ಪಡಿತರ ವಿತರಣೆಯಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಹಾಸನ DC ಗೆ KRS ಪಕ್ಷ ದೂರು ಸಲ್ಲಿಕೆ

0

ಜಿಲ್ಲೆಯ ರೇಷನ್ ಅಂಗಡಿಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಹಾಸನ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಅವರು ಬರೆದಿರುವ ಪತ್ರದಲ್ಲಿ ಪಡಿತರ ನೀಡುವ ಸರ್ಕಾರದಿಂದ ನ್ಯಾಯಬೆಲೆ ಅಂಗಡಿಯ ವರೆಗೂ ಇರುವ ಲೋಪದೋಷಗಳಬಗ್ಗೆ ಸವಿಸ್ತಾರವಾಗಿ ಗಮನಹರಿಸಲು ಹಾಸನ ಜಿಲ್ಲಾಧಿಕಾರಿ ಗಳಿಗೆ ದೂರು ನೀಡಿರುವುದು ಹೀಗಿದೆ 

ಪಡಿತರ ವಿತರಣೆಯಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ,

ಸರ್ಕಾರದ ವತಿಯಿಂದ ಬಡ ಜನರಿಗೆ ನ್ಯಾಯಬೆಲೆ ಅಂಗಡಿ ಮತ್ತು ಸಹಕಾರ ಸಂಘಗಳ ಮೂಲಕ ನೀಡುವ ಪಡಿತರ ವಿತರಣೆಯಲ್ಲಿ ನಿರಂತರವಾಗಿ ಅಕ್ರಮ ನಡೆಯುತ್ತಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಸಮಿತಿ ಪಕ್ಷವು ನಿರಂತರವಾಗಿ ಸರಿಪಡಿಸಲು ಆಗ್ರಹಿಸುತ್ತಿದೆ, ಆದರೆ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅವರೂ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಎಂದು ಸ್ಪಷ್ಟವಾಗುತ್ತದೆ. ಪ್ರಸ್ತುತ ಕೋವಿಡ್ ವರಿಸಿತಿಯಲ್ಲಿ ಸರ್ಕಾರವು ಹೆಚ್ಚುವರಿ ಪಡಿತರ ನೀಡುತ್ತಿದೆ, ಆದರೆ ಪಡಿತರ ವಿತರಣೆಯ ಸಮಯದಲ್ಲಿ ಕಾರ್ಡುದಾರರಿಗೆ ಅನೇಕ ರೀತಿಯಲ್ಲಿ ತೊಂದರೆ ಮತ್ತು ಮೋಸವಾಗುತ್ತಿದೆ. ಈ ವಿಚಾರವಾಗಿ ಫಲಾನುಭವಿಗಳು ಪಶ್ನಿಸಿದರೆ ಅವರ ಕಾರ್ಡನ್ನು ರದ್ದು ಮಾಡಲಾಗುತ್ತಿದ್ದು ಇದರಿಂದ ಭಯಗೊಂಡ ಬಹುತೇಕರು ಅಲ್ಲಿ ನಡೆಯುವ ಅಕ್ರಮಗಳನ್ನು ಪ್ರಶ್ನಿಸದೆ, ತಮಗೆ ಸಿಕ್ಕ ಭಾಗ, ಎಂದು ಸುಮ್ಮನಿರುತ್ತಾರೆ, ಮೊದಲನೆಯದಾಗಿ ತೂಕದಲ್ಲಿ ಮೋಸ ಮಾಡಲಾಗುತ್ತಿದ್ದು, ಅಪಾರ ಪುಮಾಣದ ಅಕ್ಕಿ ಮತ್ತು ಇತರ ದವಸ ಧಾನ್ಯಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಕೆಲವೊಂದು ನ್ಯಾಯಬೆಲೆ ಅಂಗಡಿಗಳಲ್ಲಿ, ಎಲೆಕ್ಟ್ರಾನಿಕ್ ತಕ್ಕಡಿಗಳನ್ನು ಬಳಸುತ್ತಿಲ್ಲ. ಮತ್ತು ಕಡ್ಡಾಯವಾಗಿ ಅಂಗಡಿ ಮುಂದೆ ಪ್ರಕಟಿಸಬೇಕಾದ ಮಾಹಿತಿಗಳನ್ನು ಪ್ರಕಟಿಸಿರುವುದಿಲ್ಲ. ಹಾಗೆಯೇ ಬಹುತೇಕ ಕಡೆಗಳಲ್ಲಿ ಪ್ರತಿ ಕಾರ್ಡಿಗೆ ಬೆರಳು ಮುದ್ರಗೆ (Fingerprint) ಎಂದು ರೂ. 10/20/40 ಹಣ ಪಡೆಯುವುದು ಮತ್ತು ಸೋಪು, ದಿನಸಿಯಂತಹ ಅನಾವಶ್ಯಕ ಕಳಪೆ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಕಡ್ಡಾಯವಾಗಿ ಖರೀದಿಸಬೇಕು, ಇಲ್ಲದಿದ್ದರೆ ಪಡಿತರ ನೀಡುವುದಿಲ್ಲ. ಅನಾವಶ್ಯಕವಾಗಿ ತೊಂದರೆ ಕೊಡುವ ಸಲುವಾಗಿಯೋ ಅಥವಾ ಬೆರಳ ಮುದ್ರೆಯನ್ನು ಪಡೆಯಬಾರದು ಎಂದು ಸರ್ವರ್ ಕೆಲಸ ಮಾಡುತ್ತಿಲ್ಲ ಎಂದು ಸಬೂಬು ಹೇಳಿ ತೊಂದರೆ ಮಾಡುತ್ತಿರುತ್ತಾರೆ, ಆದರೆ ಕೆಲವೊಂದು ನ್ಯಾಯಬೆಲೆ ಅಂಗಡಿಗಳು ಅಥವಾ ಸಹಕಾರ ಸಂಘಗಳು ಜನರಿಗೆ ಉತ್ತಮ ಸೇವೆ ಸಲ್ಲಿಸಿತ್ತಿದ್ದು, ಅವರಿಂದ ತಮಗೆ ವೈಯಕ್ತಿಕ ಲಾಭವಾಗುತ್ತಿಲ್ಲ. ಎಂದು ಕೆಳಹಂತದ ಅಧಿಕಾರಿಗಳು ಅವರಿಗೆ ಕಿರುಕುಳ ನೀಡುತ್ತಿರುತ್ತಾರೆ ಅಥವಾ ಅವರ ಅಂಗಡಿಯ ಪರವಾನಿಗೆಯನ್ನು ರದ್ದು ಮಾಡುತ್ತಾರೆ.

