ಹಾಸನ : ಪತಿಯ ಶವದ ಮುಂದೆ ಮನನೊಂದು ಅಳು – ಅಳುತ್ತ ಪತ್ನಿ ಪ್ರಾಣ ಬಿಟ್ಟ ಹೃದಯವಿದ್ರಾವಕ ಘಟನೆಯೊಂದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಪಡುವಳಲು ಗ್ರಾಮದಲ್ಲಿ ನಡೆದಿದ್ದು ., ನಿನ್ನೆ (ಶುಕ್ರವಾರ) ರಾತ್ರಿ ಹೃದಯಾಘಾತದಿಂದ ಪತಿಯು ಸಾವನ್ನಪ್ಪಿದ್ದು, ಬೆಳಿಗ್ಗೆಯಿಂದ ಪತಿ ಶವದ ಮುಂದೆ ಪತ್ನಿ ಅಳುತ್ತಲೆ ಇದ್ದು , ನೆರೆದಿದ್ದ ನೆಂಟರಿಷ್ಟರ ಮುಂದೆಯೇ ನೋಡ ನೋಡುತ್ತಿದಂತೆ
ಪ್ರಾಣವೇ ಬಿಟ್ಟು ಬಿಟ್ಟಿದ್ದಾಳೆ. , ಶುಕ್ರವಾರ ರಾತ್ರಿ ರವೀಶ್ (39) ಹೃದಯಾಘಾತದಿಂದ ಮೃತಪಟ್ಟಿದ್ದರು. ಶನಿವಾರ ಬೆಳಗ್ಗೆ ಪತಿಯ ಶವದ ಮುಂದೆ ಅಳುತ್ತಲೇ ಪತ್ನಿ ಪ್ರಮೀಳಾ (32) ಕೊನೆಯುಸಿರೆಳೆದಿದ್ದಾಳೆ.
ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಪಾಲಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಪಾಲಕರ ಶವಗಳ ಮುಂದೆ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ. ದಂಪತಿ ಸಾವಿಗೆ ಗ್ರಾಮಸ್ಥರು ಕೂಡ ಕಂಬನಿ ಮಿಡಿದಿದ್ದಾರೆ. ದಂಪತಿಯ ಅಂತಿಮ ಸಂಸ್ಕಾರ ಶನಿವಾರ ಸಂಜೆ ನಡೆಯಲಿದೆ.