ಅರಸೀಕೆರೆ ಮಾಲೇಕಲ್ ತಿರುಪತಿ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ರಥೋತ್ಸವ ನಾಳೆ ನಡೆಯಲಿದೆ ಇಂದಿನಿಂದಲೇ ಭಕ್ತಾದಿಗಳು ಆಗಮಿಸುತ್ತಿದ್ದಾರೆ ಹಾಗೂ ಜಾತ್ರೆಯ ರಂಗು ಈಗಾಗಲೇ ಬಂದಿದೆ ಭಕ್ತಾದಿಗಳಿಗೆ ಬಸ್ ಕೇವಲ 10 ರೂಪಾಯಿ
ಭಕ್ತಾದಿಗಳಿಗೆ ಕೆಲವು ಮಾಹಿತಿ ದೇವಾಲಯದ ಪ್ರಕಾರದೊಳಗೆ ಮಾರ್ಬಲ್ ಹಾಕಲಾಗಿದ್ದು ಸೋನೆ ಮಳೆಯೂ ಬರುತ್ತಿರುವುದರಿಂದ ಬಹಳ ಜಾರಿಕೆ ಇದೆ ಜಾರಿ ಬೀಳುವ ಸಾಧ್ಯತೆಯೂ ಹೆಚ್ಚು ಹಿರಿಯರನ್ನು ವೃದ್ಧರನ್ನು ಮಕ್ಕಳನ್ನು ಕರೆತರುವ ಭಕ್ತಾದಿಗಳು ಬಹಳ ಎಚ್ಚರಿಕೆಯಿಂದ ದೇವಾಲಯ ಪ್ರದಕ್ಷಣೆಯನ್ನು ಮಾಡಿಸಿ,
ಮಾಲೆಕಲ್ ತಿರುಪತಿಗೆ ಬರಲು ಸಾರಿಗೆ ಬಸ್ ಬಹಳ ಅನುಕೂಲ ಬಸ್ ಚಾರ್ಜ್ 10 ರೂ ಮಾತ್ರ ಇದು ದೇವಾಲಯ ಸಮೀಪದವರೆಗೂ ಬರುತ್ತದೆ ದ್ವಿಚಕ್ರ ವಾಹನಗಳನ್ನು ಒಂದು ಕಿಲೋಮೀಟರ್ ಮೊದಲೇ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮಕ್ಕಳೊಂದಿಗೆ ಕುಟುಂಬ ಸಮೇತರಾಗಿ ಬೈಕಲ್ಲಿ ಬರುವವರು ಸ್ವಲ್ಪ ದೂರವೇ ನಡೆಯಬೇಕಾಗುತ್ತದೆ. ಆಟೋ ಮತ್ತು ಕಾರುಗಳಲ್ಲಿ ಬರುವ ಭಕ್ತಾದಿಗಳಿಗೆ ಇನ್ನೂ ಸ್ವಲ್ಪ ಮುಂದಕ್ಕೆ ಬರುವ ಅವಕಾಶ ಕಲ್ಪಿಸಲಾಗಿದೆ. ಆದರೂ ಅರ್ಧ ಕಿಲೋಮೀಟರ್ ನಡೆಯಲೇಬೇಕು. ಸೋನೆ ಮಳೆಯೂ ಬರುತ್ತಿದೆ. ವೃದ್ಧರನ್ನು ಕರೆತರುವವರು ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳಿತು.
ಒಡವೆ ಹಾಗೂ ಪರ್ಸ್ ಮತ್ತು ಕಿಸೆ ಬಗ್ಗೆ ಎಚ್ಚರವಿರಲಿ ಒಡವೆ ಪ್ರದರ್ಶನ ಬೇಡ ಎಂಬುದು ಪೊಲೀಸ್ ಸೂಚನೆಯೂ ಹೌದು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇದೆ.