ಅರಸೀಕೆರೆ ನಗರಸಭೆ 7 ಸದಸ್ಯರ ದಿಡೀರ್ ರಾಜೀನಾಮೆ ಹಾಸನ ರಾಜಕೀಯದಲ್ಲಿ ಸಂಚಲನ

0

ಅರಸೀಕೆರೆ ನಗರಸಭೆ  ಹೊಸ ತಿರುವು ಜೆಡಿಎಸ್ ಪಕ್ಷದಿಂದ 7 ನಗರಸಭೆ ಸದಸ್ಯರು ಜೆಡಿಎಸ್ ಪಕ್ಷದ ಚಿನ್ನೆ ಇಂದ ಹೊರಬಂದಿದ್ದಾರೆ , ಇಬ್ಬರು ಪಕ್ಷೇತರ ನಗರಸಭೆ ಸದಸ್ಯರು ಬಿಜೆಪಿಗೆ ಸೇರ್ಪಡೆ?. ಅರಸೀಕೆರೆ ತಾಲೂಕಲ್ಲಿ ಹೊಸ ಸಂಚಲನ ತಂದಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್?

ಜಾತ್ಯಾತೀತ ಜನತಾದಳ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ 7 ಜನ ಅರಸೀಕೆರೆ ನಗರ ಸಭಾ ಸದಸ್ಯರು

ಹಾಸನ ಜಿಲ್ಲೆ ಅರಸೀಕೆರೆಯ 7 ಜನ ನಗರ ಸಭಾ ಸದಸ್ಯರುಗಳು ಹಾಸನ ಜಿಲ್ಲಾಧಿಕಾರಿಗೆ ಕೋರಿಕೆಯನ್ನು ಸಲ್ಲಿಸಿದ್ದಾರೆ

ಇವರ ನಮೂದಿಸಿರುವ ವಿಷಯ 

1) ನಾವು 7ಜನ ಅರಸೀಕೆರೆ ನಗರಸಭೆಯ ಸದಸ್ಯರಾಗಿರುತ್ತೇವೆ 31-08-2018ರಂದು ನಡೆದ ಅರಸೀಕೆರೆ ನಗರಸಭೆ ಸದಸ್ಯರ ಚುನಾವಣೆಯಲ್ಲಿ ನಾವು 7 ಜನರು ಜಾತ್ಯಾತೀತ ಜನತಾದಳ ಪಕ್ಷದ ಚಿನ್ನೆ ಹೊರೆಹೊತ್ತ ಮಹಿಳೆಯ ಚಿನ್ನೆಯಿಂದ ಚುನಾವಣೆಯಲ್ಲಿ ಆರಿಸಿ ಬಂದು ನಗರ ಸಭಾ ಸದಸ್ಯರಾಗಿರುತ್ತೇವೆ.

2) ಅರಸೀಕೆರೆ ನಗರಸಭೆಗೆ ಚುನಾವಣೆಯಾಗಿ ಸುಮಾರು 2.1/2 ವರ್ಷಗಳ ನಂತರ ಅಧ್ಯಕ್ಷರು/ಉಪಾಧ್ಯಕ್ಷರುಗಳ ಸ್ಥಾನಗಳಿಗೆ ಚುನಾವಣೆಗೆ ನಡೆದಿರುತ್ತದೆ

3)ನಾವುಗಳು ಯಾವ ನಿರೀಕ್ಷೆಗಳನ್ನು ಇಟ್ಟುಕೊಂಡು ಜಾತ್ಯಾತೀತ ಜನತಾ ದಳ ಪಕ್ಷವನ್ನು ಸೇರಿ ನಗರಸಭೆ ಸದಸ್ಯರುಗಳ ಆಯ್ಕೆ ಆಗಿದ್ದೇವೂ ಅನಿರೀಕ್ಷೆಗಳು ಕೈಗೂಡದೆ ಪಕ್ಷದಲ್ಲಿ ಆಂತರಿಕ ಪ್ರಜಾ ಪ್ರಭುತ್ವ ಇಲ್ಲವಾಗಿರುವುದರಿಂದ ಅಲ್ಲಿ ಉಸಿರು ಕಟ್ಟುವ ವಾತಾವರಣ ನಿರ್ಮಾಣವಾಗಿರುತ್ತದೆ.

