ದ್ವೀತಿಯ ಪಿಯುಸಿ ಪರೀಕ್ಷೆಯ ಫಲಿತಾಂಶ : ಹಾಸನಕ್ಕೆ 13 ನೇ ಸ್ಥಾನ , ಕಳೆದ ವರ್ಷ 11ನೇ ಸ್ಥಾನದಲ್ಲಿತ್ತು : ಹೆಚ್ಚಿನ ಮಾಹಿತಿ ಇಲ್ಲಿದೆ

0

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ. , ಶೇ.61.88 ರಷ್ಟು ವಿದ್ಯಾರ್ಥಿಗಳು ರಾಜ್ಯದಲ್ಲಿ ಉತ್ತೀರ್ಣ.
ಉತ್ತೀರ್ಣ ಪ್ರಮಾಣ:
ಬಾಲಕಿಯರು: ಶೇ.68.72
ಬಾಲಕರು: ಶೇ.55.22
6,83,563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
4,22,966 ವಿದ್ಯಾರ್ಥಿಗಳು ಉತ್ತೀರ್ಣ.

11ರಿಂದ 13ನೇ ಸ್ಥಾನಕ್ಕೆ ಜಿಲ್ಲೆ ಏಕೆ?

ಹಾಸನ: ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು ಕಳೆದ ಬಾರಿ 11 ನೇ ಸ್ಥಾನ ದಾಖಲಿಸಿದ್ದ ಜಿಲ್ಲೆ ಈ ಬಾರಿ 13ನೇ ಸ್ಥಾನಕ್ಕೆ ಕುಸಿದಿದೆ. ಜಿಲ್ಲೆಯಲ್ಲಿ ಒಟ್ಟು 16,008 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 67.28 % ವಿದ್ಯಾರ್ಥಿಗಳು ಉತ್ತೀರ್ಣರಾಗಿ ದ್ದಾರೆ. ಕಳೆದ ಬಾರಿ 70.18% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು .

ರಾಜ್ಯಕ್ಕೆ ಟಾಪರ್ ಪಟ್ಟಿಯ 30 ಮಂದಿ ವಿದ್ಯಾರ್ಥಿಗಳ ಪೈಕಿ ಹಾಸನದ ಯಾವೊಬ್ಬ ವಿದ್ಯಾರ್ಥಿಯೂ ಸ್ಥಾನ ಪಡೆಯದಿರುವುದು ಇತ್ತೀಚಿನ ವರ್ಷದಲ್ಲಿ ಇದೆ ಮೊದಲು ಎಂದು ಹೇಳಲಾಗಿದೆ.

ನೂರು ಫಲಿತಾಂಶ ಪಡೆದ ಕಾಲೇಜು

ನಗರದ ಸಂತೇಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು, ಕಂಚಮಾರನಹಳ್ಳಿಯ ಮಂಗಳೂರು ಪಬ್ಲಿಕ್ ಪದವಿಪೂರ್ವ ಕಾಲೇಜು, ಅರಸೀಕೆರೆಯ ಅನಂತ ಪದವಿಪೂರ್ವ ಕಾಲೇಜು ಶೇ 100 ರಷ್ಟು ಫಲಿತಾಂಶ ದಾಖಲಿಸಿವೆ

ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ಹಾಸನದ ಕೆಆರ್ ಪುರಂನ ಜ್ಞಾನಧಾರೆ – ಎಪಿಜೆ ಅಕಾಡೆಮಿಯ ವಿದ್ಯಾರ್ಥಿನಿಯರು ಗರಿಷ್ಠ ಅಂಕಗಳನ್ನು ಪಡೆದು ಮೇಲುಗೈ ಸಾಧಿಸಿದ್ದಾರೆ.

ಸಾಹಿತ್ಯ ಎಸ್.ವೈ. 592, ಖುಷಿ ಕೆ.ಸಿ. 585 ಹಾಗೂ ಆಸ್ವಿಯ ಸಮ 566 ಅಂಕ ಗಳಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಓದಿರುವ ಪ್ರೀತಿ ಎಂ.ಬಿ. 563 ಅಂಕ ಪಡೆದಿದ್ದಾರೆ

ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುವ ವಿದ್ಯಾರ್ಥಿಗಳ ಪಟ್ಟಿ :

