ಹಾಸನ: ಸಕಲೇಶಪುರ ತಾಲ್ಲೂಕಿನ ವಡೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ಮಹಿಳೆಯರ ಶವವನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ ಆರೋಪದಲ್ಲಿ 11 ಮಂದಿ ಹೋರಾಟಗಾರರನ್ನು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಹೋರಾಟಗಾರರಾದ ಯಡೇಹಳ್ಳಿ ಮಂಜುನಾಥ, ಜಾನೇಕೆರೆ ಸಾಗರ್ ಸೇರಿ 11 ಜನರನ್ನು ಬಂದಿಸಿದ್ದ ಪೊಲೀಸರು ಅವರ ವಿರುದ್ಧ ಪೊಲೀಸರ ಕರ್ತವ್ಯ ಕ್ಕೆ ಅಡ್ಡಿ ಆರೋಪ ಹೊರಿಸಿದ್ದಾರೆ.
ಆನೆ ದಾಳಿಗೆ ಮೃತಪಟ್ಟ ಮಹಿಳೆಯ ಶವ ಇಟ್ಟು ಹೋರಾಟ ಮಾಡೋ ಎಚ್ಚರಿಕೆ ನೀಡಿದ್ದ ಹೋರಾಟಗಾರರ ಮೇಲೆ ಮೃತದೇಹ ಸಾಗಿಸುವ ವೇಳೆ ಆಂಬ್ಯುಲೆನ್ಸ್ ತಡೆಯಲು ಮುಂದಾದ ಆರೋಪದಲ್ಲಿ ಕೇಸ್ ದಾಖಲಿಸಲಾಗಿದೆ.
ಕಾಡಾನೆ ವಿಚಾರದಲ್ಲಿ ಜೈಲು ಸೇರಿದ ಹೋರಾಟಗಾರರದ ಯಡೇಹಳ್ಳಿ ಮಂಜುನಾಥ್ ಜಾನೇಕೆರೆ ಸಾಗರ್ ಹಾಗೂ ಇತರೆ 9 ಜನರನ್ನು ಶಾಸಕ ಸಿಮೆಂಟ್ ಮಂಜುನಾಥ್ ಭೇಟಿ ಮಾಡಿ ಆತ್ಮಸ್ಥೈರ್ಯವನ್ನು ತುಂಬಿದರು.