ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಜೆಡಿಎಸ್ ಮುಳುಗುತ್ತಿರುವ ಹಡಗು: ಅರುಣ್ ಸಿಂಗ್

0

ಹಾಸನ: ಹಾಸನದಲ್ಲಿ ಒಂದಲ್ಲ ಏಳಕ್ಕೆ ಏಳು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕು. ಹಾಸನದಲ್ಲಿ 100 ರಷ್ಟು ರಿಸಲ್ಟ್ ಬರಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಕರೆ ನೀಡಿದರು.
ಹಾಸನದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಜೆ.ಪಿ ನಡ್ಡಾ, ಹೋಯ್ಸಳರ ಕಾಲದ ಶಿಲ್ಪಕಲೆ ಹಾಸನದಲ್ಲಿ ಪ್ರಸಿದ್ದಿಯಾಗಿದೆ.  ಪ್ರಧಾನಿ ಮೋದಿ ನೇತೃತ್ವದಲ್ಲಿ ದೊಡ್ಡ ಮಟ್ಟದ ಅಭಿವೃದ್ದಿಯಾಗುತ್ತಿದೆ. ಇಂದು ಚೆನ್ನಕೇಶವ ದೇವರ ದರ್ಶನ ಪಡೆಯುವ ಅವಕಾಶ ಸಿಕ್ಕಿದೆ.  ರಾಜ್ಯದಲ್ಲಿ ಇಂಧನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ.  ಸಿದ್ದರಾಮಯ್ಯ ಸರ್ಕಾರವಿದ್ದಾಗ ರಾಜ್ಯದಲ್ಲಿ ಪವರ್ ಕಟ್ ಆಗ್ತಿತ್ತು.  ಆದರೆ

ನಮ್ಮ ಸರ್ಕಾರ ಎಲ್ಲಾ ಸಮಯದಲ್ಲಿ ಕರೆಂಟ್ ನೀಡುತ್ತಿದೆ. ಕೊರೋನಾ ಬಳಿಕ ಅಮೇರಿಕ, ಚೀನಾ ಪರಿಸ್ಥಿತಿ ಏನಾಗಿದೆ.  ಯುರೋಪ್ ಆರ್ಥಿಕ ಪರಿಸ್ಥಿತಿ ಜಗತ್ತಿಗೆ ಗೊತ್ತಿದೆ. ಕೋವಿಡ್ ಬಳಿಕವೂ ಭಾರತ ಆರ್ಥಿಕ ಪರಿಸ್ಥಿತಿ ಉತ್ತಮ ಸ್ಥಿತಿಯಲ್ಲಿದೆ ಎಂದು ಹೊಗಳಿದರು.
ಪಿಎಂ ಮೋದಿ ಲಾಕ್ ಡೌನ್ ಮಾಡಿ ದೇಶದ ಜನರನ್ನ ಉಳಿಸಿದರು. ಈಗಲೂ ಅಮೆರಿಕ ಅಧ್ಯಕ್ಷ ಮಾಸ್ಕ್ ಹಾಕಿ ಓಡಾಡುತ್ತಾರೆ. ಆದರೆ ಇಂದು ನಮ್ಮ ದೇಶದಲ್ಲಿ ಅಂತಹ ಸ್ಥಿತಿ ಇಲ್ಲ. ಅದಕ್ಕೆ ಕಾರಣ ದೇಶದಲ್ಲಿ ಶೇ.100  ರಷ್ಟು ವ್ಯಾಕ್ಸಿನೇಷನ್ ಆಗಿದೆ.  ಕಾಂಗ್ರೆಸ್ ನಾಯಕರಿಗೆ ಇದೆಲ್ಲ ಕಾಣುವುದಿಲ್ಲ. ಮೋದಿ ನೇತೃತ್ವದಲ್ಲಿ ಭಾರತ ಇಂದು ಕೊಡುವ ರಾಷ್ಟ್ರವಾಗಿದೆ. ಹಾಗಾಗಿ 

