ಹೇಮಾವತಿ ಪ್ರತಿಮೆ ಬಳಿಯಿಂದ ಡಿ.ಸಿ ಕಛೇರಿಯ ವರೆಗೆ ITI ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆ

0

ಕೋವಿಡ್ ಲಾಕ್‌ಡೌನ್ ಪರಿಣಾಮದಿಂದಾಗಿ ತರಗತಿಗಳನ್ನು ನಡೆಸದೆ ಐಟಿಐ ಪರೀಕ್ಷೆಯನ್ನು ನಡೆಸಿರುವುದನ್ನು ವಿರೋಧಿಸಿ ಹಾಗೂ ಎಲ್ಲಾ ಐಟಿಐ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿ ನೀಡಬೇಕಾಗಿ ಆಗ್ರಹಿಸಿ ಹೇಮಾವತಿ ಪ್ರತಿಮೆ ಬಳಿಯಿಂದ ಡಿ.ಸಿ ಕಛೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ.

ರಾಜ್ಯದಲ್ಲಿ ಐಟಿಐ ವಿದ್ಯಾರ್ಥಿಗಳೂ ಸಹಿತ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ಕಳೆದ ಒಂದುವರೆ ವರ್ಷದಿಂದ ಐಟಿಐ ವಿದ್ಯಾರ್ಥಿಗಳಿಗೆ ಸಮರ್ಪಕವಾ ತರಗತಿಗಳು ನಡೆದಿರುವುದಿಲ್ಲ ಅಲ್ಲದೆ ಪ್ರಯೋಗಿಕ ತರಬೇತಿಗಳು, ತರಗತಿಗಳನ್ನೂ ಸಹಿತ ನಡೆಸಿರುವುದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಪಠ್ಯ ಙನ ಹಾಗೂ ಕೌಶಲ್ಯಗಳನ್ನು ಪಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅಲ್ಲದೆ ಪರೀಕ್ಷೆ ನಡೆಸಬೇಕೆ ಬೇಡವೆ ಎಂಬುದರ ಕುರಿತು ಇಲಾಖೆ ಸ್ಪಷ್ಟ ನಿರ್ಧಾರ ಕೈಗೊಳ್ಳದೆ ಏಕಾಏಕಿ ಪರೀಕ್ಷೆ ನಡೆಸುವ ತೀರ್ಮಾನ ತೆಗೆದುಕೊಂಡಿದ್ದು ಇದೆಲ್ಲದರ ನಡುವೆಯೆ ಪ್ರಥಮ ವರ್ಷದ ಮತ್ತು ದ್ವಿತೀಯ ವರ್ಷದ ವಾರ್ಷಿಕ ಪರಿಕ್ಷೇಗಳನ್ನು ನಡೆಸಲಾಗಿದ್ದು ಇದರ ಪರಿಣಾಮದಿಂದಾಗಿ ಹಲವಾರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಮತ್ತು ಹೆಚ್ಚಿನ ವಿದ್ಯಾರ್ಥಿಗಳು ಅತ್ಯಂತ ಕಡಿಮೆ ಅಂಕಗಳನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳಿಗೆ ತರಬೇತಿಯನ್ನೆ ನೀಡದೆ ಪರೀಕ್ಷೆಯನ್ನು ನಡೆಸಿರುವುದು ಸರಿಯಾದ ಕ್ರಮವಾಗಿರುವುದಿಲ್ಲ. ಆದ್ದರಿಂದ ಈ ಸಾಲಿನಲ್ಲಿ ಬಂದಿರುವ ಪಲಿತಾಂಶವನ್ನು ಅಮಾನ್ಯಗೊಳಿಸಬೇಕು ಹಾಗೂ ಡಿಪ್ಲೋಮಾ ಹಾಗೂ ಇಂಜಿನಿಯಂರಿಂಗ್, ಎಸ್.ಎಸ್.ಎಲ್.ಸಿ, ಪದವಿಪೂರ್ವ ವಿದ್ಯಾರ್ಥಿಗಳಿಗೆ ತೆಗೆದುಕೊಂಡಿರುವ ಕ್ರಮದಂತೆಯೇ ಎಲ್ಲಾ ವಿದ್ಯಾರ್ಥಿಗಳನ್ನು ಮುಂದಿನ ಶೈಕ್ಷಣಿಕ ತರಗತಿಗೆ ಬಡ್ತಿ ನೀಡುವಂತೆ ಒತ್ತಾಯಿಸಿ ಇಂದು ಹಾಸನದ ಜಿಲ್ಲಾದಿಕಾರಿಗಳ ಕಛೇರಿಯ ಎದರು ಪ್ರತಿಭನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಹಾಸನ್, ಸಹ ಕಾರ್ಯದರ್ಶಿ ವಿವೇಕ್, ಹೇಮಂತ್ ಸ್ವರೂಪ್, ಪ್ರಮಿತ್ , ಹೇಮಂತ್ ,ಗೌತಮ್ , ವಿನಯ್ ,ವೇಣು, ಪುಷ್ಪಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here