ಹಾಸನ ಸೆ. : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಹಾಸನ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಹೇಮಾವತಿ ಫೀಡರ್ ರಸ್ತೆಯ ಅಗಲೀಕರಣ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ಸೆ. 24 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ಚಿಕ್ಕಕೊಂಡಗುಳ, ಚಿಕ್ಕಕೊಂಡಗುಳ ಕೊಪ್ಪಲು, ವಿಶ್ವೇಶ್ವರಯ್ಯ ಬಡಾವಣೆ, ಹೇಮಾವತಿ ನಗರ, ದಾಸರಕೊಪ್ಪಲು, ಶಾಂತಿನಗರ, ಪೆನ್ಷನ್ ಮೊಹಲ್ಲಾ, ರಾಜಕುಮಾರ್, ಅಡ್ಲಿಮನೆ ರಸ್ತೆ, ಆದರ್ಶ ನಗರದ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಅನಿಯಮಿತವಾಗಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಬೇಕೆಂದು ಚಾ.ವಿ.ಸ. ನಿ.ನಿ., ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
#CESCOMUPDATESHASSAN #cescomhassan #powersheduleupdateshassan #cescom