ಇಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಇಬ್ಬರು : ಸೀಮಾ ಅವರ ಪತಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ; ಒಂದು ತಿಂಗಳ ಹಿಂದಷ್ಟೇ ಹೆಂಡತಿ ಮಕ್ಕಳಿ‌ ನೋಡಿ ವಾಪಸ್ಸಾಗಿದ್ದರು 😢

0

ಹಾಸನ: ತಾಯಿ, ಮಗ ಹೋಗುತ್ತಿದ್ದ ಎಲೆಕ್ಟಿಕ್ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲೇ ಮೃತಪಟ್ಟ ಘಟನೆ ನಗರ ಹೊರವಲಯದ ಬಿ.ಟಿ. ಕೊಪ್ಪಲಿನಲ್ಲಿ ನಡೆದಿದೆ.

ನಗರದ ವಾಸಿಗಳು ಹಾಗೂ ಕೊಡಗು ಜಿಲ್ಲೆಯ ಶನಿವಾರ ಸಂತೆಯ ಮೂಲದವರಾದ ಸೀಮಾ 38) ಮತ್ತು ಮಯೂರ (12) ಎಂಬುವವರೇ ಮೃತಪಟ್ಟ ದುರ್ದೈವಿಗಳು.

ಸೀಮಾ ಅವರು ಇಂದು ಬೆಳಗ್ಗೆ ಮಗ ಮಯೂರನನ್ನು ಕೇಂದ್ರೀಯ ವಿದ್ಯಾಲಯಕ್ಕೆಂದು ಬಿಡಲು ಎಲೆಕ್ಟಿಕ್ ಬೈಕಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಲಾರಿಯ ಚಾಲಕ ತನ್ನ ಅತಿವೇಗ ಮತ್ತು ಅಜಾಗರೂಕತೆಯ ಪರಿಣಾಮ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ತೀವ್ರ ಗಾಯಗೊಂಡ ಅಮ್ಮ, ಮಗ ಇಬ್ಬರು ರಕ್ತಸ್ರಾವ ಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಗನ ವ್ಯಾಸಂಗ ಹಿನ್ನೆಲೆ ತಿಂಗಳ ಹಿಂದಷ್ಟೇ ಶನಿವಾರ ಸಂತೆಯಿಂದ ಹಾಸನಕ್ಕೆ ಬಂದಿದ್ದರು. ಸೀಮಾ ಅವರ ಪತಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯೋಧನಾದಸೀಮಾ ಅವರ ಪತಿ

ವಾರದ ಹಿಂದಷ್ಟೇ ಪತ್ನಿ-ಮಗನನ್ನು ನೋಡಿಕೊಂಡು ಹೋಗಿದ್ದರು. , ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತ ಎಸಗಿದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here