ಬಹುತೇಕ ನ್ಯಾಯಬೆಲೆ ಅಂಗಡಿಗಳು ಪಡಿತರ ಬಂದ ಮೂರ್ನಾಲ್ಕು ದಿನಗಳವರೆಗೆ ಮಾತ್ರ ಪಡಿತರ ವಿತರಿಸಿ ತದನಂತರ ಬಂದ ಫಲಾನುಭವಿಗಳಿಗೆ ತಮ್ಮ ನ್ಯಾಯಬದ, ಹಕ್ಕನ್ನು ನಿರಾಕರಿಸಲಾಗುತ್ತಿದೆ. ಲಾಕ್ ಡೌನ್ ಇರುವ ಸಂದರ್ಭದಲ್ಲಿ ಮನೆಯಿಂದ ಆಚೆ ಬರಲು ಬಹುತೇಕರಿಗೆ ಸಾಧ್ಯವಾಗುತ್ತಿಲ್ಲ ಮತ್ತು ಹಲವಾರು ಕುಟುಂಬಗಳು ಕೋವಿಡ್ ನಿಂದ ಆಸ್ಪತ್ರೆಯಲ್ಲಿ ಅಥವಾ ಗ್ಯಾರಂಟೈನಲ್ಲಿ ಇರುತ್ತಾರೆ, ಇದರಿಂದ ಅವರು ಪಡಿತರ ವಿತರಿಸುವ ಸಮಯಕ್ಕೆ ಬರಾಲಾಗದಿರುವುದರಿಂದ, ಅವರಿಗೆ ಪಡಿತರ ಲಭಿಸುತ್ತಿರುವುದಿಲ್ಲ. ಈ ರೀತಿ ಒಂದೇ ಸಮಯದಲ್ಲಿ ವಿತರಣೆ ಮಾಡುವುದರಿಂದ ಜನಜಂಗುಳಿ ಸೇರಿ ಕೋವಿಡ್ ಹರಡಲು ಕಾರಣವಾಗುತ್ತಿದೆ.

