ಹಾಸನ-ಯಶವಂತಪುರ ಮಾರ್ಗದ ರೈಲು ಸಕಲೇಶಪುರಕ್ಕು ವಿಸ್ತರಣೆಗೆ ಒತ್ತಾಯ

3

ಹಾಸನ/ ಸಕಲೇಶಪುರ/ಬೆಂಗಳೂರು :  ಹಾಸನ ಬೆಂಗಳೂರು, ನಡುವೆ ಸಂಚರಿಸುತ್ತಿರುವ ಹಾಸನ-ಯಶವಂತಪಯರ ಇಂಟರ್ ಸಿಟಿ ಮುಂಜಾನೆಯ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸಬೇಕೆಂಬ ಒತ್ತಾಯ ಹಲವು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಹಾಸನದಿಂದ ಮುಂಜಾನೆ 7.10AM ಗಂಟೆಗೆ ಬಿಟ್ಟು ಸರಿಸುಮಾರು 10AM ರ ವೇಳೆಗೆ ಬೆಂಗಳೂರು ತಲುಪುವ ಹಾಸನ ಯಶವಂತಪುರ ಇಂಟರ್‌ಸಿಟಿ ವಿಸ್ತರಿಸಿದರೆ ಹಾಸನ ಸಕಲೇಶಪುರದವರಿಗು ಅನುಕೂಲ ವಾಗಬಹುದು ಎನ್ನಲಾಗುತ್ತಿದೆ.,

ಬೆಂಗಳೂರಿಗೆ ಹೋಗಬೇಕಾದವರು ಮಧ್ಯಾಹ್ನ ಬರುವ ಕಾರವಾರ, ಯಶವಂತಪುರ ಎಕ್ಸ್ಪ್ರೆಸ್ ರೈಲನ್ನು ಆಶ್ರಯಿಸಬೇಕಾಗಿದೆ. ಈ ರೈಲು ಬೆಂಗಳೂರು ತಲುಪುವಾಗ ರಾತ್ರಿ ಸುಮಾರು 10 ಗಂಟೆಯಾಗಿರುತ್ತದೆ. ಇದರಿಂದಾಗಿ ಹಲವರು ರೈಲಿನಲ್ಲಿ ಹಾಸನ-ಯಶವಂತಪುರ ರೈಲು ಹೋಗಲು ಸಕಲೇಶಪುರ ದವರು ಹಾಸನಕ್ಕೆ ಬಸ್ಸಿನಲ್ಲಿ ಬಂದು ಹೋಗಬೇಕಾಗಿದೆ. ಇಂಟರ್‌ಸಿಟಿ ರೈಲು ಬೆಂಗಳೂರಿನಿಂದ ಪ್ರತಿ ಸಂಜೆ 6.10PM ಕ್ಕೆ ಬಿಟ್ಟು ರಾತ್ರಿ 9PMರ ವೇಳೆಗೆ ಹಾಸನ ತಲುವುತ್ತದೆ.ಹಾಗೆಯೇ ಸಕಲೇಶಪುರಕ್ಕೆ ಮುಂದುವರೆಸಿದರೆ ರಾತ್ರಿ ಪಾಳಯದಲ್ಲಿ ಬಸ್ ಹಿಡಿಯುವ ಅವಶ್ಯಕತೆ ಇರುವುದಿಲ್ಲ ,  ಸಕಲೇಶಪುರದಿಂದ ದಿನನಿತ್ಯ ನೂರಾರು ಮಂದಿ ಬೆಂಗಳೂರಿಗೆ ಸಾಮಾನ್ಯ ಹೋಗುವರಿದ್ದು ಇದರಲ್ಲಿ ಹಲವು ಪ್ರಯಾಣಿಕರು ಉಪಯೋಗ ಪಡೆದುಕೊಳ್ಳಬಹುದು ಎಂದು

