ಹಾಸನ ಡಿಪೋಗೆ ಸೇರಿದ ಬಸ್ ಕೇರಳ ರಾಜ್ಯದ ಎರ್ನಾಕುಲಂ ನಿಂದ ಕೊಡಗಿನ ವಿರಾಜಪೇಟೆ ಮೂಲಕ ಹಾಸನಕ್ಕೆ ತೆರಳುತ್ತಿತ್ತು

0

ಹಾಸನ ಡಿಪೋಗೆ ಸೇರಿದ ಬಸ್ ಕೇರಳ ರಾಜ್ಯದ ಎರ್ನಾಕುಲಂ ನಿಂದ ಕೊಡಗಿನ ವಿರಾಜಪೇಟೆ ಮೂಲಕ ಹಾಸನಕ್ಕೆ ತೆರಳುತ್ತಿತ್ತು. ಮಂಗಳವಾರ ಮುಂಜಾನೆ 4:30ರ ವೇಳೆಗೆ , ದಟ್ಟ ಮಂಜು ಕವಿದಿತ್ತು ., ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ (KSRTC Bus) ಕಂದಕಕ್ಕೆ ಉರುಳಿದ ಪರಿಣಾಮ 40 ಮಂದಿ ಪ್ರಯಾಣಿಕರು

ಗಾಯಗೊಂಡಿರುವ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿಯ ಕಾವಾಡಿಯಲ್ಲಿ ನಡೆದಿದೆ. , ಚಾಲಕ ಸೇರಿದಂತೆ 40 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧಿಸಿದಂತೆ

ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಬಸ್ ಅನ್ನು ಮೇಲೆತ್ತಿ, ಹಾಸನ ಡಿಪೋಗೆ ರವಾನೆ ಮಾಡಲಾಗಿದೆ. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here