ಹಾಸನ : ಭಾನುವಾರ 11 ಡಿ. 2022 ರಂದು ರಾಜ್ಯ ಪ್ರಸಿದ್ದ ಹಾಸನ MCE ಕಾಲೇಜಿನಲ್ಲಿ ಹೊಸ ಕೋರ್ಸ್ ‘ ಸೈನ್ಸ್ ಅಂಡ್ ಬಿಸಿನೆಸ್ ಸಿಸ್ಟಮ್ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ‘ ಎಂಬ ಹೊಸ ಕೋರ್ಸ್ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಪ್ರಾರಂಭೋತ್ಸವ ಮಾಡಿದರು . , ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಳೆದ ಸಾಕಷ್ಟು ವರ್ಷಗಳಿಂದ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಬದಲಾಗುತ್ತಿರುವ ವೃತ್ತಿ ಜೀವನದಲ್ಲಿ ಆಧುನಿಕತೆ ಕಾಲಘಟ್ಟದಲ್ಲಿ ಹೊಸದಾಗಿ ಪ್ರಾರಂಭ ವಾದ ಕೋರ್ಸ್‌ಗಳು
ಹೆಚ್ಚಿನ ಪ್ರಾಮುಖ್ಯ ಪಡೆದಿವೆ. ಅಂತೆಯೆ ಅದಕ್ಕೆ ಅನುಗುಣವಾಗಿ ವಿದ್ಯಾರ್ಥಿ ಗಳಿಗೆ ಇದರ ಪ್ರಯೋಜನ ಸಿಗಲಿದೆ ಎಂದು ಸಂಸ್ಥೆಯ ಆಧ್ಯಕ್ಷರು ತಿಳಿಸಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕರಿಸಿದ್ದಪ್ಪ ಮಾತನಾಡಿ, ‘ನಮ್ಮ ಕಾಲೇಜಿನಲ್ಲಿ ಕಲಿತ ಅನೇಕರು ಹಲವು ಹುದ್ದೆಗಳನ್ನು ಅಲಂಕರಿಸಿದ್ದೇವೆ. ಆನೇಕರು ಉದ್ದೀಮೆದಾರರಾಗಿದ್ದಾರೆ. ವಿವಿಧ ರಂಗದಲ್ಲಿ ಇದ್ದಾರೆ. ವಿದ್ಯಾರ್ಥಿ ಜೀವನ
ತೆರೆದ ಬಾಗಿಲು ಇದ್ದಂತೆ. ನಾವು ನಮ್ಮ ಬದುಕಿನಲ್ಲಿ ಒಳ್ಳೆಯ ಹೆಸರು ಪಡೇಯುವ ನೀಟ್ಟಿನಲ್ಲಿ ನಾವು ಯಶಸ್ಸನ್ನು ಪಡೆಯಬೇಕು , ಅಂತೆಯೆ ಈ ಹೊಸ ಕೋರ್ಸು ಹೊಸ ಜನರೇಷನ್ ಗೆ ಹೇಳಿ ಮಾಡಿಸಿದಂತಿದೆ ಎಂದು ತಿಳಿಸಿದರು.
ಪೋಷಕರು ತಮ್ಮ ಮಕ್ಕಳನ್ನು ಎಷ್ಟೇ ಕಷ್ಟಪಟ್ಟಾದರೂ ಓದಿಸಬೇಕು. ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಬದ್ಧರಾಗಬೇಕು. ಅಂತೆಯೇ ಮಕ್ಕಳು ಪೋಷಕರಿಗೆ ಮನಸ್ಸಿಗೆ ನೋವಾಗದಂತೆ ವಿದ್ಯಾರ್ಥಿಗಳು ಛಲ ಪಟ್ಟು ವಿದ್ಯಾಭ್ಯಾಸ ಮಾಡಿ ಪೋಷಕರ ಪಾಲನೆ ಮಾಡಬೇಕು ಎಂದರು.