4)ಈ ಕಾರಣದಿಂದಾಗಿ ನಾವು ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಕೊಟ್ಟ ವಚನವನ್ನು ನಡೆಸಲಾಗದೆ ನಮ್ಮ ನಮ್ಮ ವಾರ್ಡಿನಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕೈಗೊಳ್ಳಲಾಗದೆ ಅಸಹಾಯಕ ಪರಿಸ್ಥಿತಿಯಲ್ಲಿ ನಾವಿದ್ದೇವೆ , ಆದ್ದರಿಂದ ನಾವು ,7ಜನ ನಗರ ಸಭಾ ಸದಸ್ಯರುಗಳು ನಾವು ಆರಿಸಿ ಬಂದಿರುವ (ಜೆಡಿಎಸ್) ಪಕ್ಷದ ಪ್ರಾಥಮಿಕ ಸದಸ್ಯತ್ವ: ರಾಜೀನಾಮೆಯನ್ನು ಆ ಪಕ್ಷದ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಅಧ್ಯಕ್ಷರಿಗೆ ಪ್ರತ್ಯೇಕವಾಗಿ ಸಲ್ಲಿಸಿರುತ್ತೇವೆ.

5) ‘ಈ ನಮ್ಮ ರಾಜೀನಾಮೆಯನ್ನು ಯಾರದ್ದೇ ಒತ್ತಡವಾಗಲಿ, ಯಾವುದೇ ಬೆದರಿಕೆಯಾಗಲಿ ಅಥವ ಯಾವುದೇ ಆಮಿಷ ಆಗಲಿ ನೀಡಿರುವುದಿಲ್ಲ, ಬದಲಿಗೆ ನಮ್ಮ ನಮ್ಮ ಚುನಾಯಿತ ವಾರ್ಡ್‌ಗಳಲ್ಲಿ ಅಭಿವೃದ್ಧಿಯನ್ನು ಮಾಡುವ ಸದುದ್ದೇಶದಿಂದ ಹಾಗೂ ಜಾತ್ಯಾರ್ತೀಕ ಜನತಾದಳ ಪಕ್ಷದ ಉಸಿರು ಕಟ್ಟುವ ವಾರಾವರಣದಿಂದ ಹೊರಬರುವುದಕ್ಕಾಗಿ ನಾವು 7 ಸದಸ್ಯರುಗಳು ಸಾಮೂಹಿಕವಾಗಿ ರಾಜೀನಾಮೆಯನ್ನು ಕೊಟ್ಟಿರುತ್ತೇವೆ.

6)ಹಾಗೂ ಮುಂದೆ ನಾವುಗಳೂ ಅಪೇಕ್ಷೆ ಪಡುವ ರಾಜಕೀಯ ಪಕ್ಷದ ಸಹ ಸದಸ್ಯರುಗಳಾಗಿ ಮುಂದುವರೆಯುತ್ತೇವೆ.

7)ನಾವುಗಳು ಪಕ್ಷಾಂತರ ನಿಷೇದ ಕಾನೂನನ್ನು ಚೆನ್ನಾಗಿ ಬಲ್ಲವರಾಗಿರುತ್ತೇವೆ, ಅರಸೀಕೆರೆ ನಗರಸಭೆಗೆ ಜಾತ್ಯಾತೀತ ಜನತಾದಳ ದಿಂದ ಆಯ್ಕೆ ಆಗಿರುವ 21 ರ ನಗರ ಸಭಾ ಸದಸ್ಯರಿದ್ದು ಆಪೈಕಿ 3ನೇ 1 ಭಾಗವಾದ 7 ಜನ ವ್ಯಕ್ತಿ ಗಳು ಸಾಮೂಹಿಕ ರಾಜೀನಾಮೆಯನ್ನು ನೀಡಿರುವುದರಿಂದ ಪಕ್ಷಾಙತರ ನಿಷೇಧ ಕಾಯಿದೆಯನ್ನು 1987 ಉಲ್ಲಂಘಿಸಿದಂತಾಗುವುದಿಲ್ಲ. ಆದ್ದರಿಂದ ತಾವು ಈ ನಮ್ಮ ಮನವಿಯನ್ನು ಪರಿಶೀಲಿಸಿ  ನಮ್ಮ ಕೋರಿಕೆಯಂತೆ ಇನ್ನು ಮುಂದೆ ನಡೆಯುವ ಅರಸೀಕೆರೆ ನಗರ ಸಭೆಯ ಎಲ್ಲಾ ಅಧಿವೇಶನಗಳಲ್ಲಿ ನಮಗೆ ಪ್ರತ್ಯೇಕವಾದ ಆಸನಗಳನ್ನು ವ್ಯವಸ್ಥೆಯನ್ನು ಮಾಡಿಕೊಡಲು ಅರಸೀಕೆರೆ ನಗರಸಭಾ ಪೌರಾಯುಕ್ತರಿಗೆ ನಿರ್ದೇಶನ ನೀಡಬೇಕೆಂದು ನಮ್ಮಲ್ಲಿ ವಿನಂತಿಸುತ್ತೇವೆ.

ಎಂದು ಚುನಾವಣಾ ಅಧಿಕಾರಿಗಳು, ಜಿಲ್ಲಾಧಿಕಾರಿ ಗೆ ಮನವಿ ಕೊಟ್ಟರು

LEAVE A REPLY

Please enter your comment!
Please enter your name here