ನಾವು ಬಿಜೆಪಿ ಕಾರ್ಯಕರ್ತರಾಗಿದ್ದಕ್ಕೆ ಹೆಮ್ಮೆ ಪಡಬೇಕು ಎಂದರು.
ಮೊಬೈಲ್ ಉತ್ಪಾದನೆಯಲ್ಲಿ ದೇಶ 2ನೇ ಸ್ಥಾನದಲ್ಲಿದೆ. ಈಗ ಆ್ಯಪಲ್ ಫೋನ್ ಕೂಡ ಭಾರತದಲ್ಲೇ ಉತ್ಪಾದನೆ ಮಾಡಲಾಗುತ್ತಿದೆ . ಆಟೋ ಮೊಬೈಲ್ ಕ್ಷೇತ್ರದಲ್ಲಿ ಜಪಾನ್ ಹಿಂದಿಕ್ಕಿ 3ನೇ ಸ್ಥಾನಕ್ಕೇರಿದೆ ಎಂದು ಜೆಪಿ ನಡ್ಡಾ ತಿಳಿಸಿದರು.

ಹಾಸನ:  ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಏನೇ ಕಸರತ್ತು ಮಾಡಿದರೂ ಅಧಿಕಾರಕ್ಕೆ ಬರಲ್ಲ. ಜೆಡಿಎಸ್ ಮುಳುಗುತ್ತಿರುವ ಹಡಗು. ಇಂತಹ ಸಂದರ್ಭದಲ್ಲಿ ಬಿಜೆಪಿ ಮಾತ್ರ ಸದೃಢ, ಸಮರ್ಥ ಸರ್ಕಾರ ನೀಡಲು ಸಾಧ್ಯ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು. 
ನಗರದಲ್ಲಿ ನಡೆದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.  ಮುಖ್ಯಮಂತ್ರಿ ಆಗಿದ್ದವರು, ಪ್ರಧಾನಿ ಆಗಿದ್ದವರು ಮಾಡದ ವಿಮಾನ ನಿಲ್ದಾಣ ಮಾಡಿದ್ದು ಪ್ರೀತಂ ಗೌಡ. ಹಾಸನ- ಚಿಕ್ಕಮಗಳೂರು ಹೆದ್ದಾರಿ ಚತುಷ್ಪಥವಾಗಲಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಸಿ.ಟಿ. ಹೇಳಿದರು.  ಅಭಿವೃದ್ಧಿ ವಿಷಯದಲ್ಲಿ ನಾವು ಜಾಗ್ವಾರ್ ಥರ ಕೆಲಸ ಮಾಡಿದ್ದೇವೆ. ಡಕೋಟ ಥರ ಅಲ್ಲ

ಎಂದರು.
ಒಂದು ಪಕ್ಷಕ್ಕೆ ನೀತಿ, ಸಿದ್ಧಾಂತ ಇರಬೇಕು. ದೇಶ ಮೊದಲು ನಮ್ಮ ತತ್ವ. ಅಧಿಕಾರ, ಕುಟುಂಬ ಮೊದಲು ಎಂಬುದಲ್ಲ. ಎಲ್ಲರ ಅಭಿವೃದ್ಧಿ ಎಂದರೆ ತಾತ, ಮುತ್ತಾತರ ಅಭಿವೃದ್ಧಿಯಲ್ಲ, ಬಡವ, ಶೋಷಿತರ ಅಭಿವೃದ್ಧಿ ನಮ್ಮ ನೀತಿ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.  ಕಳೆದ ಬಾರಿ ಶಾಸಕನಾಗಿ ಪ್ರೀತಂರನ್ನು ಆಯ್ಕೆ ಮಾಡಿದ್ದೀರಿ. ಈ ಬಾರಿ ಸಚಿವರಾಗಲು ಅವರನ್ನು ಆಯ್ಕೆ ಮಾಡಬೇಕು ಎಂದರು.
ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್ ಜೆಡಿ, ಎನ್ ಸಿಪಿಯಂತೆ ಕುಟುಂಬವೇ ನೇತಾರ ಆಗಿರುವ ಪಕ್ಷಗಳಂತೆ ರಾಜ್ಯದಲ್ಲಿಯೂ ಒಂದು ಪಕ್ಷವಿದೆ ಎಂದು ಜೆಡಿಎಸ್ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.

