ಬಸ್ ಪಾಸ್ ದರ: ಪ್ರಾಥಮಿಕ ಶಾಲೆ ರೂ. 150₹ , ಪ್ರೌಢಶಾಲೆ ಬಾಲಕರು ರೂ. 750, ಬಾಲಕಿಯರು ರೂ. 550, ಎಸ್.ಸಿ./ಎಸ್.ಟಿ ರೂ 150, ಪಿಯುಸಿ ಪದವಿ/ ಡಿಪ್ಲೊಮಾ ರೂ.1050, ಎಸ್.ಸಿ./ ಎಸ್.ಟಿ ರೂ. 150, ವೃತ್ತಿಪರ ತರಗತಿಗಳು, ಬಿಇ/ವೈದ್ಯಕೀಯ/ ಕೃಷಿ/ನರ್ಸಿಂಗ್/ ಬಿಫಾರ್ಮ್/ ಡಿಫಾರ್ಮ/ಬಿಎಡ್/ ಎಲ್‌ಎಲ್‌ಬಿ ರೂ.1550, ಎಸ್.ಸಿ./ಎಸ್.ಟಿ ರೂ-150, ಐ.ಟಿ.ಐ/ಜಿ.ಟಿ.ಟಿ.ಸಿ ರೂ.1310, ಎಸ್.ಸಿ./ಎಸ್.ಟಿ ರೂ.160, ಸಂಜೆ ಕಾಲೇಜು ಪಿ. ಎಚ್.ಡಿ. ರೂ.1350, ಎಸ್.ಸಿ./ಎಸ್.ಟಿ ರೂ.150₹ ,
ಅರ್ಜಿ ಹಾಕಲು ದಾಖಲಾತಿಗಳ ವಿವರ: ಆನ್‌ಲೈನ್ ಅರ್ಜಿ ; ಸೇವಾಸಿಂಧು ಪೋರ್ಟಲ್‌ನಲ್ಲಿ, ವಿದ್ಯಾರ್ಥಿಯ ಭಾವಚಿತ್ರವನ್ನು ಶಾಲಾ ಕಾಲೇಜು ಮುಖ್ಯಸ್ಥರ ಸಹಿ ಮತ್ತು ಮೊಹರು. 2022-23ನೇ ಸಾಲಿನ ಹಳೇ ಬಸ್ ಪಾಸ್ ನಕಲು, ಆಧಾರ್ ಕಾರ್ಡ್ ನಕಲು ಪ್ರತಿ. ಶುಲ್ಕ ಪಾವತಿ ರಶೀದಿ ನಕಲು ಪ್ರತಿ, ಶಾಲಾ/ಕಾಲೇಜಿನ ಗುರುತಿನ ಚೀಟಿ ನಕಲು ಪ್ರತಿ ಗುರುತಿನ ಚೀಟಿ ವಿತರಣೆಯಾಗದಿದ್ದಲ್ಲಿ ತಾತ್ಕಾಲಿಕ ಗುರುತಿನ ಚೀಟಿ ಲಗತ್ತಿಸುವುದು. (ಶಾಲಾ ಕಾಲೇಜು ಮುಖ್ಯಸ್ಥರಿಂದ ದೃಢೀಕರಿಸಿರಬೇಕು), ಎರಡು ಸ್ಟಾಂಪ್ ಅಳತೆಯ ಭಾವಚಿತ್ರ. ಎಸ್.ಸಿ/ಎಸ್.ಟಿ ಜಾತಿ ಪ್ರಮಾಣ ಪತ್ರ, ವಿಳಾಸ ಬದಲಾವಣೆ ಇದ್ದಲ್ಲಿ ವಾಸಸ್ಥಳ ಪ್ರಮಾಣ ಪತ್ರ/ಗ್ರಾಮ ಪಂಚಾಯಿತಿ/ನಗರ ಸಭೆ ಅಥವಾ ನೋಟರಿ ಅಫಿಡವಿಟ್ ಲಗತ್ತಿಸುವುದು.
ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಅನ್ನು ಹಾಸಿನ ವಿಭಾಗದ ಎಲ್ಲಾ ಘಟಕಗಳಲ್ಲಿ ಈಗಾಗಲೇ ವಿತರಿಸುತ್ತಿದ್ದು, ವಿದ್ಯಾರ್ಥಿಗಳು 2022-23ನೇ ಸಾಲಿನ ಬಸ್ ಪಾಸ್ ಪಡೆಯಲು ಸೇವಾಸಿಂಧು ಪೋರ್ಟಲ್‌ನಲ್ಲಿ ಬಸ್ ಪಾಸ್‌ಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕೋವಿಡ್-19 ಹರಡುವಿಕೆಯ ಕಾರಣ ಶಾಲಾ ಕಾಲೇಜಿನ ಮುಖಾಂತರ ಸಂಬಂಧಿಸಿದ ಘಟಕಗಳಿಗೆ ಶುಲ್ಕ ಸಮೇತ ಅರ್ಜಿಯನ್ನು ಮತ್ತು ಸೂಕ್ತ ದಾಖಲಾತಿಗಳನ್ನು ನೀಡಿ ಪಾಸ್ ಪಡೆಯಬಹುದಾಗಿರುತ್ತದೆ -Ksrtc hassan