ಹಾಸನ / ಅರಕಲಗೂಡು : ಕಾಳೇನಹಳ್ಳಿ ಬಳಿ ರಾಮನಾಥಪುರ- ಮೈಸೂರು ರಸ್ತೆಯಲ್ಲಿ ಮಾಗಡಿ ಸೋಮವಾರಪೇಟೆ ಹೆದ್ದಾರಿ ವಿಸ್ತರಣೆ ಕಾಮಗಾರಿಯ ಸೇತುವೆ ನಿರ್ಮಾಣ ನಡೆಯುತ್ತಿರುವ ಸ್ಥಳದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ರಸ್ತೆ ಮಳೆಯ ಅವಾಂತರಕ್ಕೆ ಕುಸಿದಿದೆ. ,( ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಕಾಳೇನಹಳ್ಳಿಯ ದೊಡ್ಡಕೆರೆಯಿಂದ ಹೆಚ್ಚಿನ ಪ್ರಮಾಣದ ನೀರು ಹೊರ ಹರಿದ ಕಾರಣ ರಸ್ತೆ ಕುಸಿದಿದೆ ಎನ್ನಲಾಗಿದೆ ) ಮಳೆಯಿಂದ ತಾತ್ಕಾಲಿಕ ರಸ್ತೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ರಾಮನಾಥಪುರ- ಮೈಸೂರು ಮುಖ್ಯ ರಸ್ತೆಯ ವಾಹನ ಸಂಚಾರವನ್ನು ಮಂಗಳವಾರ ಬಂದ್ ಮಾಡಲಾಗಿದೆ. ,
ಬದಲಿ ಮಾರ್ಗದ ವಿವರ ಇಲ್ಲಿದೆ ನೋಡಿ :
• ಮೈಸೂರು–ರಾಮನಾಥಪುರ ಮತ್ತು ರಾಮನಾಥಪುರ– ಮೈಸೂರು ಮಾರ್ಗದ ವಾಹನಗಳು ಗಂಗೂರು, ಹನ್ಯಾಳು, ಮಧುರನಹಳ್ಳಿ, ಕತರ್ಳು ಮಾರ್ಗವಾಗಿ ಕೇರಳಾಪುರ ತಲುಪಬಹುದು (ಇದೇ ಮಾರ್ಗದಲ್ಲಿ ಕೆಎಸ್ಆರ್ ಟಿ ಬಸ್ ಗಳು ಓಡಾಡುತ್ತಿವೆ)
#hassan #hassannews