ನಾವು ಇಂದು ಬದುಕಿದ್ದರೆ, ಅದಕ್ಕೆ ಉಚಿತ ಕೋವಿಡ್ ಲಸಿಕೆ ಕಾರಣ: ಶೋಭಾ ಕರಂದ್ಲಾಜೆ

ಬೇಲೂರು(ಹಾಸನ):   ಕೇಂದ್ರದ ಬಿಜೆಪಿ ಸರ್ಕಾರ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಎಲ್ಲ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಸ್ವಾವಲಂಬಿ ದೇಶ, ಆತ್ಮನಿರ್ಭರ ದೇಶ ನಿರ್ಮಾಣ ಮಾಡುವ ಸಂಕಲ್ಪವನ್ನು ನರೇಂದ್ರ ಮೋದಿ ಸರ್ಕಾರ ಮಾಡಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. 
ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕೋವಿಡ್- 19 ಸಂದರ್ಭದಲ್ಲಿ ಜಗತ್ತು ತತ್ತರಿಸಿದ ಸಂದರ್ಭದಲ್ಲಿ ದೇಶದಲ್ಲಿಯೇ ಲಸಿಕೆ ತಯಾರಿಸುವ ಮೂಲಕ ದೇಶದ ಜನರನ್ನು ರಕ್ಷಣೆ ಮಾಡುವ ಕೆಲಸವನ್ನು ನರೇಂದ್ರ ಮೋದಿ ಸರ್ಕಾರ ಮಾಡಿದೆ. ನಾವು ಇಲ್ಲಿ ಬದುಕಿ ಕುಳಿತಿದ್ದರೆ, ಅದು ನಮ್ಮ ದೇಶದಲ್ಲಿ ಉಚಿತ ಲಸಿಕೆ ಕಾರಣದಿಂದ ಎಂದರು. 
ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ, ಈ ಭಾಗಕ್ಕೆ ಹೇಳಿಕೊಳ್ಳುವಂತಹ ಯೋಜನೆ ರೂಪಿಸಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ, ಈ ಭಾಗದ

ರೈತರ ಜಮೀನಿಗೆ ಯಗಚಿ ಜಲಾಶಯದ ನೀರು ಒದಗಿಸಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಹೇಳಿದರು.
ಆಹಾರ, ಔಷಧಿ, ಕೌಶಲಗಳಲ್ಲಿ ದೇಶ ಸ್ವಾವಲಂಬನೆ ಸಾಧಿಸುತ್ತಿದೆ. ವಿದೇಶಗಳಿಗೆ ಆಹಾರ ಧಾನ್ಯ, ತರಕಾರಿ, ಹಣ್ಣುಗಳನ್ನು ರಫ್ತು ಮಾಡುವ ದೇಶ ನಮ್ಮದಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಗೋದಾಮು, ಶೀತಲೀಕರಣ ಘಟಕ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಕೃಷಿ ಕ್ಷೇತ್ರದ ಮೂಲಸೌಕರ್ಯಕ್ಕೆ ₹1 ಲಕ್ಷ ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು. 
ರೈತರ ಪರವಾಗಿ ನಿಂತಿರುವ ಬಿಜೆಪಿ ಸರ್ಕಾರಕ್ಕೆ ಜನರು ಬೆಂಬಲ ನೀಡಬೇಕು. ಯುಪಿಎ ಸರ್ಕಾರ, ನರೇಂದ್ರ ಮೋದಿ ನೇತೃತ್ವದ ಸರ್ಕಾರಗಳನ್ನು ತುಲನೆ ಮಾಡಿ ಮತ ಚಲಾಯಿಸಬೇಕು ಎಂದರು.
ಜಾತಿ ರಾಜಕಾರಣ:  ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಜಾತಿ ಆಧಾರಿತ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯ ಅವರು ಶಾದಿ ಭಾಗ್ಯದ ಮೂಲಕ ಒಂದು ವರ್ಗವನ್ನು ಒಲೈಕೆ ಮಾಡಿದ್ದಾರೆ. 
ಆದರೆ, ಬಿಜೆಪಿ ಸರ್ಕಾರ ಎಲ್ಲರಿಗೂ ಸರ್ಕಾರದ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಇರುವ ವ್ಯತ್ಯಾಸ ಎಂದರು.

