ಹಾಸನ: ರಸ್ತೆಬದಿ ಹಾಕಿರುವ ಕಸ ತೆರವು ಮಾಡಿ, ಮತ್ತೆ ಕಸ ಹಾಕದಂತೆ ನಗರಸಭೆ ಹಾಗೂ ಶಾಸಕರು ಗಮನಹರಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಮುಖಂಡ ಪ್ರಸಾದ್‌ಗೌಡ ನೇತೃತ್ವದಲ್ಲಿ ರಾಜಘಟ್ಟ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿದರು.
ಜೆಡಿಎಸ್ ಮುಖಂಡ ಪ್ರಸಾದ್ ಗೌಡ ಮಾತನಾಡಿ, ‘ನಗರಸಭೆ 1ನೇ ವಾರ್ಡ್ ಗೆ ಸೇರುವ ರಾಜಘಟ್ಟದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಾಣುತ್ತಿದ್ದೇವೆ. ಪೃಥ್ವಿ ಚಿತ್ರ ಮಂದಿರದಿಂದ ಹೊಸ ಬಸ್ ನಿಲ್ದಾಣದ ಅಂಡರ್ ಪಾಸ್ ವರೆಗೂ ರಸ್ತೆಯ ಎರಡೂ ಬದಿಯಲ್ಲಿ ಕೋಳಿ ಅಂಗಡಿ ತ್ಯಾಜ್ಯ, ಹಳೆ ಕಟ್ಟಡ ತ್ಯಾಜ್ಯ ಹಾಗೂ ಇತರೆ ಕಸಗಳನ್ನು ಸುರಿಯುತ್ತಿದ್ದಾರೆ’ ಎಂದರು.
ಅವಿಜ್ಞಾನಿಕ ಕಸ ವಿಲೇವಾರಿ ವಿರೋಧಿಸಿ ಜೆಡಿಎಸ್ ಪ್ರಸಾದ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ
ನಗರದ ಬಿ. ಎಂ ರಸ್ತೆಯಲ್ಲಿರುವ ಪೃಥ್ವಿ ಚಿತ್ರಮಂದಿರದಿಂದ ಚನ್ನಪಟ್ಟಣ ಹೊಸ ಬಸ್ ನಿಲ್ದಾಣ ಸಂಪರ್ಕಿಸುವ ರಾಜಗಟ್ಟ ರಸ್ತೆ ಬದಿಯಲ್ಲಿ ಕಸ ವಿಲೇವಾರಿ ಮಾಡಿರುವುದನ್ನು ಖಂಡಿಸಿ ಜೆಡಿಎಸ್ ಮುಖಂಡ ಪ್ರಸಾದ್ ಗೌಡ ನೇತೃತ್ವದಲ್ಲಿ ರಾಜಘಟ್ಟ ನಿವಾಸಿಗಳು ಪ್ರತಿಭಟನೆ ನಡೆಸಿದರು
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಪ್ರಸಾದ್ ಗೌಡ ಮಾತನಾಡಿ, ನಗರಸಭೆಗೆ ಸಂಬಂಧಿಸಿದಂತೆ ಇರುವ ಒಟ್ಟು 35 ವಾರ್ಡ್ ಗಳಲ್ಲಿ, ವಾರ್ಡ್ ನಂಬರ್ 1 ಕ್ಕೆ ಸೇರುವ ರಾಜಘಟ್ಟ ದಲ್ಲಿನ ರಸ್ತೆ ಬದಿಯಲ್ಲಿ ನಗರದ ತ್ಯಾಜ್ಯವನ್ನು ಸುರಿಯಲಾಗಿದೆ ವಾರ್ಡ್ ನಂಬರ್ ಒಂದರ ಗತಿಯೇ ಹೀಗಾದರೆ ಬೇರೆ ವಾರ್ಡ್ ಗಳ ಗತಿ ಏನು ಎಂದು ಪ್ರಶ್ನಿಸಿದರು
ಈ ಮಾರ್ಗದಲ್ಲಿ ರಾಜಘಟ್ಟ, ಗವೇನಹಳ್ಳಿ, ಚನ್ನಪಟ್ಟಣ, ಕೊಪ್ಪಲು ಸೇರಿದಂತೆ ವಿವಿಧ ವಾರ್ಡ್ ಗಳ ಜನರು ಈ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದು ಇಲ್ಲಿ ಸಂಭವಿಸುವ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು
ಈಗಾಗಲೇ ಕೋವಿ ಡ್ ಸೇರಿದಂತೆ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಇಲ್ಲಿನ ಕೆಟ್ಟ ವಾತಾವರಣ ಇನ್ನಷ್ಟು ಕಾಯಿಲೆಗಳನ್ನು ತಂದು ಒಡ್ಡುವಂತೆ ಮಾಡಿದೆ, ಪೃಥ್ವಿ ಚಿತ್ರ ಮಂದಿರದಿಂದ ಚನ್ನಪಟ್ಟಣ ಹೊಸ ಬಸ್ ನಿಲ್ದಾಣದವರೆಗೆ ಸುಮಾರು 2-3 ಕಿ.ಮೀ ರಸ್ತೆಯುದ್ದಕ್ಕೂ ಕಸ ವಿಲೇವಾರಿ ಮಾಡಿರುವುದು ಶೋಚನೀಯ ಎಂದರು
