ಹಾಸನ : (ಹಾಸನ್_ನ್ಯೂಸ್ !, ಅರಸೀಕೆರೆ ತಾಲೂಕಿನ ಬಾಣಾವರ ಕ್ರೆಡಿಟ್ ಆಕ್ಸಸ್ ಗ್ರಾಮೀಣ್ ಲಿಮಿಟೆಡ್ ಬಾಣಾವರ ಘಟಕದ ವತಿಯಿಂದ ಕೊರೊನಾ ವಾರಿಯರ್ಸ್ ಗಳಾದ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಗ್ರಾಮ ಪಂಚಾಯಿತಿ ಹಾಗೂ ಪತ್ರಕರ್ತರಿಗೆ ಸ್ಯಾನಿಟೈಸರ್ ಮಾಸ್ಕ್ ಗಳನ್ನು ನೀಡಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಕ್ರೆಡಿಟ್ ಆಕ್ಸಸ್ ಗ್ರಾಮೀಣ್ ಲಿಮಿಟೆಡ್ ಘಟಕ ವ್ಯವಸ್ಥಾಪಕ ಸೋಮಶೇಖರ್ ನಮ್ಮ ಇಲಾಖೆಯ ಹಿರಿಯ ಅಧಿಕಾರಿ ZMO ಲೋಕೇಶ್ ಮತ್ತು ನಿಂಗೇಗೌಡರ ಮಾರ್ಗದರ್ಶನದಲ್ಲಿ ಕಳೆದ ಬಾರಿ ಮೊದಲನೇ ಅಲೆಯ ಕೊರೊನಾ ಸಂಕಷ್ಟ ಸಮಯದಲ್ಲಿ ನಮ್ಮ ಸಂಸ್ಥೆ ವತಿಯಿಂದ ಪಡಿತರ ಕಿಟ್ ವಿಚಾರಿಸಿದೆವು ಈ ಬಾರಿ ಎರಡನೇ ಅಲೆಗೆ ಕೊರೊನಾ ವಾರಿಯರ್ ಗಳಾದ ಪೊಲೀಸ್ ಆರೋಗ್ಯ ಇಲಾಖೆ ಪತ್ರಕರ್ತರಿಗೆ ಹಾಗೂ ಗ್ರಾಮ ಪಂಚಾಯಿತಿ ಇಲಾಖೆಗಳಿಗೆ ಸ್ಯಾನಿಟೈಸರ್ ಮಾಸ್ಕ್
ವಿತರಿಸಿದರೆ ಮುಂದು ಕೂಡ ನಮ್ಮ ಸಂಸ್ಥೆ ವತಿಯಿಂದ ಕೊರೊನಾ ನಿಯಂತ್ರಿಸಲು ನಾವು ಸಿದ್ಧರಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕ್ರೆಡಿಟ್ ಆಕ್ಸಸ್ ಗ್ರಾಮೀಣ್ ಲಿಮಿಟೆಡ್ ಸಿಬ್ಬಂದಿಗಳಾದ ಸುರೇಶ್ ಮಂಜುನಾಥ್, ಶಶಿಧರ್, ನವೀನ್ ,ಮಧು , ಮಮತಾ , ಸುಜಾತ ,
ಸುರೇಶ್ , ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು