ಸಿಡಿಲಿಗೆ ಇಂದು ಪ್ರಥಮ ಪಿಯು ದರ್ಶನ್ (18) ಟ್ರ್ಯಾಕ್ಟರ್ ಚಾಲಕ ಉದಯ ಸಾವಿಗೀಡಾದ ಮೃತ ದುರ್ದೈವಿಗಳು

0

ಹಾಸನ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಯುವಕರ ಸಾವು

ಹಾಸನ:ಸಿಡಿಲು ಬಡಿದು ಇಬ್ಬರು ಯುವಕರು ಸಾವಿಗೀಡಾಗಿರುವ ಘಟನೆ ಹಾಸನ ಜಿಲ್ಲೆಯ ನುಗ್ಗೆಹಳ್ಳಿ ಹೋಬಳಿ ಯಲ್ಲಿ ನಡೆದಿದೆ.

ಪ್ರಥಮ ಪಿಯುಸಿ ಓದುತ್ತಿದ್ದ ದರ್ಶನ್ (18) ಹಾಗೂ ಟ್ರ್ಯಾಕ್ಟರ್ ಚಾಲಕ ಉದಯಕುಮಾರ್(28) ಸಾವಿಗೀಡಾದ ಮೃತ ದುರ್ದೈವಿಗಳು.

ಚನ್ನರಾಯಪಟ್ಟಣದ ಪೋಕಸ್ ಪದವಿಪೂರ್ವ ಕಾಲೇಜಿನ ದರ್ಶನ್ ಕಾಲೇಜು ಮುಗಿಸಿಕೊಂಡು ಸ್ವಗ್ರಾಮ ಸೋಸಲಗೆರೆಗೆ ಹೋಗುತ್ತಿದ್ದ. ಈ ವೇಳೆ ಭೋರ್ಗರೆದ ಮಳೆ ಬಂದ ಹಿನ್ನೆಲೆಯಲ್ಲಿ ಮಳೆಯಿಂದ ರಕ್ಷಣೆಗಾಗಿ ನುಗ್ಗೆಹಳ್ಳಿ ಹಿರಿಸಾವೆ ಮಾರ್ಗದ ಬಸವನಪುರ ಬಸ್ ನಿಲ್ದಾಣದ ಸಮೀಪ ಆಶ್ರಯ ಪಡೆದಿದ್ದಾನೆ. ಇನ್ನು ಟ್ರ್ಯಾಕ್ಟರ್ ನಿಲ್ಲಿಸಿ ಚಾಲಕ ಉದಯ ಕುಮಾರ್ ಕೂಡಾ ತಂಗುದಾಣದ ಬಳಿ ಮಳೆಯಿಂದ ಆಶ್ರಯ ಪಡೆದಿದ್ದರು. ಈ ವೇಳೆ ಬಿರುಗಾಳಿ ಮತ್ತು ಭಾರಿ ಮಳೆಯ ಜೊತೆಗೆ ಸಿಡಿಲು ಬಡಿದಿದ್ದರಿಂದ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದ ಚಾಲಕ ಹಾಗೂ ವಿದ್ಯಾರ್ಥಿ ಮೇಲೆ ಸಿಡಿಲು ಬಡಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತಪಟ್ಟ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೊಳೆನರಸೀಪುರ ಡಿವೈಎಸ್ಪಿ ಮುರುಳಿದರ್, ವೃತ್ತ ನಿರೀಕ್ಷಕಿ ಭಾನು ಸುನಿಲ್, ನುಗ್ಗೇಹಳ್ಳಿಯ ಪೊಲೀಸ್ ಠಾಣೆಯ ಅಪರಾದ ವಿಭಾಗದ ಪಿಎಸ್ಐ ಪುಟ್ಟಸ್ವಾಮಯ್ಯಮ ಹಿರೀಸಾವೆ ಪಿಎಸ್ಐ ಶ್ರೀನಿವಾಸ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹಿರಿಸಾವೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ಈ ಸಂಬಂಧ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here