ಸಕಲೇಶಪುರ ಆನೆಮಹಲ್ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ SDPI ಬೆಂಬಲಿತ ಆಶ್ರಪ್|| ಉಪಾಧ್ಯಕ್ಷರಾಗಿ ಚನ್ನಮ್ಮ ಆಯ್ಕೆ.
ಸಕಲೇಶಪುರ : ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಆನೆಮಹಲ್ ಗ್ರಾಮ ಪಂಚಾಯಿತಿಗೆ ಇಂದು ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿಅಧ್ಯಕ್ಷರಾಗಿ SDPI ಬೆಂಬಲಿತ ಆಶ್ರಪ್|| ಉಪಾಧ್ಯಕ್ಷರಾಗಿ ಚನ್ನಮ್ಮ ಆಯ್ಕೆಯಾದರು.
ಹತ್ತು ಜನ ಸದಸ್ಯರ ಸಂಖ್ಯೆ ಬಲದ ಆನೆಮಹಲ್ ಗ್ರಾಮ ಪಂಚಾಯಿತಿಗೆ SDPI ನಿಂದ ಆಶ್ರಪ್, ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಹಸೈನಾರ್ ಹಾಗೂ ಜೆಡಿಎಸ್ ನಿಂದ ಬಂಡಾಯ ಅಭ್ಯರ್ಥಿಯಾಗಿ ಚೆನ್ನಮ್ಮ ನಾಮಪತ್ರ ಸಲ್ಲಿಸಿದರು.
ಹಾಸನ ಜಿಲ್ಲೆಯಲ್ಲಿಯೇ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಅಧ್ಯಕ್ಷರಾಗಿ ಅಶ್ರಫ್ ಆಯ್ಕೆ
ಚುನಾವಣಾ ಅಧಿಕಾರಿಯಾಗಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಹರೀಶ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಘು, ಕಾರ್ಯದರ್ಶಿ ವಿರೇಶ್ ಸೇರಿದಂತೆ ಇನ್ನಿತರರು ಇದ್ದರು.
ಗ್ರಾಮ ಪಂಚಾಯಿತಿಗೆ ಈ ಹಿಂದೆ ಅಧ್ಯಕ್ಷರಾಗಿ ತಿಮ್ಮಯ್ಯ ಉಪಾಧ್ಯಕ್ಷರಾಗಿ ಸುಹಾರ್ ಸಲೀಮ್ ಸೇವೆ ಸಲ್ಲಿಸಿದರು.