ಸಿದ್ದರಾಮಯ್ಯ ಭ್ರಷ್ಟಾಚಾರದ ರೂವಾರಿ, ಭ್ರಷ್ಟಾಚಾರ ತೊಲಗಿಸಬೇಕಾದರೆ ಮೊದಲು ಕಾಂಗ್ರೆಸ್ ತೊಲಗಿಸಿ
ಬೇಲೂರು: ಕಾಂಗ್ರೆಸ್ ಪಕ್ಷದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಸಿದ್ದರಾಮಯ್ಯ ಅವರೇ ಭ್ರಷ್ಟಾಚಾರದ ರೂವಾರಿ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ.
ಹಾಸನ ಜಿಲ್ಲೆಯ ಬೇಲೂರಿನಲ್ಲಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರವನ್ನು ತೊಲಗಿಸಬೇಕಾದರೆ ಮೊದಲು ಕಾಂಗ್ರೆಸ್ ತೊಲಗಿಸಿ, ಸಿದ್ದರಾಮಯ್ಯ ಅವರನ್ನು ಈ ಬಾರಿ ಮನೆಗೆ ಕಳುಹಿಸಿ ಎಂದು ವಾಗ್ದಾಳಿ ನಡೆಸಿದರು. ಅದು ನೀತಿ ನಿಯಮ ಇಲ್ಲದ ಒಂದು ಪಕ್ಷವಾಗಿದ್ದು ಜಾತಿ ಮತ್ತು ಧರ್ಮದ ಆಧಾರದಲ್ಲಿ ನಿಂತಿದೆ ಎಂದರು.
ಇದೇವೇಳೆ ದೇಶದ ಅಭಿವೃದ್ಧಿ ಮೂಲಕ ಇತರೆ ರಾಷ್ಟ್ರಗಳು ಭಾರತವನ್ನು ತಿರುಗಿ ನೋಡುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ದೇಶಕ್ಕೆ ಇರುವುದೊಂದೇ ಪಕ್ಷ ಬಿಜೆಪಿ. ಅದನ್ನು ಗೆಲ್ಲಿಸುವ ಪಣವನ್ನು ನೀವೆಲ್ಲ ತೊಡಬೇಕು ಎಂದು ಕರೆ ನೀಡಿದರು.
ಮೋದಿ ಪ್ರಧಾನಿಯಾದ ಮೇಲೆ ಅಭಿವೃದ್ಧಿ
ಕಳೆದ 70 ವರ್ಷಗಳಿಂದ ಅಭಿವೃದ್ಧಿಯಾಗದ ದೇಶ ಈಗ ಪ್ರಧಾನಿ ಮೋದಿ ಬಂದ ನಂತರ ಅಭಿವೃದ್ದಿಯಾಗುತ್ತಿದೆ. ಈ ಬಜೆಟ್ನಲ್ಲಿ ಮಹಿಳಾ ಸಬಲೀಕರಣ ಮತ್ತು

ಆರ್ಥಿಕ ಸಬಲೀಕರಣಕ್ಕೆ ಅನುಕೂಲಕರವಾಗಿದೆ ಎಂದರು. ಬಜೆಟ್ ನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಯೋಜನೆ ಜಾರಿಗೆ ತಂದಿದೆ. ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಸರಕಾರ ಯೋಜನೆ ರೂಪಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿ ಎಲ್ಲಾ ಧರ್ಮದವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೊಂಡಾಡುತ್ತಿದ್ದಾರೆ ಅಂತಹ ಉತ್ತಮ ಬಜೆಟ್ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 500 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಬೆಂಗಳೂರಿನಲ್ಲಿ ನಮ್ಮ ಸರಕಾರ ನಿರ್ಮಾಣ ಮಾಡಿದೆ ಎಂದರು.
ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತನಾಡಿ,