ವಿಜ್ಞಾನ ವಿಭಾಗ

1. ನಿಧಿ.ಪಿ : ಪಡೆದ ಅಂಕಗಳು: 594 – ಮಾಸ್ಟರ್ ಪದವಿ ಪೂರ್ವ ಕಾಲೇಜು, ಹಾಸನ

2. ದೀಪಕ್,ಎಂ.ಎಸ್- ಪಡದ ಅಂಕಗಳು: 594 – ಕ್ರೈಸ್ಟ್ ದ ಕಿಂಗ್ ಪದವಿ ಪೂರ್ವ ಕಾಲೇಜು, ಚನ್ನರಾಯಪಟ್ಟಣ

ವಾಣಿಜ್ಯ ವಿಭಾಗ

1. ಮನಿಷಾ.ಕೆ.ಎಂ- 592 – ವಿದ್ಯಾಸೌಧ ಪದವಿ ಪೂರ್ವ ಕಾಲೇಜು, ಹಾಸನ

2 ಅಮೂಲ್ಯ – 592 – ಸೆಂಟ್ರಲ್ ಕಾಮರ್ಸ್ ಪದವಿ ಪೂರ್ವ ಕಾಲೇಜು, ಹಾಸನ

ಕಲಾ ವಿಭಾಗ

ಸಿಂಧು.ಎಂ.ಆರ್ – 577 – ಸರ್ಕಾರಿ ಪದವಿ ಪೂರ್ವ ಕಾಲೇಟು, ಅರೆಹಳ್ಳಿ, ಸಕಲೇಶಪುರ ತಾಲ್ಲೂಕು

ಹೊಳೆನರಸೀಪುರ: ಪಟ್ಟಣದ ಟಾಪರ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ನುರೈನ್ ಅಮ್ಮಿದ್ ವಿಜ್ಞಾನ ವಿಭಾಗದಲ್ಲಿ ಶೇ 97.5 ಅಂಕಗಳಿಸಿ ತಾಲ್ಲೂಕಿಗೆ ಪ್ರಥಮ

ಹಾಗೂ ವಾಣಿಜ್ಯ ವಿಭಾಗದಲ್ಲಿ ಬಿ.ಎಂ. ಸಿಂಚನಾ ಶೇ 95.83 ಅಂಕಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ

ಅರಕಲಗೂಡು: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಇಲ್ಲಿನ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿಗೆ ಶೇ 92.30 ಫಲಿತಾಂಶ ಬಂದಿದೆ.

ವಿಜ್ಞಾನ ವಿಭಾಗದಲ್ಲಿ ಶೇ 91.83 ಫಲಿತಾಂಶ ಬಂದಿದೆ. ಡಿ. ಖುಷಿ ಶೇ 98 .33 (590) ತಾಲ್ಲೂಕಿಗೆ ಪ್ರಥಮ ಸ್ಥಾನ

ಹಾಗೂ ರಾಜ್ಯಕ್ಕೆ 9 ನೇ ರ್‍ಯಾಂಕ್ ಗಳಿಸಿದ್ದಾರೆ.

ಶೇ 98.16 (589) ಅಂಕ ಗಳಿಸಿರುವ ಎಚ್.ಕೆ.ಮನೋಜ್ ತಾಲ್ಲೂಕಿಗೆ ದ್ವಿತೀಯ

ಹಾಗೂ ರಾಜ್ಯ ಮಟ್ಟದಲ್ಲಿ 10ನೇ ರ್‍ಯಾಂಕ್ ಪಡೆದಿದ್ದಾರೆ. ಎಂ.ಎನ್ ನಿಖಿತಾ ರಾಣಿ ಶೇ 98 (586) ತಾಲ್ಲೂಕಿಗೆ ಮೂರನೇ ಸ್ಥಾನಗಳಿಸಿದ್ದಾರೆ. 

ಸಕಲೇಶಪುರ: ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅಚಿವರ್ಸ್‌ ಕಾಲೇಜಿನ ವಿದ್ಯಾರ್ಥಿನಿ ಬಿ.ಸಿ. ಹರ್ಷಿಣಿ ಶೇ. 98 ಅಂಕ ಪಡೆದು ತಾಲ್ಲೂಕಿಗೆ ಮೊದಲ ಸ್ಥಾನ ಗಳಿಸಿದ್ದಾಳೆ.

