ದಿ.ಪ್ರಶಾಂತ್ ನಾಗರಾಜ್ ಭೀಕರ ಹತ್ಯೆಗೆ ಆರೋಪಿಗಳು ಒಂದಲ್ಲ ಎರಡಲ್ಲ 10 ಬಾರಿ ಪ್ರಯತ್ನಿಸಿದ್ದರಂತೆ

0

ಹಾಸನ: ನಗರಸಭೆ ಜೆಡಿಎಸ್ ಸದಸ್ಯ ದಿ.ಪ್ರಶಾಂತ್ ನಾಗರಾಜ್ ಭೀಕರ ಹತ್ಯೆಗೆ ಆರೋಪಿಗಳು ಒಂದಲ್ಲ ಎರಡಲ್ಲ 10 ಬಾರಿ ಪ್ರಯತ್ನಿಸಿದ್ದರಂತೆ . ಜೂನ್ 1 ಕ್ಕಿಂತ ಮೊದಲು ನಡೆಸಿದ ಅಷ್ಟೂ ಪ್ರಯತ್ನಗಳು ಮಿಸ್ ಆಗಿದ್ದವಂತೆ. ಆದರೆ ಈ ಬಾರಿ ಮಿಸ್ ಆಗಲೇ ಬಾರದು ಎಂದು ಪ್ಲಾನ್ ಮಾಡಿದ್ದ ತಂಡದ ಕೆಲ ಸದಸ್ಯರು. 11ನೇ ಬಾರಿ ಮಿಸ್ ಆಗಲಿಲ್ಲ…
ಇದು ನಗರಸಭಾ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ ಸಂಬಂಧ ನಡೆಯುತ್ತಿರುವ ಸಿಐಡಿ ತನಿಖೆ ವೇಳೆ ಆರೋಪಿಗಳು ಬಾಯ್ಬಿಟ್ಟಿರುವ ಭಯಾನಕ ಅಂಶಗಳು.
ಹತ್ಯೆ ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಿರುವ CID ಈವರೆಗೆ ಸುಮಾರು 11 ಮಂದಿ ಆರೋಪಿಗಳನ್ನು ಬಂಧಿಸಿದೆ ಎನ್ನಲಾಗಿದೆ. ಈ ನಡುವೆ ತನಿಖಾ ವೇಳೆ ಅನೇಕ ಬೆಚ್ಚಿ ಬೀಳುವ ಸಂಗತಿಗಳು ಬಯಲಾಗಿವೆ.