ಬೇಲೂರಿನಲ್ಲಿ ಮುಂದಿನ ಚುನಾವಣೆಗೆ ಬದಲಾವಣೆ ಗಾಳಿ ಬೀಸಲಿದೆ. ಮತ್ತೊಮ್ಮೆ ಬಿಜೆಪಿ ಅಧಿಕಾರ ಹಿಡಿಯಲಿದೆ. ಈ ವಿಷಯದಲ್ಲಿ ಯಾವುದೇ ಅನುಮಾನವಿಲ್ಲ ದಶಕಗಳಿಂದ ಇದ್ದ ಸಮಸ್ಯೆ ಒಂದೊಂದಾಗಿ ಬಗೆ ಹರಿಯುತ್ತಿದೆ . ಸಾವಿರಾರು ಕೋಟಿ ಅನುದಾನದಲ್ಲಿ ಪ್ರಗತಿ ಕಾಣುತ್ತಿದೆ. ಬಿಜೆಪಿ ಬೂತ್ ಮಟ್ಟದಿಂದ ಹಿಡಿದು ರಾಜ್ಯ ರಾಷ್ಟ್ರಮಟ್ಟದಲ್ಲೂ ಸಂಘಟನೆ ಮಾಡುತ್ತಿದೆ ಎಂದರು.
ಜೆಪಿ ನಡ್ಡಾ ದೇಶ ಸುತ್ತಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಬೇಲೂರಿನಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಶಾಸಕರನ್ನು ಮಾಡೇ ತೀರ್ತೀವಿ ಅಂತ ನಡ್ಡಾ ಶಪಥ ಮಾಡಿದ್ದಾರೆ. ಬೇಲೂರಿಗೆ ಈ ಬಾರಿ ಸಾಕಷ್ಟು ಅನುದಾನವನ್ನ ಸರ್ಕಾರ ನೀಡಿದೆ ಎಂದರು.
ರಣಘಟ್ಟ ಯೋಜನೆಗೆ ಚಾಲನೆ ಕೊಟ್ಟಿದ್ದು ಬಿಜೆಪಿ
ರಣಘಟ್ಟ ಯೋಜನೆ ಮೂರು ದಶಕಗಳಿಂದ ನೆನ್ನೆಗೋಧಿಗೆ ಬೇಕಿತ್ತು. ಅದನ್ನ ಪೂರ್ಣಗೊಳಿಸುವ ನಿಟ್ಟಿನಲ್ಲಿ ಚಾಲನೆ ಕೊಟ್ಟಿದ್ದು ಬಿಜೆಪಿ ಸರ್ಕಾರ.. ಯಡಿಯೂರಪ್ಪನವರ ಕಾಲದಲ್ಲಿ ಅದಕ್ಕೆ ಅನುಮೋದನೆ ಸಿಕ್ಕಿತು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಣಘಟ್ಟ ಯೋಜನೆಯ ಪೂರ್ಣಗೊಳಿಸುತ್ತೇವೆ ಅಂತ ಹೇಳಿದ್ವಿ. ಅದರಂತೆ

