ನಿಮ್ಮ ಮನೆಯ ಉತ್ಸವದಂತೆ ಯಶಸ್ವಿಗೊಳಿಸಿ ; ಈ ಬಾರಿ ಹೊಸ ಮೆರುಗು: ಮೊದಲ ಸಲ ವಾರ್ ರೂಂ ಸ್ಥಾಪನೆ: ಹೆಚ್ಚುವರಿ ಬಸ್ ಸೌಲಭ್ಯ

0

ಹಾಸನ: ಈ ಬಾರಿಯ ಹಾಸನಾಂಬೆ ಉತ್ಸವಕೆ ವಿಜೃಂಭಣೆ ಜೊತೆಗೆ ಹೊಸ ಮೆರುಗು ನೀಡಲಾಗುತ್ತಿದ್ದು, ಯಾರಿಗೂ ತೊಂದರೆ, ಅನನುಕೂಲ ಆಗದಂತೆ ಜಾತ್ರೆಯ ಯಶಸ್ಸಿಗೆ ಅಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಕರೆ ನೀಡಿದರು. ಈ ಬಾರಿಯದ್ದು, ಇತಿಹಾಸದಲ್ಲಿ ಉಳಿಯೋ ರೀತಿ ಜಾತ್ರಾ ಮಹೋತ್ಸವ ಆಗಬೇಕು. ನಿಮ್ಮ ಮನೆಯ ಉತ್ಸವದ ರೀತಿ ಅಧಿಕಾರಿಗಳು ತೊಡಗಿಸಿಕೊಳ್ಳಿ. ಈ ಮೂಲಕ ಜಿಲ್ಲೆಗೆ ಕೀರ್ತಿ ತರುವ ಕೆಲಸ ಮಾಡಿ. ಯಾರಿಗೂ ತೊಂದರೆ, ಅಸಮಾಧಾನ ಆಗದ ರೀತಿ ಎಲ್ಲರೂ ಸೇರಿ ಹಬ್ಬವನ್ನು ಯಶಸ್ವಿ ಮಾಡೋಣ ಎಂದರು.
ದೇವಿ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ನೆರಳು, ಕಾಲು ಮ್ಯಾಟ್, ಫ್ಯಾನ್, ಕುಡಿಯುವ ನೀರು ಜೊತೆಗೆ ಬ್ಯಾರಿಕೇಡ್ ಅಳವಡಿಸಬೇಕು. ಗರ್ಭಗುಡಿಯ ಪೂಜೆ ಎಲ್ಲರಿಗೂ ಕಾಣುವ ರೀತಿ ಇರಬೇಕು, ಎಲ್ಲೂ ಕೂಡ ನೂಕಾಟ,ಕಿರುಚಾಟ ಆಗಬಾರದು ಎಂದು ಸೂಚನೆ ನೀಡಿದರು.


