ಹಾಸನ: ನಗರದ ಡಿಟಿಡಿಸಿ ಕೊರಿಯರ್ ಶಾಪ್‌ಗೆ ಪಾರ್ಸೆಲ್ ಬಂದಿದ್ದ ಮಿಕ್ಸಿ ಬ್ಲಾಸ್ಟ್

0

ಮಿಕ್ಸಿ ಬ್ಲಾಸ್ಟ್: ಗಾಯ

ಹಾಸನ: ನಗರದ ಡಿಟಿಡಿಸಿ ಕೊರಿಯರ್ ಶಾಪ್‌ಗೆ ಪಾರ್ಸೆಲ್ ಬಂದಿದ್ದ ಮಿಕ್ಸಿ ಬ್ಲಾಸ್ಟ್ ಆಗಿ ವ್ಯಕ್ತಿಯೊಬ್ಬ ಗಾಯಗೊಂಡಿರುವ
ಘಟನೆ ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ನಡೆದಿದೆ. ಅಂಗಡಿ ಮಾಲೀಕ ಶಶಿ ಎಂಬುವರು ಗಂಭೀರ ಗಾಯಗೊಂಡಿದ್ದು


ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುವೆಂಪುನಗರದ 16 ನೇ ಕ್ರಾಸ್‌ನಲ್ಲಿರುವ ಡಿಟಿಡಿಸಿ ಕೊರಿಯರ್ ಅಂಗಡಿಗೆ ಪಾರ್ಸೆಲ್ ಬಂದಿದ್ದ ಮಿಕ್ಸಿಯನ್ನು

ಶಶಿ ಗ್ರಾಹಕರೊಬ್ಬರಿಗೆ ನೀಡಿದ್ದರು.
ಆದರೆ ಆ ವ್ಯಕ್ತಿ ಮಿಕ್ಸಿ ಜಾರ್ ನಮಗೆ ಬೇಡ ಎಂದು ಅಂಗಡಿ ಮಾಲೀಕನಿಗೆ ವಾಪಸ್ ನೀಡಿದ್ದರು. ಶಶಿ ಅದನ್ನು ಪರೀಕ್ಷೆ ಮಾಡುವ ವೇಳೆ
ಏಕಾಏಕಿ ಸ್ಫೋಟಗೊಂಡು, ಕೈ ಇತರೆ ಭಾಗಕ್ಕೆ ಗಾಯಗಳಾಗಿವೆ. ಅಂಗಡಿಯಲ್ಲಿದ್ದ ಇತರೆ ವಸ್ತುಗಳಿಗೆ

ಸಣ್ಣಪುಟ್ಟ ಹಾನಿಯಾಗಿದೆ. ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಎಸ್ಪಿ ಆಸ್ಪತ್ರೆಗೆ ಭೇಟಿ ನೀಡಿದ್ದರು.

LEAVE A REPLY

Please enter your comment!
Please enter your name here