ಮಾರನಹಳ್ಳಿಯಿಂದ ದೋಣಿಗಾಲ್‍ವರೆಗಿನ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ

0

ಹಾಸನ sep1 :  ರಾಷ್ಟ್ರೀಯ ಹೆದ್ದಾರಿ 75(ರಾ.ಹೆ.48) ರ ಬೆಂಗಳೂರು- ಮಂಗಳೂರು ರಸ್ತೆಯ ಮಾರನಹಳ್ಳಿಯಿಂದ ದೋಣಿಗಾಲ್‍ವರೆಗಿನ ರಸ್ತೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ದೃಷ್ಠಿಯಿಂದ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬಸ್‍ಗಳು ಹಾಗೂ ತುರ್ತು ವಾಹನಗಳು (ಆಂಬುಲೆನ್ಸ್ ಮತ್ತು ಅಗ್ನಿ ಶಾಮಕ ವಾಹನಗಳು) ಹೊರತುಪಡಿಸಿ ಉಳಿದ ಎಲ್ಲಾ ಬಗೆಯ ವಾಹನಗಳ ಸಂಚಾರವನ್ನು ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ನಿರ್ಬಂಧಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆರ್.ಗಿರೀಶ್ ಅವರು  ಆದೇಶಿಸಿದ್ದಾರೆ.

ಪ್ರಸ್ತಾಪಿತ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿರುವ ಬಗ್ಗೆ ಅವಶ್ಯವಿರುವ ಸೂಚನ ಫಲಕಗಳನ್ನು ಅಳವಡಿಸಲು ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕಗೊಳಿಸಲು ಪೊಲೀಸ್ ಅಧೀಕ್ಷಕರು  ಹಾಸನ ಇವರು ಹಾಗೂ ಕರ್ನಾಟಕ  ಮೋಟಾರು ವಾಹನಗಳ ನಿಯಮಾನುವಳಿ ಪ್ರಕಾರ ಅಧಿಕಾರವುಳ್ಳವರಾಗಿರುತ್ತರೆ. ಯೋಜನಾ ನಿರ್ದೇಶಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಸನ ಇವರ ವರದಿಯಂತೆ ಈ ಅವಧಿಯಲ್ಲಿ ಸಿಂಗಲ್ ಲ್ಯಾನ್ ನಲ್ಲಿ ಮಾತ್ರ ವಾಹನ ಸಂಚಾರಿಸುವಂತೆ ನೋಡಿಕೊಳ್ಳುವಂತೆ  ಪ್ರಾದೇಶಿಕ ಸಾರಿಗೆ ಅಧಿಕಾರಿಗಳು  ಪೊಲೀಸ್ ಇಲಾಖೆಯೊಂದಿಗೆ ವಾಹನ ನಿಯಂತ್ರಣ ಕಾರ್ಯದಲ್ಲಿ ಸೂಕ್ತ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಯವರ ಮುಂದಿನ ಆದೇಶದ ವರೆಗೂ ಈ ಆದೇಶ ಜಾರಿಯಲ್ಲಿರಲಿದೆ

LEAVE A REPLY

Please enter your comment!
Please enter your name here