ಹಲವು ರೀತಿಯ ಸಿದ್ಧತೆ:
ಸಭೆಯ ಆರಂಭದಲ್ಲಿ ಮಾತನಾಡಿದ ದೇವಾಲಯದ ಆಡಳಿತಾಧಿಕಾರಿಯೂ ಆಗಿರುವ ಎಸಿ ಮಾರುತಿ, ಏನೆಲ್ಲಾ ಸಿದ್ಧತೆ ಆಗಿದೆ ಎಂಬುದನ್ನು ಸಚಿವರ ಗಮನಕ್ಕೆ ತಂದರು. ಪೂಜಾ ವೇಳಾಪಟ್ಟಿ ಸಿದ್ಧವಾಗಿದ್ದು, ದಿನದ 24 ಗಂಟೆ ಪೂಜಾ ವ್ಯವಸ್ಥೆಗೆ ಯೋಜನೆ ಮಾಡಲಾಗಿದೆ, ಹೂವಿನ ಅಲಂಕಾರಕ್ಕೆ ಟೆಂಡರ್ ಮುಕ್ತಾಯ ಆಗಿದೆ ಎಂದು ವಿವರಿಸಿದರು. ಕಳೆದ ಬಾರಿ ಆರ್ಚ್ ಸಂಖ್ಯೆಯನ್ನು 5ಕ್ಕೆ ಹೆಚ್ಚಿಸಲಾಗುವುದು. ಸರ್ಕಾರಿ ಕಚೇರಿಗಳಿಗೆ 15 ದಿನ ಲೈಟಿಂಗ್ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ದರ್ಶನದ ನೇರ ಪ್ರಸಾರದ ವ್ಯವಸ್ಥೆ ಜೊತೆಗೆ ಮುಖ್ಯವಾಗಿ ಸಂಚಾರಿ ಶೌಚಾಲಯಗಳ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಲಾಗಿದೆ ಎಂದರು.
ಹಾಗೆಯೇ 10.8 ಕಿಮೀ ರನ್ನಿಂಗ್ ಬ್ಯಾರಿಕೇಡ್, ಮಾಧ್ಯಮದವರು, ಅಧಿಕಾರಿಗಳಿಗೆ ಡಿಜಿಟಲ್ ಕಾರ್ಡ್ ವಿತರಣೆ ಮಾಡಲಾಗುತ್ತಿದ್ದು, ಸ್ಕಾö್ಯನ್ ಮಾಡಿ ಒಳ ಬಿಡಲು ಖಾಸಗಿ ಏಜೆನ್ಸಿ ಬಳಸಿಕೊಳ್ಳಲಾಗುತ್ತಿದೆ. ಗರ್ಭಗುಡಿ ಮುಂಭಾಗ ಎಸಿ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಣೆ ನೀಡಿದರು.


ಎಲೆಕ್ಟಿçಕ್ ವಾಹನ ಬಳಕೆ:
ಅಂಗವಿಕಲರು, ವೃದ್ಧರಿಗಾಗಿ ಎಲೆಕ್ಟಿçಕ್ ವಾಹನ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದ ಎಸಿ, ನೀರು ಮಜ್ಜಿಗೆ ವಿತರಣೆ ಜೊತೆಗೆ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಹೆಲಿ ಟೂರಿಸಂ ವ್ಯವಸ್ಥೆ ಮಾಡಿ ಪ್ರವಾಸಿ ತಾಣಗಳ ವೀಕ್ಷಣೆಗೆ ಪ್ಯಾಕೇಜ್ ಟೂರ್ ಮಾಡಲಾಗುತ್ತಿದೆ ಎಂದು ಹೇಳಿದರು. ಈ ಸಲ ಜಿಲ್ಲಾಡಳಿತದಿಂದಲೇ ಸಿಬ್ಬಂದಿಗೆ ಊಟ, ಉಪಹಾರ ಮಾಡಲಾಗುತ್ತಿದ್ದು, ಬಿಸಿಎಂ ಇಲಾಖೆಗೆ ವಹಿಸಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹಣ ಎಷ್ಟೇ ಖರ್ಚಾದರೂ ಸರಿ, ಊಟ, ಉಪಹಾರ ಉತ್ತಮವಾಗಿರಲಿ ಎಂದು ಸೂಚಿಸಿದರು. ಜನ ಸಂದಣಿ ಗಮನಿಸಿ ನಿರ್ವಹಣೆ ಮಾಡಲು ಅಧಿಕಾರಿ ನಿಯೋಜಿಸಿ, ಅದಕ್ಕಾಗಿ ಟೀಂ ಮಾಡಿಕೊಳ್ಳಿ ಎಂದು ಇದೇ ವೇಳೆ ಸಚಿವರು ಹೇಳಿದರು. ಗಣ್ಯರಿಗೆ ಅರ್ಚನೆ ಮಾಡಿರುವುದನ್ನು ಕಡಿಮೆ ಮಾಡಿ, ಆಗ ಒತ್ತಡ ಕಡಿಮೆ ಆಗಲಿದೆ, ಏಕೆಂದರೆ ಶಕ್ತಿ ಯೋಜನೆಯಿಂದಾಗಿ ಈ ಬಾರಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದೆ. ಬಂದವರು ಸಮಾಧಾನದಿಂದ ಹೋಗಬೇಕು ಎಂದು ಸಚಿವರು ಹೇಳಿದರು. ಸಭೆಯಲ್ಲಿ ಎಸ್ಪಿ ಮೊಹಮದ್ ಸುಜೀತಾ, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ಎಡಿಸಿ ಕೆ.ಟಿ.ಶಾಂತಲಾ ಇತರಿದ್ದರು. ಸಭೆಯ ಬಳಿಕ ಸಚಿವರು ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಹಲವು ಸಲಹೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಸತ್ಯಭಾಮ ಸಿ. ಮಾತನಾಡಿ, ಸಿಸಿ ಕ್ಯಾಮೆರಾ ವಾಚಿಂಗ್ ಮಾಡಲು ವಾರ್‌ರೂಂ ತೆರೆಯಲಾಗುತ್ತಿದೆ. ಅಲ್ಲಿಂದ ಮಾನಿಟರ್ ಮಾಡಲು, ಗುಂಪು ಜಗಳ ಕಂಡು ಹಿಡಿಯಲಾಗುವುದು. ಎಲ್ಲಾದ್ರೂ ಹೆಚ್ಚು ಕಡಿಮೆ ಆದ್ರೆ ಕೂಡಲೇ ಮೆಜೇಜ್ ಕೊಡಬಹುದು. ಹಾಗೆಯೇ ವಾಕಿ ಟಾಕಿ ವ್ಯವಸ್ಥೆ ಕೂಡ ಇರಲಿದೆ. ಮೊಬೈಲ್ ರೀಚ್ ಆಗದೇ ಇದ್ದಾಗ, ತಕ್ಷಣ ಮೆಸೇಜ್ ಪಾಸ್ ಸರ ಕಳವು, ಮಿಸ್ಸಿಂಗ್ ಇತ್ಯಾದಿ ಪ್ರಕರಣ ಪತ್ತೆ ಹಾಗೂ ತುರ್ತು ಮೆಸೇಜ್ ರವಾನೆ ಮಾಡಲು ಅನುಕೂಲ ಆಗಲಿದೆ ಎಂದರು.

