ಕಾಲೇಜಿಗೆ ಕೀರ್ತಿ ತಂದ ಗ್ರಾಮೀಣ ಪ್ರತಿಭೆ

0

ಹಾಸನ ನ.16 : ಮೈಸೂರು ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ನಗರದ ಎ. ವಿ ಕಾಂತಮ್ಮ ಮಹಿಳಾ ಕಾಲೇಜಿನ ವಿಜ್ಞಾನ ವಿಭಾಗದ  ಅಂತಿಮ ಬಿ.ಎಸ್.ಸಿ ( ಸಿ.ಬಿ.ಝೆಡ್) ವಿದ್ಯಾರ್ಥಿನಿ ಕುಮಾರಿ ಯಮುನ ಸಿ. ಎಸ್ ಅವರು 2020-21 ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಪರೀಕ್ಷೆಯಲ್ಲಿ ಸಸ್ಯಶಾಸ್ತ್ರದಲ್ಲಿ 300 ಕ್ಕೆ 295, ಪ್ರಾಣಿಶಾಸ್ತ್ರದಲ್ಲಿ 300ಕ್ಕೆ 296 ಹಾಗೂ ರಾಸಾಯನ ಶಾಸ್ತ್ರದಲ್ಲಿ 200 ಕ್ಕೆ 162 ಅಂಕಗಳನ್ನು ಪಡೆದು ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದು, ಇವರು ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಓದಿದ್ದು, ಅರಸೀಕೆರೆ ತಾಲ್ಲೂಕು, ಚಿಕ್ಕಲಿಂಗನಹಳ್ಳಿ ಗ್ರಾಮದ ಶಿವಕುಮಾರ್ ಮತ್ತು ಶಶಿಕಲಾ ದಂಪತಿಗಳ ಸುಪುತ್ರಿಯಾಗಿದ್ದು, ಇವರಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಕಾಲೇಜಿನ ಪ್ರಾಧ್ಯಾಪಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

#achivershassan #hassan #hassannews #avkcollegehassan

LEAVE A REPLY

Please enter your comment!
Please enter your name here