120 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೇವೆ. ನಿನ್ನೆ ಕೂಡ ಸಚಿವ ಸಂಪುಟದಲ್ಲಿ ಜಲಜೀವನ್ ಮಿಷನ್ ನಲ್ಲಿ ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗಿದೆ. 1400 ಕೋಟಿ ವೆಚ್ಚದಲ್ಲಿ ಅನುಮೋದನೆ.
ಬೇಲೂರಿನಲ್ಲಿ ಪ್ರವಾಸೋದ್ಯಮ ಕೇಂದ್ರವಾಗಿ ಕೆಲವೇ ದಿನಗಳಲ್ಲಿ ಸ್ಥಾಪನೆ ಆಗುತ್ತೆ. ಹಾಸನ ಜಿಲ್ಲೆಯ ನೀರಾವರಿ ವಿಚಾರದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯನ್ನು ನಮ್ಮ ಸರ್ಕಾರ ಮಾಡುತ್ತಿದೆ. ಇವತ್ತು ಬೇಲೂರಿಗೆ ಹೇಮಾವತಿ ಜಲಾಶಯದಿಂದ ನೀರನ್ನು ಕೊಡುವ ಕೆಲಸವನ್ನು ಸರ್ಕಾರ ಯೋಜನೆ ಹಾಕಿಕೊಂಡು. ಕಾಫಿ ಬೆಳೆಗಾರರಿಗೆ ಈ ಯೋಜನೆ ಅನುಕೂಲವಾಗಲಿದೆ. ಹಾಗಾಗಿ ನೀರಾವರಿಗೆ ಈ ಬಾರಿಯ ಬಜೆಟ್ ಅಲ್ಲಿ 25 ಕೋಟಿ ಬಿಡುಗಡೆ ಮಾಡಿದ್ದೇನೆ. ಜಾತಿ ಮತ ಪಂಥವನ್ನು ನೋಡಿ ನೀವು ಮತ ಚಲಾಯಿಸಬೇಡಿ. ಕಷ್ಟಕ್ಕೆ ಸ್ಪಂದಿಸುವ ನಾಯಕನನ್ನ ನೋಡಿ ಮತ ಹಾಕಿ. ಪ್ರತಿ ಮನೆಗೂ ಸಿಲಿಂಡರ್ ಕೊಡುವ ವ್ಯವಸ್ಥೆಯನ್ನ ಪ್ರಧಾನಿ ಮಾಡಿದ್ದಾರೆ.
ಪ್ರತಿ ಮನೆಗೂ ವಿದ್ಯುತ್ ಕೊಡುವ ಯೋಜನೆಯನ್ನು ಸರ್ಕಾರ ತಂದಿದೆ. ಡಬಲ್ ಎಂಜಿನ್ ಸರ್ಕಾರ ಬಂದ ಮೇಲೆ ನೀರಾವರಿ ಶೈಕ್ಷಣಿಕ ಮತ್ತು ರಾಜ್ಯದ ಸಮಸ್ತ ಅಭಿವೃದ್ಧಿಯಾಗುತ್ತಿದೆ. ರೈತರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಕಟಿಬದ್ಧವಾಗಿದೆ. ಕಾಂಗ್ರೆಸ್ ನವರದ್ದು ಬೂಟಾಟಿಕೆ ಮಾತು. ಸುಳ್ಳಿನ ಸುಳಿಯಲ್ಲಿ ಕಾಂಗ್ರೆಸ್ ಸರ್ಕಾರ ಸಿಲುಕಿದೆ. ಅವರ ಸರ್ಕಾರದಲ್ಲಿ ಬ್ರಷ್ಟಾಚಾರಗಳ ಸರಮಾಲೆ ಇದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನ

ಶಾಶ್ವತವಾಗಿ ಮನೆಗೆ ಕಳಿಸುವ ಕೆಲಸ ಮಾಡಬೇಕಿದೆ. ನಮ್ಮ ಸರ್ಕಾರದ ಪ್ರತಿ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ನಿಮ್ಮದಾಗಿದೆ. ತಮ್ಮೆ ನಮ್ಮ ಪಕ್ಷವನ್ನ ರಾಜ್ಯದಲ್ಲಿ ಗೆಲ್ಲಿಸಿದರೆ ಅಭಿವೃದ್ಧಿಪಥ ಸಾಗುತ್ತದೆ. ಈ ಬಾರಿ 130 ಕ್ಷೇತ್ರಗಳನ್ನ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರು ಸುಳ್ಳಿನ ಸುಳಿಯಲ್ಲಿ ಸಿಲುಕಿದ್ದಾರೆ: ಬಸವರಾಜ ಬೊಮ್ಮಾಯಿ
ಹಾಸನ: ಕಾಂಗ್ರೆಸ್ ಮುಖಂಡರು ಸುಳ್ಳಿನ ಸುಳಿಯಲ್ಲಿ ಸಿಲುಕಿದ್ದಾರೆ. ಜಾತಿ, ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ. ಬಿಡಿಎ, ನೀರಾವರಿ, ಬಡವರ ಹಾಸಿಗೆ ದಿಂಬಿನಲ್ಲಿ ಭ್ರಷ್ಟಾಚಾರ ಮಾಡಿರುವ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಒಂದು ಪಕ್ಷಕ್ಕೆ ಆದ್ಯತೆ ನೀಡುತ್ತಿದ್ದೀರಿ. ಇದರಿಂದ ಅಭಿವೃದ್ಧಿ ಆಗುತ್ತಿಲ್ಲ. ಹಾಗಾಗಿ

