ಸಂಗೀತ ಗ್ರಾಮ ಹಾಸನ ಜಿಲ್ಲೆಯ ರುದ್ರಪಟ್ಟಣದಲ್ಲಿ ಮೇ 14,15ರಂದು ಸಂಗೀತೋತ್ಸವ ; ಗ್ರಾಮದಲ್ಲಿ ಭರ್ಜರಿ ಸಿದ್ಧತೆ

0

‌ನೀವು ನೋಡ್ತಾ ಇರೋ ಈ ವಿಶಿಷ್ಟ ತಂಬೂರಿ ಆಕಾರದ ಆರ್ಕಿಟೆಕ್ಟ್ ಉಳ್ಳ ಛಾಯಾಚಿತ್ರ ನಮ್ಮ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿ ಸಂಗೀತ ಗ್ರಾಮ ರುದ್ರಪಟ್ಟಣದ ವಿಶ್ವವಿಖ್ಯಾತ ಸಪ್ತ ಸ್ವರ ದೇವತಾ ಮಂದಿರ.

ಪ್ರತಿ ವರ್ಷದಂತೆ ಈ ವರ್ಷವು ವಿಶ್ವ ವಿಖ್ಯಾತ ಸಪ್ತಸ್ವರ ದೇವತಾ ಮಂದಿರದ ಆವರಣದಲ್ಲಿ ಮೇ 14 ಹಾಗೂ 15ರಂದು ನಡೆಯುವ ರಾಮನಾಥಪುರ ಹೋಬಳಿ ಸಂಗೀತೋತ್ಸವದಲ್ಲಿ ಸುಮಾರು 20ಕ್ಕೂ ಹೆಚ್ಚು ಯುವ ಕಲಾವಿದರ ಸಂಗೀತ ಕಛೇರಿ ಏರ್ಪಡಿಸಲಾಗಿದ್ದು ,  ಪ್ರತಿ ವರ್ಷದಂತೆ ಘನವಾದ ಸಂಗೀತ, ಶುಚಿ, ರುಚಿಯಾದ ಉಪಹಾರ, ಭೋಜನದ ವ್ಯವಸ್ಥೆ ಇರುತ್ತದೆ , ಸಾಧ್ಯವಾದರೆ ಒಮ್ಮೆ ಭೇಟಿ ಕೊಡಿ .,

ರಾಮನಾಥಪುರ ಹೋಬಳಿ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಇದೇ ಮೇ 14 ಶನಿವಾರ ಹಾಗೂ 15 ಭಾನುವಾರ ರಂದು ಎರಡು ದಿನಗಳ ಬೆಳಗ್ಗೆಯಿಂದ ರಾತ್ರಿ ವರೆಗೆ 19ನೇ ವಾರ್ಷಿಕ ಸಂಗೀತೋತ್ಸವ ಕಾರ್ಯಕ್ರಮ ಜರುಗುತಗತಿದ್ದು, ಈ ಸಂಭ್ರಮಕ್ಕಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣಕ್ಕೆ ,  ಆಕರ್ಷಕ ವಿದ್ಯುತ್ ಅಲಂಕೃತ ದೀಪಗಳಿಂದ ಅತ್ಯಾಕರ್ಷಿತಗೊಂಡಿದೆ .

ರುದ್ರಪಟ್ಟಣದ ಸಪ್ತಸರ ದೇವತಾ ಮಂದಿರದಲ್ಲಿ ಟ್ರಸ್ಟ್ ಅಧ್ಯಕ್ಷ ಕೋಗಿಲೆ ವಿದ್ವಾನ್ ಆರ್ ಕೆ ಪದ್ಮಾನ್ ಹಾಗೂ ಗಾನ ಕೋಗಿಲೆ ವಿದ್ವಾನ್ ಮುಖ್ಯಸ್ಥಿಕೆ ವಹಿಸಲಿದ್ದಾರೆ

ಕಾರ್ಯಕ್ರಮಗಳ ವಿವರ :
• ಸಂಗೀತೋತ್ಸವದಲ್ಲಿ ಮೇ 14 ಶನಿವಾರ ಬೆಳಗ್ಗೆ 10.15 ರಿಂದ ರಾತ್ರಿ 7.30 ರ ವರೆಗೆ ವಿವಿಧ ವಿದ್ವಾಂಸರು ಗಾಯನ
• ಏ. ವಿಶ್ವಜಿತ್, ವಿ. ಕಾರ್ತಿಕೇಯ ವೈಲಿನ್ ಹಾಗೂ ವಿ. ಚಲುವರಾಜ್, ವಿ. ಬಿ.ಎಸ್. ಆನಂದ್ ಮೃದಂಗ
• ರಾತ್ರಿ 7.45 ರಿಂದ ರುದ್ರಪಟ್ಟಣದ ಮೇಘ ಹಾಗೂ ಮೇಖಲಾ ಭರತನಾಟ್ಯ


• ಮೇ 15ರ ಭಾನುವಾರ ಬೆಳಗ್ಗೆ 9 ಗಂಟೆಗೆ ರಥೋತ್ಸವ ,
• ಬೆಳಗ್ಗೆ 10.30ರಿಂದ ವಿವಿಧ ವಿದ್ವಾಂಸರುಗಳಿಂದ ಗಾಯನ ಕಾರ್ಯಕ್ರಮ
• ಮೇ 15 ರ ಭಾನುವಾರ ರಾತ್ರಿ 7.45ಕ್ಕೆ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ

ಸ್ಥಳೀಯ ವೈಶಿಷ್ಟ್ಯಗಳ , ವಿಚಾರಗಳ , ಸಂಸ್ಕೃತಿ ,  ಕಲೆಯ ಪ್ರೋತ್ಸಾಹಿಸಿ ಬೆಳೆಸಿ

LEAVE A REPLY

Please enter your comment!
Please enter your name here