ಅಸ್ಸಾಂನಲ್ಲಿ ಮೃತಪಟ್ಟಿದ್ದ ಭಾರತೀಯ ಸೇನೆಯ ರೆಜಿಮೆಂಟ್ ಗುರುಮೂರ್ತಿಗೆ ಹಾಸನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

0

ಹಾಸನ: ಅಸ್ಸಾಂನಲ್ಲಿ ಡಿ. 28 ರಂದು ಅನಾರೋಗ್ಯದಿಂದ ಮೃತಪಟ್ಟಿದ್ದ ಭಾರತೀಯ ಸೇನೆಯ 5 ಮದ್ರಾಸ್‌ ರೆಜಿಮೆಂಟ್‌ ಯೋಧ ಗುರುಮೂರ್ತಿ (36) ತಾಲ್ಲೂಕಿನ ಅನುಗವಳ್ಳಿಯ ನಿವಾಸಿ ಗುರುಮೂರ್ತಿ ಅವರು 18 ವರ್ಷಗಳಿಂದ ವಿವಿಧೆಡೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಮ್ಮ ಹೆಮ್ಮೆಯ ಸೇನಾನಿ ವಿಧಿಯಾಟಕ್ಕೆ

ಕರ್ತವ್ಯದಲ್ಲಿ ಇದ್ದಾಗಲೇ ಅನಾರೋಗ್ಯಕ್ಕೆ ತುತ್ತಾಗಿದ್ದ ಆಸ್ಪತ್ರೆಗೆ ದಾಖಲಿಸಿದರು ಉಳಿಯಲಿಲ್ಲ , ಇನ್ನೊಂದು ವಿಷಯ ಏನೆಂದರೆ ಕೆಲವೇ ದಿನಗಳಲ್ಲಿ ನಿವೃತ್ತಿಯಾಗಲಿದ್ದರಂತೆ , ಇವರ ಬರುವಿಕೆಗೆ ಮನೆಯ ಒಡತಿ ಇಬ್ಬರು ಸಣ್ಣ ಮಕ್ಕಳು ಮೊದಲ ಮಗ ಗೌತಮ್ ಅಪ್ಪ ಇನ್ಮುಂದೆ ನಮ್ ಜೊತೆ ಮನೆಲೆ ಇರ್ತಾರೆ ಅಂತ ಖುಷಿ ಪಟ್ಟಿಕೊಂಡು ತಮ್ಮ ಸಹಪಾಟಿಗಳ ಜೊತೆ ಹೇಳಿಕೊಂಡಿದ್ದನಂತೆ

ಪಾರ್ಥಿವ ಶರೀರವನ್ನು ಅಸ್ಸಾನಿಂದ ವಾಯುಮಾರ್ಗವಾಗಿ ಬೆಂಗಳೂರು – ಅಲ್ಲಿಂದ ರಸ್ತೆ ಮೂಲಕ ಹಾಸನ ನಗರಕ್ಕೆ ಶುಕ್ರವಾರ ರಾತ್ರಿ ಜಿಲ್ಲಾಸ್ಪತ್ರೆಗೆ ಇರಿಸಿ ಶನಿವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಅವಕಾಶ ಅಲ್ಲಿಯೇ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ , ನಿವೃತ್ತ ಯೋಧರು ಪುಷ್ಪನಮನ ಸಲ್ಲಿಸಿ ಕುಟುಂಬದ ಸದಸ್ಯರು ಬಳಿಕ ನಗರದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ, ಹುಟ್ಟೂರಿ ನಲ್ಲಿ ಅಂತ್ಯ ಸಂಸ್ಕಾರ ಮಾಡಿದರು.

ಯೋಧನ ಕುಟುಂಬಸ್ಥರ ಆಕ್ರಂದನ ಎಂತವರಿಗೆ ಕರಳು ಚಿರಕ್ ಎನ್ನುವಂತಿತ್ತು

ದಿ‌.ಯೋಧ ಗುರುಮೂರ್ತಿಗೆ ಪತ್ನಿ ತಾರಾ, ಗೌತಮ್‌ (9), ವಿಕ್ರಮ್‌ (2) ಮಕ್ಕಳು ಇದ್ದು ಪತ್ನಿ ತಾರಾ, ಗೌತಮ್‌ (9), ವಿಕ್ರಮ್‌ (2) ಮಕ್ಕಳು ಇದ್ದು ಗುರುಮೂರ್ತಿ ಅವರ ಮಾವನಿಗೆ ಮೂವರು ಹೆಣ್ಣು ಮಕ್ಕಳಿದ್ದು, ಎಲ್ಲರನ್ನೂ ಯೋಧರಿಗೆ ಮದುವೆ ಮಾಡಿಕೊಟ್ಟಿರುವುದು ವಿಶೇಷ. ಹಾಗೂ ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯ .

ಈ ವಿಷಯ ಖಂಡಿತ ಹೆಮ್ಮೆಯಿಂದ ಶೇರ್ ಮಾಡ್ತೀರ ಅಲ್ವ 🇮🇳

indianarmy #proudindian #hassan #hassannews #rip #gurumurthy

LEAVE A REPLY

Please enter your comment!
Please enter your name here