ಈ ಬಾರಿ ಬಿಜೆಪಿಗೆ ಆಶೀರ್ವದಿಸಿ ಎಂದು ಮನವಿ ಮಾಡಿದರು.
ಇಂದು ಇಷ್ಟು ಪ್ರಮಾಣದಲ್ಲಿ ಜನ ಸೇರಿರುವುದು ಗಮನಿಸಿದರೆ ಮುಂದಿನ ಚುನಾವಣೆಯಲ್ಲಿ ದೊಡ್ಡ ಬದಲಾವಣೆಯೊಂದಿಗೆ ಬೇಲೂರಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. 
ಬಿಜೆಪಿ ಸಂಘಟಿತವಾಗಿದೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಚುಕ್ಕಾಣಿ ಹಿಡಿಯಲಿದೆ ಉತ್ತಮ ಆಡಳಿತ ಮುಂದುವರಿಸುವ ಕೆಲಸ ಮಾಡಲಿದೆ ಎಂದರು. 
ಐದು ವರ್ಷ ಕಾಂಗ್ರೆಸ್, ಒಂದೂವರೆ ವರ್ಷ ಸಮ್ಮಿಶ್ರ ಸರ್ಕಾರಕ್ಕೆ ಅವಕಾಶ ಕೊಟ್ಟಿರಿ. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಅನೇಕ ಯೊಜನೆ ಅನುಷ್ಠಾನಕ್ಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರಣ ಎಂದರು.
ವಿಶ್ವದಲ್ಲಿ ಅತೀದೊಡ್ಡ ಪಕ್ಷದ ಅಧ್ಯಕ್ಷರು ಪ್ರತಿದಿವಸ ದೇಶದಲ್ಲಿ ಸುತ್ತಿ ಪಕ್ಷ ಸಂಘಟನೆ ಮಾಡಿ ಸದೃಢ ರಾಜಕೀಯ ವಾತಾವರಣ ನಿರ್ಮಿಸಲು ನಡ್ಡಾ ಅವರು ಕಾರಣ. ರಾಷ್ಟ್ರೀಯ ಅಧ್ಯಕ್ಷರು ಬೇಲೂರಿಗೆ ಬಂದಿದ್ದು ಒಗ್ಗಟ್ಟಾಗಿ ಉತ್ತಮ ಸಂದೇಶ ನೀಡಿ. ಬೇಲೂರಿನಲ್ಲಿ ಬಿಜೆಪಿ ಅಧಿಕಾರಕ್ಕೆ ತರಲಿದ್ದೇವೆ ಎಂಬ ವಿಶ್ವಾಸ ನೀಡಿ ಎಂದರು. 
ನಮ್ಮ ಸರ್ಕಾರ ಬೇಲೂರು ಅಭಿವೃದ್ಧಿ ಗೆ ಕಾಣಿಕೆ ಕೊಟ್ಟಿದೆ.

ರಣಘಟ್ಟ ಯೋಜನೆ, ಕೆರೆ ತುಂಬಿಸುವಯೋಜನೆ, ಪ್ರವಾಸೋದ್ಯಮ, ಅರೇಹಳ್ಳಿ ಮಾದೀಹಳ್ಳಿ ಕೆರೆ ತುಂಬಿಸುವ ಕೆಲಸ ಮಾಡಿದ್ದೇವೆ. ರಣಘಟ್ಟ ಯೋಜನೆ ಜಾರಿಗೆ ಚಳವಳಿ ನಡೆಯುತ್ತಿತ್ತು ನಾವು ನೀಡಿದ ಆಶ್ವಾಸನೆಯಂತೆ ಯೋಜನೆ ಪೂರ್ಣ ಮಾಡಲಾಗಿದೆ ಎಂದರು.
ಸಚಿವ ಸಂಪುಟದ ಸಭೆಯಲ್ಲಿ ಬೇಲೂರು ಮತ್ತು ಅರಸೀಕೆರೆ ತಾಲ್ಲೂಕಿಗೆ ಜಲಜೀವನ್ ಮಿಷನ್ ಯೋಜನೆಯಡಿ ನೀರು ಪೂರೈಕೆಗೆ ಕ್ರಮವಹಿಸಲಾಗುತ್ತಿದೆ ಎಂದರು. 
ಕಾಂಗ್ರೆಸ್ ಸರ್ಕಾರ ಕೇವಲ ಕಾರ್ಯಕ್ರಮ ಘೋಷಣೆ ಮಾಡುತ್ತಿದ್ದು, ಆದರೆ ಅನುಷ್ಠಾನ ಮಾಡಿದ್ದು ಬಿಜೆಪಿ ಸರ್ಕಾರ ಎಂಬುದನ್ನು ನೆನಪು ಮಾಡುವುದಾಗಿ ಹೇಳಿದರು. 
ಬೇಲೂರನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲಾಗುತ್ತಿದ್ದು, ಕೆಲವೇ ದಿನದಲ್ಲಿ ಶಾಶ್ವತ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲಾಗುವುದು. ಬೇಲೂರು ಸಮಗ್ರ ಅಭಿವೃದ್ಧಿ ಆಗಲಿದೆ ಎಂಬ ಭರವಸೆ ನೀಡುತ್ತೇನೆ. ಯಗಚಿಯಿಂದ ಮಾತ್ರ ಬೇಲೂರಿಗೆ ನೀರು ಪೂರೈಕೆ ಆಗುತ್ತಿತ್ತು. ಆದರೆ

