ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಫಲಿತಾಂಶ

0

ಜಾವಗಲ್ ಸಮೀಪದ ನೇರ್ಲಿಗೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಶನಿವಾರ ನಡೆಯಿತು.
ಚುನಾವಣಾಧಿಕಾರಿ ಶ್ರೀನಿವಾಸಮೂರ್ತಿ ಮಾತನಾಡಿ ಅಧ್ಯಕ್ಷರಾಗಿ ಚನ್ನೇಗೌಡ, ಉಪಾಧ್ಯಕ್ಷೆ ಹೇಮಂತಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದರು.
ನಿರ್ದೇಶಕರಾದ ರಂಗಪ್ಪ, ಮಲ್ಲೇಶಪ್ಪ, ವಿಜಯಕುಮಾರ್, ಅಶೋಕ್ ಕುಮಾರ್, ಶಿವಕುಮಾರ್, ಗೋವಿಂದಪ್ಪ, ಕುಮಾರಸ್ವಾಮಿ, ಬೀರಪ್ಪ ಹಾಗೂ ಗ್ರಾಮದ ಮುಖಂಡರಾದ ವಿರೂಪಾಕ್ಷಪ್ಪ, ಡಿಗ್ಗೇನಹಳ್ಳಿ ಬಾಬು, ಮಹೇಶ್ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here