ಹರ್ಷಿಣಿ ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮದ ಚಂದ್ರಶೇಖರ್ ಹಾಗೂ ಲತಾ ಇವರ ಪುತ್ರಿ

ಅರಸೀಕೆರೆ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ನಗದ ಕೆ.ಪಿ.ಎಸ್. ಪಿಯು ಕಾಲೇಜಿನ ವಿದ್ಯಾರ್ಥಿನಿ ವಿ. ಪ್ರೇರಣಾ ಅವರು ವಿಜ್ಞಾನ ವಿಭಾಗದಲ್ಲಿ ಶೇ. 98.33 ಅಂಕಗಳೊಂದಿಗೆ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾಗುವ ಮೂಲಕ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.


ಪ್ರೇರಣಾ ಅವರು ನಗರದ ಹೆಂಜಗೊಂಡನ ಹಳ್ಳಿ ಬಡಾವಣೆಯಲ್ಲಿ ವಾಸವಿರುವ ನಿವೃತ್ತ ಯೋಧರಾದ ವಿಜಯಾನಂದ – ವಿ. ಮತ್ತು ಶೋಭಾ ದಂಪತಿಯ ಪುತ್ರಿಯಾಗಿದ್ದಾರೆ. ಈಕೆ ಮುಂದೆ ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ ಎಂದು ಸ್ನೇಹಿತರು, ಹಿತೈಷಿಗಳು ಶುಭ ಕೋರಿದ್ದಾರೆ.

ಪರೀಕ್ಷೆಯಲ್ಲಿ ಹಿನ್ನಡೆಯಾದವರು ನಿರಾಶರಾಗಬಾರದು. ಪರೀಕ್ಷೆ, ಫಲಿತಾಂಶವೇ ಅಂತಿಮವಲ್ಲ. ಎಲ್ಲವನ್ನು ಧೈರ್ಯವಾಗಿ ಎದುರಿಸುವ ಮಾನಸಿಕತೆಯನ್ನು ಹೊಂದಬೇಕು.

ಪರೀಕ್ಷೆ ಮತ್ತು ಫಲಿತಾಂಶ ಶೈಕ್ಷಣಿಕ ಜೀವನದ ಒಂದು ಭಾಗವಷ್ಟೇ. ಪೂರಕ ಪರೀಕ್ಷೆ ಬರೆಯುವ ಮೂಲಕ ಯಶಸ್ಸು ಸಾಧಿಸಿ ಶೈಕ್ಷಣಿಕ ಜೀವನ ಮುಂದುವರೆಸಬೇಕು. ಪರೀಕ್ಷೆ ಮೀರಿದ ಜೀವನವನ್ನು ಮರೆಯಬಾರದು.

ಹಾಸನ: ನಗರದ ಬ್ರಿಗೇಡ್ ಪದವಿಪೂರ್ವ ಕಾಲೇಜಿನ ಭಾರ್ಗವಿ ಎಸ್‌.ವಿ.

ಮತ್ತು ಸ್ಮೃತಿ ಎಂ. ಪಿ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 592 ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಭಾರ್ಗವಿ ಎಸ್ .ವಿ. ಮಾಳವಿಕ ಹಾಗೂ ವೇಣು ಗೋಪಾಲ್ ಅವರ ಪುತ್ರಿ ಮತ್ತು ಶುಭ ಕುಲಕರ್ಣಿ ಹಾಗೂ ಡಾ. ಮುರಳಿಧರ್ ಪೂಜಾರ್ ಅವರ ಪುತ್ರಿ ಸ್ಮೃತಿ ಎಂ. ಪಿ.ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಎಪಿಜೆ ಅಕಾಡೆಮಿ ಹಾಸನ

ಬ್ರಿಲಿಯಂಟ್ ಹೇಮಾವತಿ ನಗರ, ಕೊನೆಯ ಹಂತ, ಲಿಂಗ್ ರಸ್ತೆ, ಹಾಸನ

ಸುಜಲ ಪದವಿ ಪೂರ್ವ ಕಾಲೇಜು

ಅಪೂರ್ವ ಹೊಟೇಲ್ ರಸ್ತೆ, ಉತ್ತರ ಬಡಾವಣೆ,

ಹಾಸನ

ಸ್ಟೂಡೆಂಟ್ಸ್ ಕಾಮರ್ಸ್ ಕಾಲೇಜು ಟಾಪರ್ಸ್

PUCResults hassanpuresults

LEAVE A REPLY

Please enter your comment!
Please enter your name here