ಹೃದಯಾಘಾತ : ಸಕಲೇಶಪುರದ ಕೇವಲ 20ವರ್ಷದ ಯುವಕ ಸಾವು

0

ಹಾಸನ : ಕೇವಲ 20 ವರ್ಷದ ಯುವಕ ಹೃದಯಾಘಾತದಿಂದ ಮೃತಪಟ್ಟಿರುವ ಪ್ರಕರಣ ನಡೆದಿದೆ.‌, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ

ಬೆಳಗೋಡು ಹೋಬಳಿ, ಯಡೇಹಳ್ಳಿ ಗ್ರಾಮದ ಚಂದನ್ (20) ಹೃದಯಾಘಾತದಿಂದ ಮೃತನಾದ ಯುವಕನಾಗಿದ್ದು ಮನೆಯಲ್ಲಿದ್ದಾಗ ಅನಾರೋಗ್ಯಕ್ಕೆ ತುತ್ತಾಗಿ ಕುಸಿದು ಬಿದ್ದಿದ್ದ ಅಷ್ಟೇ . ತದನಂತರ ಆಸ್ಪತ್ರೆಗೆ ರವಾನೆ ಮಾಡುವ ವೇಳೆ ಸಾವನಪ್ಪಿದ್ದಾನೆ. ಇದೇ ಗ್ರಾಮದ ಬಸವರಾಜಯ್ಯ ಸುಧಾ ಅವರ ಪುತ್ರನಾಗಿದ್ದು ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ . ವೈದ್ಯರ ಮೇಲ್ನೋಟದ ಮಾಹಿತಿ ಪ್ರಕಾರ

ಹೃದಯ ಸ್ತಂಭನ ಉಂಟಾಗಿದೆಯೆಂದು  ಹೇಳಿದ್ದು ಮರಣೋತ್ತರ ಪರೀಕ್ಷೆ ನಂತರ ಸಾವಿನ ನಿಖರ ಕಾರಣ ತಿಳಿದುಬರಲಿದೆ .

LEAVE A REPLY

Please enter your comment!
Please enter your name here