ನಾರಾಯಣ ಆಳ್ವ ಅಧ್ಯಕ್ಷರು, ತಾಲೂಕು ರೈಲ್ವೆ ಪ್ರಯಾಣಿಕರ ರಕ್ಷಣಾ ವೇದಿಕೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಸ್ ಮುಖಾಂತರ ಬೆಂಗಳೂರಿಗೆ ಹೋದರೆ ಇನ್ನು ಕೆಲವರು ಬಸ್‌ನಲ್ಲಿ ಮುಂಜಾನೆ ಹಾಸನಕ್ಕೆ ಇನ್ನು ಸಂಪೂರ್ಣ ದುರಸ್ತಿಯಾಗದ ರಸ್ತೆಯಲ್ಲಿ ಹಾಸನಕ್ಕೆ ಹೋಗಿ , ಹಾಸನದಿಂದ ರೈಲಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾರೆ. ಆದರೆ ಈ ಪ್ರಯಾಣಕ್ಕಾಗಿ ಹೆಚ್ಚಿನ ಹಣ ವ್ಯಯ ಮಾಡಬೇಕಾಗಿರುವುದರಿಂದ ಬಹುತೇಕ ಮಂದಿ ಬಸ್‌ನಲೇ ಬೆಂಗಳೂರಿಗೆ ಹೋಗುತ್ತಿದ್ದಾರೆ ನೇರ ಬೆಂಗಳೂರಿಗೆ. ,  ಬೆಂಗಳೂರಿಗೆ ಹೋಗುತ್ತಿರುವ ಇಂಟರ್‌ಸಿಟಿ  ಸಕಲೇಶಪುರದವರೆಗೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು.

ಹಾಸನ ಯಶವಂತಪುರ ಇಂಟರ್ ಸಿಟಿ ರೈಲು ಸಕಲೇಶಪುರ-ಬೆಂಗಳೂರು ನಡುವೆ ತಿರುಗಾಡುವ ಸಾವಿರಾರು ಮಂದಿಗೆ ಅನುಕೂಲವಾಗುತ್ತದೆ. ಕೇವಲ ಸಕಲೇಶಪುರ ಮಾತ್ರವಲ್ಲ ಆಲೂರು , ಬಾಳ್ಳುಪೇಟೆ ಇತರೆ ಜನಕ್ಕೂ ಇದರಿಂದ ಅನುಕೂಲ ವಾಗುತ್ತದೆ. ಈ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸಬೇಕೆಂದು ಸಾರ್ವಜನಿಕರಿಂದ ಒತ್ತಾಸೆಯಿದ್ದರೂ ಸಹ ಈ ಕುರಿತು ಸಂಸದರು ಹಾಗೂ ಶಾಸಕರು ಇಲಾಖೆಗೆ ಒತ್ತಾಯ ಹೇರಬೇಕಿದೆ,

ಯಶವಂತಪುರ-ಹಾಸನ ಇಂಟರ್ ಸಿಟಿ ಸಕಲೇಶಪುರದವರೆಗೆ ವಿಸ್ತರಿಸಲು ನಿಮ್ಮ ಅಭಿಪ್ರಾಯ ಕಮೆಂಟ್ ನಲ್ಲಿ ತಿಳಿಸಿ.

3 COMMENTS

 1. Hassan Distick
  Alur thaluku
  Alur railway station lli stop koduvantthe madi
  Alur nalli vasisisuva janarigu anukulavaguthaddhe

 2. Nice proposals but it must not be an “Aranya Rodhana”.Must be implemented at anycost. May Sri Sakaleswara Swamy BLESS EVERYONE WHO 💪SUPPORTS REALLY

  MEAN TIME DC MUST GIVE APPROPRIATE ORDERS TO ARRANGE KSRTC BUSSESS TO & FRO TO RAILWAY STATION FROM TOWN BOTH FOR UP & DOWN DURING TRAIN TIMINGS

  ON BE HALF OFF ALL CITIZENS

  LION MJF A. G. NANJUNDA SHETTY
  SAKALESHPUR. MOB 9964838830

LEAVE A REPLY

Please enter your comment!
Please enter your name here