ನಿಗೂಢ ರೀತಿಯಲ್ಲಿ ನಾಪತ್ತೆಯಾಗಿ, ಆತಂಕ ಮೂಡಿಸಿದ್ದ ಬಾಲಕಿ‌ ಸಿಕ್ಕಿದ್ದಾಳೆ

0

ಹಾಸನ: ಶಾಲೆಯಿಂದ  ನಿಗೂಢ ರೀತಿಯಲ್ಲಿ ನಾಪತ್ತೆಯಾಗಿ, ಆತಂಕ ಮೂಡಿಸಿದ್ದ ಬಾಲಕಿ‌ ಶುಕ್ರವಾರ ತುಮಕೂರು ಜಿಲ್ಲೆಯಲ್ಲಿ ಪತ್ತೆಯಾಗಿದ್ದಾಳೆ.

ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಅಣತಿ ಗ್ರಾಮದ 14 ವರ್ಷದ ಬಾಲಕಿ ನಂದಿತಾ ನ.7 ರಂದು ಶಾಲೆಗೆ ಹೋದವಳು ವಾಪಸ್ ಮನೆಗೂ ಬಾರದೆ, ಹಾಸ್ಟೆಲ್ಗೂ ತೆರಳದೆ ಕಾಣೆಯಾಗಿದ್ದಳು. ಇದರಿಂದ ಆತಂಕಗೊಂಡ ಪೋಷಕರು,  ಈ ಸಂಬಂಧ ನವೆಂಬರ್ 8 ರಂದು ನುಗ್ಗೇಹಳ್ಳಿ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಪ್ರಕರಣ ‌ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯವಳಿ  ಸೇರಿ ನಾನಾ ಭಾಗಗಳಲ್ಲಿ ಪರಿಶೀಲನೆ ‌ನಡೆಸಿ ಕೊನೆಗೆ, ಶುಕ್ರವಾರ  ತುಮಕೂರು ಜಿಲ್ಲೆಯಲ್ಲಿ ಪತ್ತೆ ಹಚ್ಚಿದ್ದಾರೆ.

LEAVE A REPLY

Please enter your comment!
Please enter your name here