ಹೆಚ್ಚುವರಿ ಬಸ್ ವ್ಯವಸ್ಥೆ:
ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗಾಗಿ ಕೆಎಸ್‌ಆರ್‌ಟಿಸಿ ಪ್ಯಾಕೇಜ್ ಟೂರ್ ವ್ಯವಸ್ಥೆ ಮಾಡಿಕೊಂಡಿದೆ. ಕಳೆದ ಬಾರಿ 20 ಬಸ್ ಬಿಡಲಾಗಿತ್ತು. ಈ ಬಾರಿ 50 ರಿಂದ 100 ಬಸ್ ಬಿಡಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಸಹಾಯವಾಣಿ ತೆರೆಯಿರಿ, ಜನರಿಗೆ ಬಸ್ ಅವಶ್ಯಕತೆ ಇದ್ದಾಗ ಕಾಲ್ ಮಾಡಿದರೆ ತಕ್ಷಣ ಸ್ಪಂದಿಸಿ ಜನರಿಂದ ಬೇಡಿಕೆ ಬಂದ 10-15 ನಿಮಿಷದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಹಾಸನಾಂಬೆ ಉತ್ಸವಕೆ ನಡೆಸಿರುವ ಪೂರ್ವ ಸಿದ್ಧತೆ ನನಗೆ ಸಮಾಧಾನ ತಂದಿದೆ. ವಿಜೃಂಭಣೆಯಿAದ ಉತ್ಸವ ನಡೆಯಬೇಕು. ಇದಕ್ಕಾಗಿ ಪೂರಕ ಸಲಹೆ ನೀಡಿದ್ರೆ ಸ್ವೀಕಾರ ಮಾಡುತ್ತೇವೆ. ಕಳೆದ ವರ್ಷ 6 ಲಕ್ಷ ಮಂದಿ ದೇವಿ ದರ್ಶನ ಪಡೆದಿದ್ದು, ಈ ಬಾರಿ ಅಂದಾಜು 10 ಲಕ್ಷ ಜನ ಬರುವ ನಿರೀಕ್ಷೆ ಇದೆ. ಭಕ್ತಾಧಿಗಳಿಗೆ ಯಾವುದೇ ಅನನುಕೂಲ ಆಗದಂತೆ ಎಚ್ಚರವಹಿಸಿ. -ಕೆ.ಎನ್.ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವ , ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿ; ಸೋಲಿಸಲು ನಾವು ಸಿದ್ಧತೆ ಮಾಡಿಕೊಳ್ಳುತ್ತೇವೆ: ಸಚಿವ ಕೆ.ಎನ್.ರಾಜಣ್ಣ

  • ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿ, ಯಾರಾದರೂ ಅಭ್ಯರ್ಥಿಯಾಗಲಿ ನಮಗೆ ಸಂಬಂಧವಿಲ್ಲ
  • ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ: ಸಚಿವ ಕೆ.ಎನ್.ರಾಜಣ್ಣ
  • ಮೂವರು ಡಿಸಿಎಂ ಮಾಡುವ ತೀರ್ಮಾನ ಹೈಕಮಾಂಡ್ಗೆ ಬಿಟ್ಟದ್ದು

ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೂವರು ಡಿಸಿಎಂ ಮಾಡುವ ವಿಚಾರವಾಗಿ ಕೇಂದ್ರ ಹೈಕಮಾಂಡ್ ಗಮನಕ್ಕೆ ತಂದಿದ್ದೀನಿ. ತೀರ್ಮಾನ ಏನು ತೆಗೆದುಕೊಳ್ಳುತ್ತಾರೋ ಅವರಿಗೆ ಬಿಟ್ಟದ್ದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮೂರು ಡಿಸಿಎಂ ಬಗ್ಗೆ ಹೇಳಿದ್ದು ಆಯ್ತು, ಜನರ ಭಾವನೆ ಏನಿದೆ ಎಂಬುದನ್ನು ತಿಳಿದುಕೊಂಡಿದ್ದು ಆಯ್ತು, ಹೈಕಮಾಂಡ್ ಏನು ತೀರ್ಮಾನ ಮಾಡಬೇಕೋ ಮಾಡ್ತಾರೆ ಎಂದರು. ಸುಮ್ಮನೆ ಕೂರಲು ಆಗಲ್ಲ. ಕೆಲವೇ ದಿನಗಳಲ್ಲಿ ಕಾಂಗ್ರೆಸ್ನಲ್ಲಿ ಅಸಮಾಧಾನ ಸೋಟವಾಗಲಿದೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಯಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ರಾಜಕಾರಣದಲ್ಲಿ ಸುಮ್ಮನೆ ಕುಳಿತಿರಲು ಆಗುತ್ತಾ ಸುಮ್ಮನೆ ಏನಾದರೂ ಒಂದು ಹೇಳುತ್ತಿರಬೇಕಲ್ಲ, ನೀವು ಹೋಗಿ ಕೇಳುತ್ತೀರಿ ಏನಾದರೂ ಒಂದು ಹೇಳಲೇಬೇಕಲ್ಲ, ನಾಳೆನೇ ಸರಕಾರ ಬಿದ್ದೋಗುತ್ತೆ ಅಂತ ನಾನು ಹೇಳಿಬಿಟ್ರೆ ಆಗ್ಬಿಡುತ್ತಾ? ಅದನ್ನು ಕೂಡ ಕಾಲವೇ ನಿರ್ಣಯ ಮಾಡುತ್ತೆ ಎಂದು ಟಾಂಗ್ ನೀಡಿದರು.

LEAVE A REPLY

Please enter your comment!
Please enter your name here