ಇನ್ನು ವಲಸೆ ಬಂದಿರುವ ಜನರ ಬವಣೆಯನ್ನು ಯಾರೂ ಕೂಡ ಕೇಳದಂತಹ ಪರಿಸ್ಥಿತಿಯಾಗಿದೆ. ಲಾಕ್ ಡೌನ್ ಸಮಯದಲ್ಲಿ ಹೊರಗೆ ಎಲ್ಲೂ ಹೋಗಲಾಗುತ್ತಿಲ್ಲ. ದುಡಿಮೆ ಇಲ್ಲ ಹತ್ತಿರದ ನ್ಯಾಯಬೆಲೆ ಅಂಗಡಿಯವರು ಯಾರು ಎಲ್ಲಿಬೇಕಾದರೂ ಪಡಿತರ ಪಡೆಯಬಹುದು ಎಂಬ ನಿಯಮವಿದ್ದರೂ ಅವರಿಗೆ ಪಡಿತರವನ್ನು ನೀಡಲು ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ಕೆಲಸಕ್ಕಾಗಿ ವಲಸ ಹೋದ ಅಥವಾ ವಲಸೆ ಪ್ರದೇಶದಿಂದ ಮರಳಿದ ಬಡ ಕಾರ್ಮಿಕರಿಗಪಡಿತರ ಸಿಗದ ಹಸಿವಿನಿಂದ ಇರುವ ಪರಿಸ್ಥಿತಿ ಎದುರಾಗಿದೆ. ಬಹುತೇಕರು ಹೊರಗಿನವರಾದ್ದರಿಂದ, ಅವರಿಗೆ ಸ್ಥಳೀಯ ಜನಪ್ರತಿನಿಧಿಗಳಾಗಲಿ ಅಥವಾ ಅವರಿಗೆ ಮಾರ್ಗದರ್ಶನ. ಮಾಡುವವರು ಸಿಗದಿರುವುದರಿಂದ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಹಾಗೆಯೇ, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಮಟ್ಟದಲ್ಲೇ ವ್ಯಾಯಬೆಲೆ ಅಂಗಡಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ನೇರವಾಗಿ ಗೋದಾಮುಗಳಿಂದ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಇದೇ ಕಾರಣದಿಂದ ಕೆಲವು ನ್ಯಾಯಬೆಲೆ ಅಂಗಡಿಯವರು ಫಲಾನುಭವಿಗಳಿಗೆ ಮೋಸ ಮಾಡುವಂತಾಗಿದ ಈ ವಿಚಾರಗಳು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸ್ಥಳೀಯ ಅಧಿಕಾರಿಗಳಾದ ಆಹಾರ ನಿರೀಕ್ಷಕರು, ಶಿರಸ್ತೆದಾರರಿಗೆ ಮತ್ತು ಇತರರಿಗೆ ತಿಳಿದಿದ್ದು, ಅವರು ಯಾವ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಇದು ಅವರುಗಳುಈ ಅಕ್ರಮದಲ್ಲಿ ಭಾಗಿಯಾಗುತ್ತಾರೆ ಅಥವಾ ನಿಸ್ಸಹಾಯಕರಾಗಿರುತ್ತಾರೆ ಎಂಬುದನ್ನು ತೋರಿಸುತ್ತದೆ.

ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲೂ ಕೂಡ ಆಕ್ರಮಗಳನ್ನು ಯಾವುದೇ ಅಂಚಿಕೆಯಿಲ್ಲದ ಎಸಗಲಾಗುತ್ತಿದ್ದು, ಈ ಬಗ್ಗೆ ತಾವು ಕಠಿಣ ಕ್ರಮ ಕೈಗೊಂಡು ಎಲ್ಲಾ ಅಕ್ರಮಗಳನ್ನು ನಿಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಂಡು ಸರ್ಕಾರಕ್ಕೆ ಮತ್ತು ಫಲಾನುಭವಿಗಳಿಗೆ ಆಗುತ್ತಿರುವ ನನ್ನವನ್ನು ತಪ್ಪಿಸಬೇಕು ಎಂದು ಕೇಳಿಕೊಳ್ಳುತ್ತೇವೆ. ಜೊತೆಗೆ ಕಳೆದ ಒಂದು ವರ್ಷದಲ್ಲಿ ರಾಗಿರುವ ಬಿಪಿಎಲ್ ಕಾರ್ಡುಗಳ ಬಗ್ಗೆ ಸ್ವತಂತ್ರ ತನಿಖೆ ಮಾಡಿಸಿ, ಅರ್ಹ ಫಲಾಮಭವಿಗಳ ಕಾರ್ಡುಗಳನ್ನು ಪುನರ್ ಸ್ಟಾಪಿಸಬೇಕು ಎಂದು ಆಗ್ರಹಿಸುತ್ತೇವೆ. ” ಎಂದು ಪತ್ರದಲ್ಲಿ ದೂರು ಹಾಸನ ಜಿಲ್ಲಾಧಿಕಾರಿ ಗಳಿಗೆ ನೀಡಿರುತ್ತಾರೆ..
.
ಈ ಸಂದರ್ಭದಲ್ಲಿ ಅಕ್ಮಲ್ಲ್ ಜಾವೇದ್ (ಹಾಸನ ಜಿಲ್ಲಾ ಘಟಕದ ಅಧ್ಯಕ್ಷ) , ರಮೇಶ್ ಬೂವನಹಳ್ಳಿ ( ಜಿಲ್ಲಾ ಕಾರ್ಯದರ್ಶಿ) , ಲೋಕೇಶ (ಜಿಲ್ಲಾ ಸಂಘಟನಾ ಕಾರ್ಯದರ್ಶಿ) , ತೇಜಸ್ ಕುಮಾರ್
(ರಾಜ್ಯ ವಿಧ್ಯಾರ್ಥಿ ಘಟಕದ ಅಧ್ಯಕ್ಷ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ) ಇದ್ದರು

LEAVE A REPLY

Please enter your comment!
Please enter your name here