( ಈ ಕಾರ್ಯಕ್ರಮ ಸ್ಥಳೀಯ ಶಾಸಕ ATR ಗೈರು )

0

ಅರಕಲಗೂಡು: ರಾಜ್ಯದ ಜನತೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಹುಮತ ನೀಡಿ ಐದು ವರ್ಷ ಪ್ರರ್ಣಾವಧಿಗೆ ಅಧಿಕಾರ ನಡೆಸಲು ಆಶೀರ್ವದಿಸಿದರೆ ರೈತರು ಏಳಿಗೆಗೆ ಮಹತ್ವದ ಯೋಜನೆಗಳನ್ನು ರೂಪಿಸಿ ಯುವಕರು, ಮಹಿಳೆಯರು ಸ್ವಾವಲಂಬಿಗಳಾಗಿ ಜನಸಾಮಾನ್ಯರು ಬದುಕುವ ದಾರಿ ಕಂಡುಕೊಳ್ಳುವ ನಿಟ್ಟಿನಲ್ಲಿ ಜನಪರ ಆಡಳಿತ ನೀಡುವುದು ಶತಃಸಿದ್ದ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ತಾಲೂಕಿನ ಜಿಟ್ಟೇನಹಳ್ಳಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ವೀರಾಂಜನೇಯಸ್ವಾಮಿ ಹಾಗೂ ಮಾರಮ್ಮ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಕ್ಕೆ ಪ್ರಧಾನಿಯಾಗಿದ್ದ ಎಚ್.ಡಿ. ದೇವೇಗೌಡರು ಬಡ ವರ್ಗದ ಜನರ ಪರವಾಗಿ ಕೆಲಸ ಮಾಡುವ ಸಂಕಲ್ಪ ತೊಟ್ಟಿದ್ದರು, ಆದರೆ ಪೂರ್ಣಾವಧಿ ಅಧಿಕಾರಿ ಸಿಗಲಿಲ್ಲ. ನಾನು ಸಹ ಎರಡು ಸಲ ಮುಖ್ಯಮಂತ್ರಿಯಾಗಿದ್ದು ಜೆಡಿಎಸ್‌ಗೆ ಬಹುಮತ ದೊರೆತಿದ್ದಲ್ಲ. ರಾಜಕೀಯ ಸನ್ನಿವೇಶದಲ್ಲಿ ಸಿಕ್ಕ ಅಧಿಕಾರದ ಅವಧಿಯಲ್ಲೂ ಉತ್ತಮ ಕೆಲಸ ಮಾಡಿದ್ದೇನೆ. ಜನರಿಗೆ ಬದುಕಲು ಹಲವಾರು ಮಾರ್ಗಗಳಿಗೆ. ಮುಂದೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಪ್ರತಿ ಪಂಚಾಯಿತಿ ವ್ಯಾಪ್ತಿ ಸುಸಜ್ಜಿತ ಆಸ್ಪತ್ರೆಗಳನ್ನು ತೆರೆದು ಜನರ ಬದುಕಿಗೆ ಆರ್ಥಿಕ ನೆರವು ನೀಡಲಾಗುವುದು. ಇದಕ್ಕಾಗಿ ಸಕಲ ಸಿದ್ದತೆ ನಡೆದಿದ್ದು ಪ್ರತಿ ಕುಟುಂಬದ ಏಳಿಗೆಗೆ ಪೂರಕ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಧರ್ಮದ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಅಮೃತ ಮಹೋತ್ಸವದ ಹೊತ್ತಿನಲ್ಲೂ ಮುಗ್ಧ ಅಮಾಯಕರ ಜೀವ ತೆಗೆಯಲಾಗುತ್ತಿದೆ. ಇಂತಹ ಕಟುಕ ಸರ್ಕಾರ ಬೇಕಾ ಎನ್ನುವುದನ್ನು ಜನತೆ ಅರಿತುಕೊಳ್ಳಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಬಡವರಿಗೆ ಒಂದು ಸಾವಿರ ಮನೆಗಳನ್ನು ಕಟ್ಟಿಕೊಟ್ಟಿದ್ದೆ. ಈ ಸರ್ಕಾರಕ್ಕೆ ಬಿದ್ದು ಹೋಗಿರುವ ಮನೆ ಕಟ್ಟಿಕೊಡಲು ಆಗಿಲ್ಲ. ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಜನರ ತೆರಿಗೆ ಹಣ ಲೂಟಿ ಹೊಡೆಯುತ್ತಿದೆ ಎಂದು ಆಪಾದಿಸಿದರು.

