ಈ ಕೆಳಕಂಡ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಣೆಯಾಗಿದೆ : ಗಮನಿಸಿ

0

ಹಾಸನ : ಪ್ರಸ್ತುತ ಎಲ್ಲಾ ವರ್ಗದ ಪದವಿ, ವೃತ್ತಿಪರ ಕೋರ್ಸ್, ಕಾನೂನು ಹಾಗೂ ಸ್ನಾತಕೋತ್ತರ ಪರೀಕ್ಷೆಗಳು, ತರಗತಿಗಳು ಮುಂದುವರೆದಿದ್ದಲ್ಲಿ, ಅಂತಹ ವಿದ್ಯಾರ್ಥಿಗಳಿಂದ ನಿಗದಿತ ಮೊತ್ತವನ್ನು ಪಾವತಿಸಿಕೊಂಡು ರಶೀದಿ ನೀಡಿ, ವಿದ್ಯಾರ್ಥಿಗಳು ರಶೀದಿ ಮತ್ತು ಹಳೆಯ ಬಸ್ ಪಾಸ್ ಎರಡನ್ನೂ ತೋರಿಸಿ ಆಗಸ್ಟ್-2022ರ ಮಾಹೆಯವರೆಗೂ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು.

ಪ್ರಸ್ತುತ ಕೊನೆಯ, ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಇನ್ನೂ ಮುಗಿಯದಿರುವುದನ್ನು ಗಮನಿಸಿ ಹಾಗೂ ಸದರಿ ವಿದ್ಯಾರ್ಥಿಗಳ ಬೇಡಿಕೆಯನ್ನು / ವೇಳಾಪಟ್ಟಿಯನ್ನು ಪರಿಗಣಿಸಿ, ಆಗಸ್ಟ್-2022ರವರೆಗೆ ನವೀಕರಿಸಲಾಗಿದ್ದ

ಅಂತಿಮ ವರ್ಷದ ಕೊನೆಯ ಸೆಮಿಸ್ಟರ್‌ನಲ್ಲಿ ಅಭ್ಯಸಿಸುತ್ತಿರುವ ಪದವಿ, ಸ್ನಾತಕೋತ್ತರ, ಡಿಪ್ಲೋಮೊ, ಕಾನೂನು, ಇತರೆ ಎಲ್ಲಾ ಕಾಲೇಜು ವಿದ್ಯಾರ್ಥಿಗಳ ಪಾಸುಗಳನ್ನು ಮಾತ್ರ ಅಂತಿಮ ಪರೀಕ್ಷೆ ಮುಗಿಯುವವರೆಗೆ ಅಂದರೆ ಅಕ್ಟೋಬರ್ -2022ರ ಅಂತ್ಯದವರೆಗೆ ಹಳೆಯ ಪಾಸ್‌ನ್ನು ಹಾಗೂ ಅವಧಿ ವಿಸ್ತರಣೆ ಸಮಯದಲ್ಲಿ ನೀಡಿರುವ ರಶೀದಿ ತೋರಿಸಿ ಉಚಿತವಾಗಿ ಪ್ರಯಾಣಿಸಲು ಅನುಮತಿಸಲಾಗಿದೆ.

ಇದರ ಹೊರತಾಗಿ ಉಳಿದ ಇನ್ನಿತರೆ ತರಗತಿ, ಇತರೆ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟ್‌ಲ್‌ನಲ್ಲಿ ಅರ್ಜಿ ಸಲ್ಲಿಸಿ ಹೊಸ ಪಾಸುಗಳನ್ನು ಪಡೆಯಬಹುದಾಗಿರುತ್ತದೆ ಹಾಗೂ ಪಾಸು ವಿತರಣಾ ಪ್ರಕ್ರಿಯೆಯನ್ನು ಮುಂದುವರೆಸಲಾಗಿದೆ ಎಂದು ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here