ಗಮನಿಸಿ : ಇಂದಿನಿಂದ ಹತ್ತು ದಿನ ಸಕಲೇಶಪುರ/ಬೇಲೂರು ತಾಲ್ಲೂಕಿನ ಈ ಪ್ರದೇಶಗಳಲ್ಲಿ ಕರೆಂಟ್ ವ್ಯತ್ಯಯ

0

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಹಾಸನ/ಸಕಲೇಶಪುರ : ಹಾಸನ ಜಿಲ್ಲೆಯ ದ್ವಿ -ವಿದ್ಯುತ್ ಮಾರ್ಗಗಳ ಗೋಪುರಗಳ ಮೇಲೆ ಹಾಲಿ ಇರುವ 66ಕೆ.ವಿ ಸಕಲೇಶಪುರ- ಅರೇಹಳ್ಳಿ ವಿದ್ಯುತ್ ಮಾರ್ಗದ ಎರಡನೇ ಸರ್ಕ್ಯೂಟ್ ವಿದ್ಯುತ್ ಮಾರ್ಗ ರಚನೆ ಕಾಮಗಾರಿಗೆ ಸಂಬಂಧಿಸಿದಂತೆ 66 ಕೆ.ವಿ ಸಕಲೇಶಪುರ- ಅರೇಹಳ್ಳಿ ವಿದ್ಯುತ್ ಮಾರ್ಗದ ಲೈನ್‌ಕ್ಲಿಯರ್‌ ತೆಗೆದುಕೊಳ್ಳುವುದರಿಂದ 66/11 ಕೆ.ವಿ ಅರೇಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ 11 ಕೆ.ವಿ ಪೂರಕಗಳ ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ 2022 ರ ಜನವರಿ 02 , 05 , 07 , 09 , 12 , 14 , 16 , 19 , 21, ಮತ್ತು 23 ರವರೆಗೆ ಒಟ್ಟು 10 ದಿನಗಳು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅರೇಹಳ್ಳಿ , ಹಾನುಬಾಳು ಹಾಗೂ ಸಕಲೇಶಪುರ ಪಟ್ಟಣದ ಕೆಲವೆಡೆ ಬಹುತೇಕ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದು. ಸಾರ್ವಜನಿಕರು ಸಹಕರಿಸುವಂತೆ ಕ.ವಿ.ಪ್ರ.ನಿ.ನಿ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

LEAVE A REPLY

Please enter your comment!
Please enter your name here