ಮಕ್ಕಳು ಹೀಗೇಕೆ ಕಾಣೆಯಾಗ್ತಿದ್ದಾರೆ | ಈ ಬಾಲಕಿ ಸಿಕ್ಕರೆ ನೊಂದ ಕುಟುಂಬಸ್ಥರಿಗೆ ತಿಳಿಸಿ ಸಹಾಯ ಮಾಡಿ ಫೋನ್ : 112

0

ಶಾಲೆಗೆ ಹೋಗಿದ್ದ 7 ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ..

ಹಾಸನ : ಎಂದಿನಂತೆ ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಘಟನೆ ತಾಲೂಕಿನ ಅಣತಿ ಗ್ರಾಮದಲ್ಲಿ ನಡೆದಿದೆ.

ಚನ್ನರಾಯಪಟ್ಟಣ ತಾಲೂಕಿನ ದಾಸರಹಳ್ಳಿ ಗ್ರಾಮದ ಕುಮಾರ್ ಎಂಬುವವರ ಸಾಕು ಮಗಳು ನಂದಿತಾ ಕಾಣೆಯಾದ ವಿದ್ಯಾರ್ಥಿನಿಯಾಗಿದ್ದು ಅಣತೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ನಂದಿತ ಶಾಲೆಯ ಹಾಸ್ಟೆಲ್ ನಲ್ಲಿ ಉಳಿದುಕೊಳ್ಳುತ್ತಿದ್ದಳು. ನವೆಂಬರ್ 7ರಂದು ಎಂದಿನಂತೆ ಶಾಲೆ ಮುಗಿದ ಬಳಿಕ ಹಾಸ್ಟೆಲ್ ಗೆ ವಾಪಸ್ ಆಗದೆ ನಾಪತ್ತೆಯಾಗಿದ್ದಾಳೆ.

ಮೂಲತಃ ಕೆ.ಆರ್.ಪೇಟೆ, ತಾಲ್ಲೂಕಿನ ನಂಜೇಗೌಡ ಮಂಗಳ ದಂಪತಿ ಪುತ್ರಿ ನಂದಿತಾಳನ್ನು ತಾಲೂಕಿನ  ದಾಸರಹಳ್ಳಿ ಗ್ರಾಮದ ಕುಮಾರ್ ಸಾಕಿಕೊಂಡು ವಿದ್ಯಾಭ್ಯಾಸ  ಕೊಡಿಸುತ್ತಿದ್ದರು. ನವೆಂಬರ್ 7 ಸೋಮವಾರದಂದು ಶಾಲೆಗೆ ಬಂದಿದ್ದ ನಂದಿತಾ ಸಂಜೆಯವರೆಗೂ ಶಾಲೆ ಮುಗಿಸಿ ವಾಪಸ್ ಹೋಗಿದ್ದಾಳೆ. ಶಿಕ್ಷಕರು ವಿದ್ಯಾರ್ಥಿಗಳೆಲ್ಲಾ ಹೋದ ಕೆಲಹೊತ್ತಿನಲ್ಲೇ ವಾಪಸ್ ಶಾಲೆಗೆ ಬಂದಿರುವ ನಂದಿತಾ ಶಾಲಾ ಆವರಣದಲ್ಲಿ ಬ್ಯಾಗ್ ಇಟ್ಟು ದಿಢೀರ್ ಕಾಣಿಯಾಗಿದ್ದಾಳೆ.

ಸೋಮವಾರ ಶಾಲೆ ಮುಗಿಸಿ ನಂದಿತಾ ಹಾಸ್ಟೆಲ್ ಗೆ ಬರದ ಕಾರಣ  ನಂದಿತಾ ಅವರ ತಾತ ಕುಮಾರ್ ಗೆ ಹಾಸ್ಟೆಲ್ ವಾರ್ಡನ್ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕುಮಾರ್ ತಕ್ಷಣವೇ ನುಗ್ಗೆಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಹಾಗೂ ದಾಸರಹಳ್ಳಿ ಗ್ರಾಮದ ಗಿರೀಶ್ ನನ್ನ ಮಗಳನ್ನು ಕರೆದುಕೊಂಡು ಹೋಗಿರಬಹುದು ಹಾಗೂ ನನ್ನ ಮಗಳು ತನ್ನ ಪೋಷಕರಿಗೆ ಫೋನ್ ಮಾಡಿ ಕೊಡು ಎಂದಾಗ ಅವನ ಫೋನ್ ನಿಂದ ಕರೆ ಮಾಡಿಕೊಟ್ಟಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಕುಮಾರ್ ಅವರ ಅಪರೂಪದ ಮೇರೆಗೆ ಗಿರೀಶ್ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆಯನ್ನು ಚುರುಕುಗಳಿಸಿದ್ದು ಇವರೆಗೆ ವಿದ್ಯಾರ್ಥಿನಿ ನಂದಿತಾ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here