ಅದು ರಾತ್ರಿ 11.30ರ ಸುಮಾರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಸಮೀಪ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಉಪವಿಭಾಗಾಧಿಕಾರಿ ಅವರು ತಡೆದು ತಪಾಸಣೆ ನಡೆಸಿದಾಗ ಪರವಾನಗಿ ಇಲ್ಲದ್ದು ಗೊತ್ತಾಗಿದೆ., ನಂತರ
ಮರಳು ಎಲ್ಲಿಂದ ಸಾಗಣೆ ಮಾಡಲಾಗುತ್ತಿದೆ ಎಂದು ಚಾಲಕನಲ್ಲೇ ಮಾಹಿತಿಪಡೆದು ಹಲವರ ಒಡಗೂಡಿ ., ಹೊರಟು ಸಕಲೇಶಪುರ ತಾಲ್ಲೂಕಿನ ಹಾಲೇ ಬೇಲೂರು ಸಮೀಪದ ಕಣಿವೆಮನೆಯಲ್ಲಿ ಹೇಮಾವತಿ ನದಿ ದಡದಲ್ಲಿ ಕಾನೂನು ಉಲ್ಲಂಘಿಸಿ ಮರಳು ಗಣಿಗಾರಿಕೆ ನಡೆಸುತ್ತಿರೋದು ಬಟಾಬಯಲಾಗಿದೆ , ಪ್ರತೀಕ್ ಬಯೋಲ್ ಅವರಿಗೆ .,
ನೈಸರ್ಗಿಕ ಸಂಪತ್ತು ಅಕ್ರಮ ಸಾಗಣೆ ಆರೋಪದಡಿ ; ಎರಡು ಹಿಟಾಚಿ, 3 ಟಿಪ್ಪರ್, ಒಂದು ಕಾರು , ಜನರೇಟರ್, 15HP , 5HP ಎರಡು ಪಂಪ್‌ಸೆಟ್, 2.5 ಇಂಚು ಅಗಲದ 48 ಪೈಪ್‌ಗಳನ್ನು ವಶಪಡಿಸಿಕೊಂಡಿದ್ದು
ದಾಳಿಯಲ್ಲಿ ಗಣಿ ಮತ್ತು ಭೂ–ವಿಜ್ಞಾನಿ ಸಿ. ಲಕ್ಷ್ಮಿಕಿರಣ್, ಶಿರಸ್ತೇದಾರ್ ತನ್ವೀರ್ ಅಹಮ್ಮದ್, ಪೊಲೀಸರು ಇದ್ದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್ ಆದೇಶಿಸಿದ್ದಾರೆ . ಹಾಗೂ ಇವರ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಾಗೂ ಪ್ರಶಂಸೆಗೆ ಒಳಪಟ್ಟಿದೆ .