ತಾಳಗುಪ್ಪ – ಹಾಸನ – ಮೈಸೂರು ಪ್ಯಾಸೆಂಜರ್ ರೈಲು ಸಮಯ

0

ತಾಳಗುಪ್ಪ- ಮೈಸೂರು ಪ್ಯಾಸೆಂಜರ್ ರೈಲು ಪುನಾರಂಭ

ರೈಲ್ವೆ ಇಲಾಖೆಯು ಶಿವಮೊಗ್ಗಕ್ಕೆ ಮತ್ತೊಂದು ರೈಲಿನ ಕೊಡುಗೆ ನೀಡಿದೆ. ತಾಳಗುಪ್ಪ- ಮೈಸೂರು- ತಾಳಗುಪ್ಪ ನಡುವೆ ರೈಲು ಜು.24ರಿಂದ ಸಂಚಾರ ಆರಂಭಿಸಲಿವೆ.

ಮೈಸೂರಿನಿಂದ ಮಧ್ಯಾಹ್ನ 2ಗಂಟೆಗೆ ಹೊರಡುವ ರೈಲು ಹಾಸನಕ್ಕೆ 4.28ಕ್ಕೆ ತಲುಪಲಿದೆ , ಶಿವಮೊಗ್ಗಕ್ಕೆ ರಾತ್ರಿ 8.30ಕ್ಕೆ, ತಾಳಗುಪ್ಪವನ್ನು ರಾತ್ರಿ 11.30ಕ್ಕೆ ತಲುಪಲಿದೆ.

ತಾಳಗುಪ್ಪದಿಂದ ಬೆಳಗ್ಗೆ 6.10ಕ್ಕೆ ಹೊರಟು, ಶಿವಮೊಗ್ಗಕ್ಕೆ ಬೆಳಗ್ಗೆ 8.15ಕ್ಕೆ, ಅರಸೀಕೆರೆ ಗೆ 11.15ಕ್ಕೆ , ಹಾಸನಕ್ಕೆ 12.28ಕ್ಕೆ ,  ಮೈಸೂರಿಗೆ ಮಧ್ಯಾಹ್ನ 3.35ಕ್ಕೆ ತಲುಪಲಿದೆ. ಈ ರೈಲುಗಳಲ್ಲಿ 10 ದ್ವಿತೀಯ ದರ್ಜೆ 10 ಬೋಗಿಗಳು, ಸರಕು ಸಾಗಣೆ ಮತ್ತು ಬ್ರೆಕ್ ಬೋಗಿಗಳು ಇರಲಿವೆ.

ತಾಳಗುಪ್ಪದಿಂದ ಹೊರಡುವ ರೈಲು: ಈ ಹಿಂದೆ ತಾಳಗುಪ್ಪ ಚಾಮರಾಜನಗರದ ನಡುವೆ ಸಂಚರಿಸುತ್ತಿದ್ದ ರೈಲನ್ನು ಕೋವಿಡ್ ಸಂದರ್ಭದಲ್ಲಿ ನಿಲ್ಲಿಸಲಾಗಿತ್ತು. ಈಗ ಸಮಯ ಸ್ವಲ್ಪ ಬದಲಾವಣೆ ಮಾಡಿ ಪುನಾರಂಭಿಸಲಾಗಿದೆ.

#talaguppa #Shivamogga
#IndianRailways #arsikere #hassan #mysore

LEAVE A REPLY

Please enter your comment!
Please enter your name here