ಇದರಲ್ಲಿ ಪ್ರಶಾಂತ್ ಹತ್ಯೆಗೆ ಹಲವು ದಿನಗಳ ಹಿಂದೆಯೇ ಸ್ಕೆಚ್ ಹಾಕಲಾಗಿತ್ತು ಎಂಬ ಸಂಗತಿಯೂ ಸೇರಿದ್ದು ಒಂದಾದರೆ.
ಪ್ರಶಾಂತ್ ಜೂ.1ರ ಸಂಜೆ ಕಟ್ಟಿನಕೆರೆ ಮಾರುಕಟ್ಟೆಯಿಂದ ಅಡ್ಲಿಮನೆ ರಸ್ತೆಯ ತನ್ನ ಮನೆಗೆ ಬಿಳಿ ಬಣ್ಣದ ಹೋಂಡಾ ಆಕ್ಟೀವಾದಲ್ಲಿ ತೆರಳುತ್ತಿದ್ದಾಗ ಆಟೋದಲ್ಲಿ ಬಂದ ತಂಡ, ಮಾರಾಕಾಸ್ತ್ರಗಳಿಂದ ಮನಸೋ ಇಚ್ಛೆ ಕೊಚ್ಚಿ ಕ್ರೂರವಾಗಿ ಕೊಲೆ ಮಾಡಿ ಪರಾರಿಯಾಗಿತ್ತು.
ಕೊಲೆ ಕೃತ್ಯ ರಾಜ್ಯ ಮಟ್ಟದಲ್ಲಿ ರಾಜಕೀಯ ತಿರುವು ಪಡೆದು ಗಂಭೀರ ಸ್ವರೂಪ ಪಡೆದುಕೊಂಡಿದ್ದ ರಿಂದ ಪ್ರಕರಣದ ತನಿಖೆಯನ್ನು CIDಗೆ ವಹಿಸಲಾಯಿತು. ತನಿಖೆ ಆರಂಭಿಸಿದ CID ತಂಡ, ಪ್ರಮುಖ ಆರೋಪಿಗಳಾದ ಪೂರ್ಣಚಂದ್ರ ಮತ್ತು ಸಚಿನ್, ಸಂತೋಷ್, ಅಮಿತ್, ವೆಂಕಟ್ರಾಮ್(ಕುಳ್ಳ ರಾಮ), ಶ್ರೀನಿವಾಸ್, ವಿಶ್ವನಾಥ್, ಕೋತಿ ಶಿವ, ಪ್ರದೀಪ್, ಉಮೇಶ್ ಮತ್ತು ರಾಜೇಶ್ ಎಂಬುವರನ್ನು ಬಂಧಿಸಿದೆ. ಇದಕ್ಕೂ ಮುನ್ನ ಪೊಲೀಸ್ ತನಿಖಾ ತಂಡ ಇಬ್ಬರನ್ನು ಬಂಧಿಸಿತ್ತು.
ಬಂಧಿತರಲ್ಲಿ ಪೂರ್ಣಚಂದ್ರ ಮತ್ತು ಸಚಿನ್ ಪ್ರಮುಖ ಆರೋಪಿಗಳು ಎನ್ನಲಾಗಿದೆ. ಈ ಇಬ್ಬರೇ ಪ್ರಶಾಂತ್ನನ್ನು ಹತ್ಯೆ ಮಾಡಿದ್ದಾರೆ. ಇವರನ್ನು ಮೂರನೇ ಆರೋಪಿ ಸಂತೋಷ್, ಹತ್ಯೆ ನಡೆದ ಸ್ಥಳಕ್ಕೆ ಆಟೋದಲ್ಲಿ ಕರೆತಂದಿದ್ದ ಎನ್ನಲಾಗಿದೆ. ಈ ಆಟೋ ವಿಶ್ವನಾಥ್ಗೆ ಸೇರಿದ್ದು ಎನ್ನಲಾಗಿದ್ದು, ಕೊಲೆ ಕೃತ್ಯಕ್ಕೆ ಆಟೋ ನೀಡಿದ ಆರೋಪದಡಿ ಆತನನ್ನೂ ಬಂಧಿಸಲಾಗಿದೆ.
ಹಲವು ದಿನಗಳಿಂದೆ ನಡೆದ ಪ್ಲಾನ್ ಎಂಥದ್ದು ??


ಅಮಿತ್, ವೆಂಕಟರಾಮ್(ಕುಳ್ಳ ರಾಮ) ಮತ್ತು ಶ್ರೀನಿವಾಸ್ ಪ್ರಶಾಂತ್ನನ್ನು ನಿತ್ಯವೂ ಫಾಲೋ ಮಾಡುತ್ತಿದ್ದರಂತೆ. ಪ್ರಶಾಂತ್ ಹೋದ ಕಡೆಯೆಲ್ಲಾ ಹಿಂಬಾಲಿಸುತ್ತಿದ್ದರು. ನಗರಸಭಾ ಸದಸ್ಯನ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರಂತೆ. ಅದನ್ನು ಪೂರ್ಣಚಂದ್ರ ಮತ್ತು ಸಚಿನ್ಗೆ ನೀಡುತಿದ್ದರು ಎಂಬ ಅಂಶ ತನಿಖೆ ಸಂದರ್ಭದಲ್ಲಿ ತನಿಖಾ ತಂಡಕ್ಕೆ ಸಿಕ್ಕಿದೆ. ನಂತರ ಎಲ್ಲರೂ ಸೇರಿ ನಗರದ ಡಬಲ್ ಟ್ಯಾಂಕ್ ರಸ್ತೆಯ ಲಕ್ಷ್ಮಿ ಲಾಡ್ಜ್ನಲ್ಲಿ ಸ್ಕೆಚ್ ರೂಪಿಸಿದ್ರು. 8 ರಿಂದ 10 ಬಾರಿ ಪ್ರಶಾಂತ್ ಕೊಲೆಗೆ ಯತ್ನಿಸಿದ್ದರು. ಆದ್ರೆ ಪ್ರಶಾಂತ್ ಜಸ್ಟ್ ಮಿಸ್ ಆಗ್ತಿದ್ದರಂತೆ… ಹತ್ಯೆಯ ಮಾಸ್ಟರ್ ಪ್ಲಾನ್ ಮಾಡಿದ್ದು

ಕೋತಿ ಶಿವ ಎನ್ನಲಾಗಿದೆ. ಇವರಿಗೆ ಪ್ರದೀಪ್, ಉಮೇಶ್ ಮತ್ತು ರಾಜೇಶ್ ಎಂಬುವರು ಆಶ್ರಯ ನೀಡಿದ್ದರು. ಕಡೆಗೆ ಜೂ.1 ರಂದು ಪ್ರಶಾಂತ್ನನ್ನು ಮುಗಿಸಿದ ಆರೋಪಿಗಳ ಪೈಕಿ ಕೆಲವರು ಮಂಡ್ಯಜಿಲ್ಲೆ ಮದ್ದೂರು, ಶ್ರೀರಂಗಪಟ್ಟಣದಲ್ಲಿ ತಲೆಮರೆಸಿಕೊಂಡಿದ್ರೆ, ಇನ್ನಿಬ್ಬರು ಹುಬ್ಬಳ್ಳಿ ಕಡೆಗೆ ಎಸ್ಕೇಪ್ ಆಗಿದ್ರು. ಕೆಲವರು ಚನ್ನರಾಯಪಟ್ಟಣದಲ್ಲೂ ಉಳಿದುಕೊಂಡಿದ್ದರು. ಖಚಿತ ಮಾಹಿತಿ ಆಧರಿಸಿ ತಲಾಶ್ ನಡೆಸಿದ ಸಿಐಡಿ ಕೊಲೆಗಡುಕರು ಮತ್ತು ಅವರಿಗೆ ಆಶ್ರಯ ನೀಡಿದ ಎಲ್ಲರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಶಾಂತ್ ಹತ್ಯೆ ಹಿಂದೆ ಬೇರೆ ಯಾವೆಲ್ಲಾ ಕಾರಣ ಇವೆ

ಎಂಬುದನ್ನು ತನಿಖಾ ತಂಡ ಶೋಧಿಸುತ್ತಿದೆ. ಪೂರ್ಣಚಂದ್ರ ಮತ್ತು ಪ್ರಶಾಂತ್ ನಡುವಿನ ವೈಯಕ್ತಿಕ ದ್ವೇಷದ ಕಾರಣದಿಂದಲೇ ಕೊಲೆ ನಡೀತಾ? ಇಬ್ಬರ ನಡುವಿನ ಹಗೆತನಕ್ಕೆ ಇಷ್ಟೊಂದು ಮಂದಿ ಕೈ ಜೋಡಿಸಿದ್ದೇಕೆ? ಇವರಲ್ಲದೆ ಹೊರಗಿನವರ ಕೈವಾಡ ಇದೆಯೇ? ಎಂಬಿತ್ಯಾದಿ ಮಾರ್ಗಗಳಲ್ಲೂ ಸಿಐಡಿ ತನಿಖೆ ಮುಂದುವರಿದಿದೆ…

LEAVE A REPLY

Please enter your comment!
Please enter your name here