹದಗೆಟ್ಟಿತ್ತು.

ಇವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ವಾರ್ಡ್ ನ ಸದಸ್ಯ ಪ್ರಾರ್ಥಿಸಿದರು .

ಶಾಸಕ ಸ್ವರೂಪ್ ಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here