ಮುಂದಿನ ದಿನ ಹೇಮಾವತಿ ನದಿ ನೀರು ಸಹ ಪೂರೈಕೆ ಆಗಲಿದೆ ಎಂದರು. 
ಬೇಲೂರು ಭಾಗದ ಕಾಫಿ ಬೆಳೆಗಾರರಿಗೆ ಲೀಸ್ ನಲ್ಲಿ ಭೂಮಿ ನೀಡಲು ನಿರ್ಧರಿಸಿದ್ದು, ಕೆಲವೇ ದಿನದಲ್ಲಿ ನಿಯಮ ಜಾರಿಯಾಗಲಿದೆ ಎಂದರು.
ಯಾವುದೇ ಜಾತಿ, ಮತ ನೋಡದೇ ಆಡಳಿತ ನೀಡುವುದೆ ನಮ್ಮ ಸರ್ಕಾರದ ಉದ್ದೇಶ. ಅದರಂತೆ ಸರ್ಕಾರ ಯೋಜನೆ ರೂಪಿಸಿದೆ. ಸ್ವಚ್ಛ ಭಾರತ, ಪಿಎಂ ಕಿಸಾನ್ ಸಮ್ಮಾನ್ ಸೇರಿದಂತೆ ಅನೇಕ ಯೋಜನೆ ಜಾರಿಗೆ ಮೋದಿ ಸ್ಪೂರ್ತಿಯಾಗಿದ್ದಾರೆ ಎಂದರು.

ಲೋಕಾಯುಕ್ತ ಮುಚ್ಚಿ ಭ್ರಷ್ಟಾಚಾರ ಪೋಷಿಸಿದ ಸಿದ್ದರಾಮಯ್ಯ: ಜೆ.ಪಿ. ನಡ್ಡಾ ಟೀಕೆ
ಬೇಲೂರು (ಹಾಸನ):  ಲೋಕಾಯುಕ್ತವನ್ನು ಮುಚ್ಚುವ ಮೂಲಕ ಭ್ರಷ್ಟಾಚಾರ ಪೋಷಿಸಿದವರು ಸಿದ್ದರಾಮಯ್ಯ. ಆದರೆ ಬಸವರಾಜ ಬೊಮ್ಮಾಯಿ ಅವರು ಲೋಕಾಯುಕ್ತದ ಬಲವರ್ಧನೆ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.

ವಿಜಯ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಜಾತಿ, ಧರ್ಮಗಳನ್ನು ಒಡೆಯುವ ಕೆಲಸ ಮಾಡುತ್ತದೆ. ಭ್ರಷ್ಟಾಚಾರವನ್ನು ಪೋಷಿಸುತ್ತಿದೆ ಎಂದರು.  ತುಷ್ಟೀಕರಣ ರಾಜಕಾರಣದ ಮೂಲಕ ಪಿಎಫ್ ಐ ವಿರುದ್ಧದ 156 ಪ್ರಕರಣ ಹಿಂಪಡೆದ ಸಿದ್ದರಾಮಯ್ಯ, 1600 ಜನರನ್ನು ಜೈಲಿನಿಂದ ಬಿಡಿಸಿದ್ದರು. ಇದರಿಂದ ಕಾನೂನು, ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲಸ ಮಾಡಿದ್ದಾರೆ. ಇಂಥವರನ್ನು ಬೆಂಬಲಿಸುತ್ತೀರಾ ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here