ತಮ್ಮನ ಸಾವಿನ ಆಘಾತ: ಅಣ್ಣನಿಗೆ ಹೃದಯಾಘಾತ

0

ಅರಸೀಕೆರೆ: ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ತಮ್ಮನ ಅಂತಿಮ ದರ್ಶನ ಪಡೆಯಲು ಬಂದಿದ್ದ ಅಣ್ಣ ಸಹ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ವಡಗೇರಹಳ್ಳಿ ಗ್ರಾಮದಲ್ಲಿ ನಡೆದಿದೆ.


ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾಡುತ್ತಿದ್ದ ಪ್ರವೀಣ್(28) ಹಾಗೂ ಆಟೋ ಚಾಲಕನಾಗಿದ್ದ ನಾಗರಾಜು(32) ಎಂಬುವರು ನಿನ್ನೆ ರಾತ್ರಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಹಲವು ವರ್ಷಗಳ ನಂತರ ಭರ್ತಿಯಾಗಿದ್ದ ಗ್ರಾಮದ ಕೆರೆಯಲ್ಲೇ ವಿಸರ್ಜನೆಗೆ ತೆರಳಿದ್ದ ವೇಳೆ

ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದರು. ಇಬ್ಬರಿಗೂ ಈಜು ಬಾರದ ಕಾರಣ ನೀರಿಗೆ ಇಳಿದವರು ಮೇಲೆ ಬಂದಿದ್ದು ಹೆಣವಾಗಿ.
ಹೆತ್ತವರು ಈ ದುಃಖದಲ್ಲಿರುವಾಗಲೇ ಮತ್ತೊಂದು ಮನ ಕಲಕುವ ಘಟನೆ ನಡೆದು ಹೋಗಿದೆ. ನೀರಿನಲ್ಲಿ ಮುಳುಗಿ ಸತ್ತ ಸಹೋದರ ನಾಗರಾಜು ಅಂತಿಮ ದರ್ಶನ ಪಡೆಯಲು ಬೆಂಗಳೂರಿನಿಂದ ಬಂದಿದ್ದ

ಮಧು(37) ಎಂಬುವರು, ಅನುಜನ ಅಗಲಿಕೆಯ ನೋವು ತಾಳಲಾರದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸಹೋದರನ ಮೃತದೇಹ ನೋಡಲು ಆಸ್ಪತ್ರೆಗೆ ಬಂದಿದ್ದ ಮಧು, ಅಲ್ಲೇ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ.
ಹಾಸನದ ಹಿಮ್ಸ್ ಶವಾಗಾರದ ಬಳಿ ಮೃತ ನಾಗಾರಾಜನನ್ನು ನೋಡಲು ಬಂದಿದ್ದ ಮಧು, ಹೆಚ್ಚು ಒತ್ತಡಕ್ಕೊಳಗಾಗಿ ಕಣ್ಣೀರಿಡುತ್ತಾ ಆಘಾತಕ್ಕೆ ಒಳಗಾಗಿದ್ದಾರೆ. ಸಹೋದರನ ಮೃತದೇಹ ನೋಡಿಕೊಂಡು ಹೊರಕ್ಕೆ ಬರುತ್ತಿದ್ದಂತೆಯೇ

ಮಧು ಇದ್ದಕ್ಕಿದ್ದಂತೆಯೇ ಕೆಳಕ್ಕೆ ಕುಸಿದಿದ್ದಾರೆ. ತಕ್ಷಣವೇ ಅವರನ್ನು ಐಸಿಯೂಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಫಲಕಾರಿಯಾಗಲಿಲ್ಲ.
ಒಬ್ಬ ಮಗನ ಸಾವಿನಿಂದ ಕಂಗೆಟ್ಟಿದ್ದ ಪೋಷಕರಿಗೆ ಇದೀಗ, ಮತ್ತೊಬ್ಬ ಮಗನ ಸಾವು ಬರಸಿಡಿಲು ಬಡಿದಂತೆ ಮಾಡಿದೆ. ಕೆಲವೇ ಗಂಟೆಗಳ ಅಂತರದಲ್ಲಿ ತಮ್ಮ-ಅಣ್ಣ ಇಬ್ಬರೂ ಇಹಲೋಕ ತ್ಯಜಿಸುವ ಮೂಲಕ ಸಾವಿನಲ್ಲೂ ಒಂದಾಗಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಪೋಷಕರ ಕಣ್ಣೀರು, ಆಕ್ರಂದನ ಮುಗಿಲು ಮುಟ್ಟಿದೆ.
ಮಧು ಅಂಗವಿಕಲನಾಗಿದ್ದರೂ

ಶ್ರಮಪಟ್ಟು ದುಡಿಯುತ್ತಿದ್ದ. ಬೆಂಗಳೂರಿನಲ್ಲಿ ಚಿಪ್ಸ್, ವಾಟರ್ ಬಾಟೆಲ್ ಹೋಲ್ ಸೇಲ್ ಬ್ಯುಸಿನೆಸ್ ಮಾಡುತ್ತಿದ್ದ. ಕಾಲು ಅಂಗ ವಿಕಲತೆ ಯಿಂದ ಕೂಡಿದ್ದರೂ, ತೆವಳುತ್ತಲೇ ಬ್ಯುಸಿನೆಸ್ ಮಾಡ್ತಾ ಜೀವನ ಸಾಗಿಸುತ್ತಿದ್ದರು. ಆಯುಧ ಪೂಜೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ವೇಳೆ ಅನಿರೀಕ್ಷಿತ ದುರ್ಘಟನೆ ನಡೆದಿದೆ. ದುರಂತ ಸಾವಿಗೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಕಂಬನಿ ಮಿಡಿಯುತ್ತಿದ್ದಾರೆ.
ಗಣೇಶ ಮೂರ್ತಿ ವಿಜರ್ಸನೆಯ ಸಂಭ್ರಮ ಕೆಲವೇ ನಿಮಿಷಗಳಲ್ಲಿ

ಇಲ್ಲವಾಗಿ ಇಡೀ ಗ್ರಾಮದಲ್ಲಿ ಸೂತಕ ಮನೆ ಮಾಡಿದೆ. ಅಂಗವಿಕಲನಾದರೂ, ಶ್ರಮಪಟ್ಟು ದುಡಿಯುತ್ತಿದ್ದ ಮಧು, ಆತನಿಗೆ ಬೆಂಗಾವಲಾಗಿ ನಿಂತಿದ್ದ ಸಹೋದರ ಇಬ್ಬರೂ ಇಲ್ಲವಾಗಿರುವುದು ಇವರನ್ನು ನಂಬಿದ್ದವರಲ್ಲಿ ಅನಾಥ ಭಾವ ಮೂಡಿದೆ.
ಇವರನ್ನೇ ನಂಬಿಕೊಂಡಿದ್ದ ಕುಟುಂಬ ಸದಸ್ಯರಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಮಾನವೀಯ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ನೀಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here