ರಸ್ತೆ ಬದಿಯಲ್ಲಿ ಕಸ, ಹಾಗೂ ಇನ್ನಿತರ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗುತ್ತಿದ್ದು ಸ್ಥಳೀಯರಿಗೆ ಉಸಿರಾಡಲು ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ, ಅಲ್ಲದೆ ಈ ವಾರ್ಡ್ ನಲ್ಲಿ ಬಿಜೆಪಿ ನಗರಸಭೆ ಸದಸ್ಯ ಇದ್ದರೂ ಕಣ್ಣು ಮುಚ್ಚಿ ಕುಳಿತಿದ್ದಾರೆ ಕೂಡಲೇ ಸಂಭಂದಿಸಿದ ಇಲಾಖಾ ಅಧಿಕಾರಿಗಳು ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಚ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು
ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು. ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು,ಸೂಕ್ತ ಸ್ಥಳ ಗುರುತಿಸಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು, ಬಯೋ ಗ್ಯಾಸ್ ಘಟಕ ಸ್ಥಾಪಿಸಿ ಕಸ ವಿಲೇವಾರಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು
ಸುಂದರ ನಗರ ನಿರ್ಮಾಣ ಮಾಡುವ ಶಾಸಕ ಈ ಪ್ರದೇಶಕ್ಕೆ ಒಮ್ಮೆ ಭೇಟಿ ನೀಡಬೇಕು, ಅಧಿಕಾರ ಸ್ವೀಕಾರ ಮಾಡಿ 4 ವರ್ಷ ಕಳೆದರೂ ಸ್ವಚ್ಛ ನಗರ ನಿರ್ಮಾಣ ಮಾಡಲು ಆಗಿಲ್ಲ ಇನ್ನೂ ಸುಂದರ ನಗರ ನಿರ್ಮಾಣ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಉದ್ಯಾನವನದಲ್ಲಿ ಮಾಡಲು ಮುಂದಾಗಿರುವ ಅನಗತ್ಯ ಕಾಮಗಾರಿಗೆ ಬದಲಾಗಿ ಇಲ್ಲಿನ ಸ್ವಚ್ಛತೆ ಬೆಗ್ಗೆ ಕಾಳಜಿ ವಹಿಸಬೇಕು ಎಂದರು
ರಜಘಟ್ಟ ನಿವಾಸಿ ಜಗದೀಶ್ ಮಾತನಾಡಿ, ಸುತ್ತ ಮುತ್ತಲ ತ್ಯಾಜ್ಯ ತೆಗೆಸಲು ಅನೇಕ ಬಾರಿ ಹೋರಾಟ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ, ಇಂತಹ ಕೊಳಚೆ ಪ್ರದೇಶದಲ್ಲಿ ವಾಸಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಹತ್ತಾರು ವಾರ್ಡ್ ಗಳ ಗರ್ಭಿಣಿಯರು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸೇರಿದಂತೆ ಎಲ್ಲರೂ ಇದೆ ಮಾರ್ಗವಾಗಿ ಪ್ರಯಾಣ ಮಾಡಬೇಕು ಗುಂಡಿ ಬಿದ್ದ ರಸ್ತೆಗಳಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು
ಮಳೆಗಾಲದಲ್ಲಿ ರಸ್ತೆ ಸಂಚಾರ ಮಾಡಲು ಹರಸಾಹಸ ಮಾಡಬೇಕು, ಅಲ್ಲದೆ ಲಾರಿಗಳ ಓಡಾಟ ದಿಂದಾಗಿ ಧೂಳು ಸಂಭವಿಸಿ ಪರಿಸರ ಮಾಲಿನ್ಯ ವಾಗುತ್ತಿದೆ ಕೂಡಲೇ ಈ ಎಲ್ಲಾ ಸಂಸ್ಯೆಗಳನ್ನು ಬಗೆ ಹರಿಸಲು ಸ್ಥಳೀಯ ಶಾಸಕರು ಮುಂದಾಗಬೇಕು ಎಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಮಾಜಿ ಸೈನಿಕ ಸಂಘದ GN ನಾಗರಾಜು, JF ಬಸವರಾಜು, ಕಾಳೇಗೌಡ ಹಾಗೂ ರಾಜಘಟ್ಟ ನಿವಾಸಿಗಳಾದ, ಮಂಜುನಾಥ, ಧರ್ಮೇಶ್,ಚಂದ್ರಗೌಡ ಅವಿನಾಶ್, ನಿಂಗೇಗೌಡ ರಮೇಶ್ ಇತರರು ಇದ್ದರು