ಹಾಸನ ಹಾಲು ಒಕ್ಕೂಟದಿಂದ ಗೌರಿ ಗಣೇಶ ಹಬ್ಬದ ಉಡುಗೊರೆ ಉತ್ಪಾದಕರಿಗೆ ಸೆ. 1 ರಿಂದ ಪ್ರತಿ ಲೀಟರ್ ಹಾಲಿಗೆ 1.25 ರೂ ಹೆಚ್ಚಳ

0

ಗಣೇಶ ಹಬ್ಬದ ಗಿಫ್ಟ್
ಹಾಲು ಉತ್ಪಾದಕರಿಗೆ ಸೆ.1 ರಿಂದ ಲೀಟರ್‌ಗೆ 1.25 ರೂ. ಹೆಚ್ಚಳ

ಹಾಸನ: ಹಾಸನ ಹಾಲು ಒಕ್ಕೂಟದಿಂದ ಗೌರಿ ಗಣೇಶ ಹಬ್ಬದ ಉಡುಗೊರೆಯಾಗಿ ಹಾಲು ಉತ್ಪಾದಕರಿಗೆ ಸೆ. 1 ರಿಂದ ಪ್ರತಿ ಲೀಟರ್ ಹಾಲಿಗೆ 1.25 ರೂ. ಹೆಚ್ಚಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಎಚ್.ಡಿ. ರೇವಣ್ಣ ಹೇಳಿದರು.


ನಗರದ ಹೊರ ವಲಯದ ಕೌಶಿಕ ಬಳಿಯ ನೂತನ ಮೆಗಾ ಡೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಂಘದ ವಾರ್ಷಿಕ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿದರು.


22.77 ಕೋಟಿ ಲಾಭ:


2021-22 ನೇ ಸಾಲಿನಲ್ಲಿ ಒಕ್ಕೂಟವು 17 ಸಾವಿರ ಕೋಟಿಗಳಷ್ಟು ವಹಿವಾಟು ನಡೆಸಿ 22.77 ಕೋಟಿ ಲಾಭ ಗಳಿಸಿದೆ. 2022-23 ನೇ ಸಾಲಿಗೆ 20 ಸಾವಿರ ಕೋಟಿ ವಹಿವಾಟು ಗುರಿ ಹೊಂದಲಾಗಿದೆ ಎಂದು ತಿಳಿಸಿದರು.


ಉತ್ಪಾದಕರಿಗೆ ಉಡುಗೊರೆ:


ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿಗೆ ಪ್ರತಿ ಲೀಟರ್‌ಗೆ ಸೆ.1 ರಿಂದ 1.25 ದರ ಹೆಚ್ಚಿಸಿದ್ದು, 29,75 ರೂ.ನಿಂದ 30.1 ರೂ ಏರಿಕೆಯಾಗಿದೆ. ರಾಜ್ಯದಲ್ಲಿಯೇ ಹಾಲು ಉತ್ಪಾದಕರಿಗೆ ಹೆಚ್ಚಿನ ಖರೀದಿ ದರ ಪಾವತಿಸುತ್ತಿರುವ ಒಕ್ಕೂಟ ನಮ್ಮದಾಗಿದೆ ಎಂದರು.
ಹೈನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಹೈನು ರಾಸು ಖರೀದಿಸಲು ಡಿಸಿಸಿ ಬ್ಯಾಂಕ್ ವತಿಯಿಂದ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆಗೆ ಇಂದಿನಿAದ ಜಾರಿಗೊಳಿಸಲಾಗುತ್ತಿದೆ ಎಂದರು
ಒಕ್ಕೂಟದ ವ್ಯಾಪ್ತಿಯ ಸುಮಾರು 1200 ಸಂಘಗಳಲ್ಲಿ ಎಎಂಸಿಯು ಅಳವಡಿಸಿದ್ದು, 2022-23 ನೇ ಸಾಲಿನಲ್ಲಿ ಹೊಸದಾಗಿ 700 ಎಎಂಸಿಯು ಗಳನ್ನು ಅಳವಡಿಸಲಾಗಿದೆ. ಕಂಪ್ಯೂಟರೀಕರಣ ವ್ಯವಸ್ಥೆಯಿಂದ ಹಾಲು ಉತ್ಪಾದಕರಿಗೆ ಆಯಾ ದಿನವೇ ಅವರು ಪೂರೈಸಿದ ಹಾಲಿನ ತೂಕ, ಗುಣಮಟ್ಟ ಇತ್ಯಾದಿ ಮಾಹಿತಿಗನುಸಾರ ಚೀಟಿ ನೀಡಲಾಗುತ್ತಿದೆ ಎಂದೂ ತಿಳಿಸಿದರು.


ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ:


ಹಾಸನ ಹಾಲು ಒಕ್ಕೂಟದಲ್ಲಿ ಸ್ಥಾಪಿಸಲಾಗಿರುವ ನೂತನ ಸ್ವಯಂ ಚಾಲಿತ ಬೆಟ್ ಬಾಟಲ್ ಘಟಕ ಫೆಬ್ರವರಿ-2022 ರಿಂದ ಉತ್ಪಾದನೆ ಕಾರ್ಯ ಆರಂಭಿಸಿದ್ದು, ದಿನವಹಿ 30 ಲಕ್ಷ ಬಾಟಲ್ ಸಿದ್ಧಗೊಳಿಸಲಾಗುತ್ತಿದೆ. ದೇಶಾದ್ಯಂತ ಹಲವು ಕಡೆಗಳಿಗೆ ಮಾರಾಟ ಜಾಲ ವಿಸ್ತರಿಸಲಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.


ಮುಂದಿನ ವರ್ಷ ಪೂರ್ಣ:


ಕೌಶಿಕ ಬಳಿ 66 ಎಕರೆ ಜಾಗದಲ್ಲಿ 5400 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಮೆಗಾ ಡೇರಿ ಯೋಜನೆಯ ಸಿವಿಲ್ ಕೆಲಸಗಳು ಪ್ರಗತಿಯಲ್ಲಿದ್ದು,ಮೆಕ್ಯಾನಿಕಲ್ ಯಂತ್ರೋಪಕರಣಗಳ ಸರಬರಾಜು ಮತ್ತು ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, 2023 ಜನವರಿ ಅವಧಿಗೆ ಯಂತ್ರೋಪಕರಣಗಳ ಸರಬರಾಜಾಗಿ, 2023 ಡಿಸೆಂಬರ್ ವೇಳೆಗೆ ಯಂತ್ರೋಪಕರಣಗಳ ಇನ್‌ಸ್ಟಾಲೇಷನ್ ಕಾರ್ಯ ಮುಗಿಸಿ ಚಾಲನೆ ನೀಡಲು ಉದ್ದೇಶಿಸಲಾಗಿದೆ ಎಂದರು.

ರೈಲ್ವೆ ಕೆಟರಿಂಗ್ ಇಲಾಖೆಯಿಂದ ಮಾಸಿಕ 30 ಲಕ್ಷ ಲೀಟರ್‌ಗೆ ಬೇಡಿಕೆ ಬಂದಿದ್ದು, ಬೇಸಿಗೆ ಕಾಲದಲ್ಲಿ 50 ರಿಂದ 3 ಲಕ್ಷ ಲೀಟರ್‌ಗೆ ಅಂದರೆ 30 ಲಕ್ಷ ಬಾಟಲ್‌ಗೆ ಬೇಡಿಕೆ ನೀಡಿದ್ದಾರೆ. ಹಾಗೂ ವಿಮಾನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಒಕ್ಕೂಟದಿಂದ ಸುವಾಸಿತ ಹಾಲನ್ನು ಒದಗಿಸುವ ನಿಟ್ಟಿನಲ್ಲಿ ಹೆಸರಾಂತ ವಿಮಾನ ಸಂಸ್ಥೆಗಳಾದ Air Asia, Vistara, Air India ಮುಂತಾದ ಸಂಸ್ಥೆಗಳಿಗೆ ಸರಬರಾಜು ಮಾಡಲು ಮಾತುಕತೆ ನಡೆಯುತ್ತಿದ್ದು, ಸದ್ಯದಲ್ಲಿಯೇ ಸರಬರಾಜು ಆರಂಭಿಸಲಾಗುವುದು.
-ಹೆಚ್.ಡಿ.ರೇವಣ್ಣ, ಹಾಮೂಲ್ ಅಧ್ಯಕ್ಷ

LEAVE A REPLY

Please enter your comment!
Please enter your name here