ಸಕಲೇಶಪುರ:ಸಕಲೇಶಪುರ ವಲಯ ಅರಣ್ಯಾಧಿಕಾರಿಯಾದ ಶಿಲ್ಪ ಹಾಗೂ ಜಿಲ್ಲೆಯ ಇತರೆ ಮೂರು ಅಧಿಕಾರಿಗಳನ್ನು ಅಮಾನತ್ತು ಮಾಡಿರುವುದು ಖಂಡನೀಯ ಎಂದು ಪರಿಶಿಷ್ಠ ಜಾತಿ ವರ್ಗಗಳ ಒಕ್ಕೂಟದ ವತಿಯಿಂದ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ರವರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದಲ್ಲಿ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ ನಂತರ ಮುಖಂಡರು ಮಾತನಾಡಿ ಸಕಲೇಶಪುರದ ವಲಯ ಅರಣ್ಯಾಧಿಕಾರಿಯಾದ ಶಿಲ್ಪರವರು ಉತ್ತಮವಾಗಿ ತನ್ನ ಕಾರ್ಯವನ್ನು ಮಾಡುತ್ತ ಬಂದಿದ್ದು, ಕಾಡು ಪ್ರಾಣಿಗಳನ್ನ ಬೇಟೆಯಾಡುವವರನ್ನು ಬಂಧಿಸಿದ್ದರು. ರೆಸಾರ್ಟ್ ಗಳಲ್ಲಿ, ಅಕ್ರಮ ದಂಧೆ ನಡೆಯುತ್ತಿದ್ದದನ್ನು ಕಡಿವಾಣ ಹಾಕಿದ್ದರು, ಹಾಗೂ ತನ್ನ ಕಾರ್ಯವ್ಯಾಪ್ತಿಯಲ್ಲ ಆನೆಗಳು ಗುಂಡಿಗೆ ಬಿದ್ದಾಗಲು ಸಹ ಆನೆಯ ವಿಷಯದಲ್ಲಿ ಬಹಳ ಜಾಗೃತಿವಹಿಸಿದರು, ಇಷ್ಟೆಲ್ಲ ಅಕ್ರಮ ಚಟುವಟಕೆಯಲ್ಲ ಸಿಂಹಸ್ವಪ್ನವಾಗಿದ್ದಂತಹ ಈ ಅಧಿಕಾರಿಯನ್ನು ಉದ್ದೇಶಪೂರ್ವಕವಾಗಿ ಎತ್ತಂಗಡಿ ಮಾಡಬೇಕು ಎನ್ನುವ ಒಂದೇ ಒಂದು ಕಾರಣದಿಂದ ಆನೆ ಮತ್ತು ಮಾನವ ಸಂಘರ್ಷದಲ್ಲಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂಬ ತಾಂತ್ರಿಕವಲ್ಲದ (ಗಟ್ಟವಲ್ಲದ) ಪ್ರಸ್ತಾಪವನ್ನು ಮುಂದೆ ಇಟ್ಟುಕೊಂಡು ಡಿಎಫ್ ರವರು ಇವರನ್ನು ಅಮಾನತ್ತಿಗೆ ಶಿಫಾರಸ್ಸು ಮಾಡುವಂತಹ ಒಂದು ಶಿಕ್ಷೆಯನ್ನು ಕೊಟ್ಟಿದ್ದಾರೆ. ದಕ್ಷ ಅಧಿಕಾರಿಯಾಗಿದ್ದರು ಜಾತಿಯ ಕಾರಣವಾಗಿ ಶಿಲ್ಪಾ, ವಲಯ ಅರಣ್ಯಾಧಿಕಾರಿ ಯೋಗೇಂದ್ರ ಕುಮಾರ್, ಉಪವಲಯ ಅರಣ್ಯಾಧಿಕಾರಿ, ಸಕಲೇಶಪುರ, ಗುರುರಾಜ್, ಉಪವಲಯ ಅರಣ್ಯಾಧಿಕಾರಿ, ಬೇಲೂರು, ಸೋಮಶೇಖರ್, ಗ್ರೂಪ್ ‘ಡಿ’ ಚನ್ನರಾಯಪಟ್ಟಣ, ಇವರುಗಳನ್ನು ಅಮಾನತ್ತು ಮಾಡುವುದಕ್ಕೆ ಡಿಎಫ್‌ರವರು ಹೆಚ್ಚು ಮುತುವರ್ಜಿ ವಹಿಸಿ, ಮೇಲಾಧಿಕಾರಿಗಳ ವರದಿ ನೀಡಿರುತ್ತಾರೆ. ಈ ಮೂಲಕ ಸ್ಪಷ್ಟವಾಗಿ ಅನಿಸುತ್ತಿದೆ ಡಿ.