ಹಳ್ಳಿಗಳಲ್ಲಿ ಹಿಂದೆ ಇದ್ದ ಮಾನವೀಯ ಸಂಬAಧಗಳು ಈಗ ಮರೆಯಾಗಿದ್ದು ಒಡಹುಟ್ಟಿದವರೊಂದಿಗೆ ರಾಕ್ಷಸಿ ಪ್ರವೃತ್ತಿ ಮೆರೆಯಲಾಗುತ್ತಿದೆ. ಚುನಾವಣೆ ಸಮಯದಲ್ಲಷ್ಟೇ ರಾಜಕೀಯ ನಡೆಸಿ ತದನಂತರ ಊರಿನ ಏಳಿಗೆಗೆ ಒಗ್ಗಟ್ಟಿನಿಂದ ಶ್ರಮಿಸಬೇಕು ನೆರೆಹೊರೆಯವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅಂತಹವರಲ್ಲಿ ದೇವರನ್ನು ಕಾಣಲು ಸಾಧ್ಯ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ತಾಯಿ ಅಂಜನಾದ್ರಿ ಸೇವೆ ಮಾಡಿ ಭಕ್ತಿ ಸಂಸ್ಕಾರಗಳನ್ನು ರೂಢಿಸಿಕೊಂಡ ಶ್ರೀರಾಮನ ಭಕ್ತ ಅಂಜನೇಯಸ್ವಾಮಿ ನಿಷ್ಠೆ ಜಾಗತಿಕ ಪ್ರಸಿದ್ಧಿ ಗಳಿಸಿದೆ. ವೀರಾಂಜನೇಯನನ್ನು ಸ್ಮರಿಸಿದರೆ ಮಾಡುವ ಕೆಲಸದಲ್ಲಿ ಒಳಿತಾಗಿ ಕೀರ್ತಿ ಯಶಸ್ಸು ಬೆನ್ನಟ್ಟುತ್ತದೆ. ತಾಯಿ ಸೇವೆ ಕೈಗೊಂಡವರ ಬಳಿ ಶನಿದೇವ ಕೂಡ ಸುಳಿಯಲ್ಲ ಎಂಬುದಕ್ಕೆ ಅಂಜನೇಯಸ್ವಾಮಿ ಭಕ್ತಿ ಸಾಕ್ಷಿಯಾಗಿದೆ. ಮನುಷ್ಯ ಕಷ್ಟದಲ್ಲಿ ಆಪತ್ತಿನಲ್ಲಿದ್ದವರ ಉಳಿಸಬೇಕು. ಹೃದಯವಂತಿಕೆ ಕರುಣೆ ಒಳ್ಳೆಯ ಜ್ಞಾನ ಇರಬೇಕು. ಇವೆಲ್ಲ ಅಂಜನೇಯ ಸ್ವಾಮಿ ಅವರಿಗಿದ್ದವು. ಕನ್ನಡನಾಡಿನ ಮಣ್ಣಿನ ಮಗ ಅಂಜನೇಯಸ್ವಾಮಿ ದೇವಸ್ಥಾನಗಳು ಶ್ರೀರಾಮನ ದೇವಸ್ಥಾನಗಳಿಗಿಂತ ಹೆಚ್ಚಿವೆ ಎಂದು ನುಡಿದರು.

ಮಾಜಿ ಸಚಿವ ಎ. ಮಂಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮದಲ್ಲಿ ಜನರು ಒಗ್ಗೂಡಿ ಅಂಜನೇಯಸ್ವಾಮಿ, ಮಾರಮ್ಮ ದೇವಸ್ಥಾನ ನಿರ್ಮಿಸಿದ್ದಾರೆ ಎಂದು ಶ್ಲಾಘಿಸಿದರು.

ಶಾಸಕ ಎಚ್.ಡಿ. ರೇವಣ್ಣ ಮಾತನಾಡಿದರು. ಹಾಸನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್, ಜೆಡಿಎಸ್ ಮುಖಂಡ ಡಾ. ಮೋಹನ್ ಮಲ್ಲಪ್ಪ, ಜಿಪಂ ಮಾಜಿ ಸದಸ್ಯ ಎಚ್.ಎಸ್. ಶಂಕರ್, ಹಾರಂಗಿ ಮಹಾ ಮಂಡಲ ಅಧ್ಯಕ್ಷ ಚೌಡೇಗೌಡ, ಕಾಳೇನಹಳ್ಳಿ ಗ್ರಾಪಂ ಅಧ್ಯಕ್ಷೆ ಪಾರ್ವತಿ ಇತರರಿದ್ದರು.

ಎಟಿಆರ್ ಗೈರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ಎ.ಟಿ. ರಾಮಸ್ವಾಮಿ ಗೈರಾಗಿದ್ದರು. ಸಮಾರಂಭದಲ್ಲಿ ಹಾಜರಿದ್ದ ಎಚ್.ಡಿ. ರೇವಣ್ಣ ಅವರು ರಾಮಸ್ವಾಮಿ ಅವರು ಅನಾರೋಗ್ಯದ ಕಾರಣ ಬರಲಾಗಿಲ್ಲ ಎಂದು ಸಮರ್ಥಿಸಿಕೊಂಡರು.

ವೇದಿಕೆಗೆ ಕುಮಾರಸ್ವಾಮಿ ಬಂದೊಡನೆ ಎದ್ದು ತಮ್ಮ ಆಸನ ಬಿಟ್ಟು ಅವರಿಗೆ ಕುಳಿತುಕೊಳ್ಳಲು ಎ. ಮಂಜು ಕೇಳಿಕೊಂಡರೂ ಎಚ್.ಡಿ.ಕೆ ಬೇರೆ ಆಸನ ನೋಡಿಕೊಂಡರು

LEAVE A REPLY

Please enter your comment!
Please enter your name here