ಅರಸೀಕೆರೆಯ ಇತಿಹಾಸ ಪ್ರಸಿದ್ಧ ಹೊಯ್ಸಳರ ಕಾಲದ ಶಿವಾಲಯದ ಆವರಣದಲ್ಲಿ “ಕಲ್ಲು ಕಥೆ” ಎನ್ನುವಂತಹ ವಿಶೇಷವಾದ ಕಾರ್ಯಕ್ರಮ

0

ವಿದ್ಯಾರ್ಥಿಗಳಲ್ಲಿ ಸ್ಮಾರಕಗಳ ಬಗ್ಗೆ ಅರಿವು ಮೂಡಿಸುವುದು, ಅವುಗಳ ಮಹತ್ವ ತಿಳಿಸುವುದು, ಅವುಗಳಬಗ್ಗೆ ಜಾಗೃತಿಗೊಳಿಸುವುದು ಮತ್ತು ಅವುಗಳನ್ನು ಸಂರಕ್ಷಿಸುವ ಮನೋಭಾವನೆ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಸಂಶೋಧಕರಾದ ಶ್ರೀ ಶಶಿಧರ್ ಅವರು ಆಗಮಿಸಿದ್ದರು. ಅರಸೀಕೆರೆಯ ರೋಟರಿ ಶಾಲೆ ಹಾಗೂ ವಾಸವಿ ಪ್ರೌಢಶಾಲೆಯ 80ಕ್ಕೂ ಹೆಚ್ಚು ಮಕ್ಕಳು ಈ ಕಾರ್ಯಕ್ರಮದಲ್ಲಿಭಾಗವಹಿಸಿದ್ದರು. ಎಲ್ಲ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳಾದ ಶಶಿಧರ್ ಅವರು ಹೊಯ್ಸಳರ ಕಾಲದ ದೇವಾಲಯಗಳು, ಅವುಗಳ ಲಕ್ಷಣ, ಕಲೆ ವಾಸ್ತುಶಿಲ್ಪ ಹಾಗೂ ಶಾಸನ ಮತ್ತು ವೀರಗಲ್ಲುಗಳನ್ನು ಕುರಿತಾಗಿ ಪ್ರಾತ್ಯಕ್ಷಿಕೆಯ ಮೂಲಕ ವಿವರಣೆ ನೀಡಿದರು. ಅನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಅತಿಥಿಗಳಾಗಿ ಆಗಮಿಸಿದ್ದ ಡಾ. ಹರೀಶ್ ಕುಮಾರ್, ರೋಟರಿ ಶಾಲೆಯ ಮುಖ್ಯೋಪಾಧ್ಯಾಯರಾದ ಅರುಣ್ ಕುಮಾರ್ ಹಾಗೂ ಶಶಿಧರ್ ಅವರು ಸಂವಾದದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಶಾಸನಗಳು, ವೀರಗಲ್ಲು ಮತ್ತು ಪ್ರಾಚೀನ ದೇವಾಲಯಗಳ ಬಗ್ಗೆ ಕುತೂಹಲ ಭರಿತವಾದ ಪ್ರಶ್ನೆಗಳನ್ನು ಕೇಳಿ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತರವನ್ನು ಪಡೆದುಕೊಂಡರು. ವಿದ್ಯಾರ್ಥಿಗಳ ಜೊತೆ ಭಾಗವಹಿಸಿದ್ದ ರೋಟರಿ ಮತ್ತು ವಾಸವಿ ಶಾಲೆಯ ಶಿಕ್ಷಕರು ಕಲ್ಲುಕಥೆ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದಿದ್ದು ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ ಮತ್ತು ಪಠ್ಯಕ್ಕೆ ಪೂರಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದ ಕಡೆಯಲ್ಲಿ ನಿವೇದಿತಾ ಪ್ರತಿಷ್ಠಾನದ ಶ್ರೀ ಮತಿ ಶಾರದಾ, ಮಮತಾ ಹಾಗೂ ವಿದ್ಯಾ ಎಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ಗೌರವಿಸಿದರು ಹಾಗೂ ಕಾರ್ಯಕ್ರಮದ ಉದ್ದೇಶವನ್ನು ಸಹಕಾರ ಗೊಳಿಸಿದ ಸಂಪನ್ಮೂಲ ವ್ಯಕ್ತಿಗಳಿಗೆ ವಂದಿಸಿದರು.

LEAVE A REPLY

Please enter your comment!
Please enter your name here