ಎಫ್.ಓ ರವರು ಅರಣ್ಯ ಇಲಾಖೆ ಒಳಗಡೆ ಜಾತಿ ರಾಜಕಾರಣ ಮಾಡುವುದು ಕಂಡುಬರುತ್ತಿದೆ. ಇವರುಗಳು ಬರುವುದಕ್ಕಿಂತ ಮೊದಲು ಸುಮಾರು 15-20 ರೇಂಜರ್‌ಗಳು ಬಂದು ಹೋಗಿದ್ದು, ಅವರ ಕಾಲಾವಧಿಯಲ್ಲೂ ಕೂಡ ಮಾನವರು ಆನೆ ಕಾಟಕ್ಕೆ ಒಳಗಾಗಿ ಮೃತರಾಗಿರುತ್ತಾರೆ. ಇದನ್ನು ಯಾವುದೇ ರೀತಿಯಿಂದ ವೈಫಲ್ಯ ಎಂದು ಹೇಳುತ್ತಿಲ್ಲ, ಈ ಮೇಲ್ಕಂಡ ಅಧಿಕಾರಿಯನ್ನು ಮಾತ್ರ ಮುಂದೆ ಇಟ್ಟುಕೊಂಡು ಕಾಡಾನೆ ಮಾನವ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗಿರುತ್ತಾರೆ. ಎಂದು ಕಾರಣ ನೀಡಿ, ಇವರನ್ನು ಅಮಾನತ್ತುಪಡಿಸಿರುತ್ತಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಒಂದುವೇಳೆ ಹಾಗೇನಾದರು ಆಗಿದ್ದರೆ, ಡಿಎಫ್ಒ , ಎಸಿಎಫ್ ಸಹ ಇದರಲ್ಲಿ ಭಾಗಿಯಾಗಿರುತ್ತಾರೆ.ಅಮಾನತ್ತಿಗೆ ಒಳಗಾಗಿರುವ ಶಿಲ್ಪರವರನ್ನು ಕೂಡಲೇ ಕರ್ತವ್ಯಕ್ಕೆ ಹಾಜರಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕಾಗಿ ಈ ಮೂಲಕ ಕೇಳಕೊಳ್ಳುತ್ತೇವೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅರಣ್ಯ ಭವನದ ಮುಂದೆಯೇ ನಾವು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುವುದಾಗಿ ಈ ಮೂಲಕ ತಿಳಿಯಪಡಿಸುತ್ತೇವೆ.
ಈ ಸಂಧರ್ಭದಲ್ಲಿ, , ನಲ್ಲುಲ್ಲಿ ಈರಪ್ಪ ಮಳಲಿ ಶಿವಣ್ಣ,ನದೀಮ್, ಧರ್ಮ ಹೇನ್ಲಿ ಪ್ರದೀಪ್ ಕಡ್ರಹಳ್ಳಿ, ಹೇಮಂತ್ ಅರಕೆರೆ. ಬೈಕೆರೆ ದೇವರಾಜ್, ಯೂನಸ್,ಪುರಸಭಾ ಸದಸ್ಯ ಅಣ್ಷಪ್ಪ, ಕೌಡಳ್ಳಿ ತಿಮ್ಮಯ್ಯ, ಮುಂತಾದವರು ಹಾಜರಿದ್ದರು.
– ಪರಿಶಿಷ್ಟ ಜಾತಿ ಮತ್ತು ವರ್ಗಗಳ ಒಕ್ಕೂಟದ ಸದಸ್ಯರು