ಎನ್.ಎಂ.ಎಂ.ಎಸ್. ವಿದ್ಯಾರ್ಥಿ ವೇತನಕ್ಕೆ ಆನ್‍ಲೈನ್ ಅರ್ಜಿ ಆಹ್ವಾನ

0

ಕಳೆದ ಶೈಕ್ಷಣಿಕ ಸಾಲುಗಳಲ್ಲಿ ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ವೇತನ ಸೌಲಭ್ಯಕ್ಕಾಗಿ ಕಡ್ಡಾಯವಾಗಿ ಆನ್‍ಲೈನ್ ಅರ್ಜಿ ಸಲ್ಲಿಸಬೇಕು. ಕಳೆದ ಸಾಲಿನ 2016, 2017, 2018ರಲ್ಲಿ ಪಾಸಾದ ವಿದ್ಯಾರ್ಥಿಗಳು ಎನ್.ಎಸ್.ಪಿ. ಪೋರ್ಟಲ್‍ನಲ್ಲಿ ಲಾಗಿನ್ ಆಗಿ(Renewal) ಅರ್ಜಿಗಳನ್ನು ಹಾಗೂ 2019ರಲ್ಲಿ ಎನ್.ಎಂ.ಎಂ.ಎಸ್. ಪರೀಕ್ಷೆ ಪಾಸಾದ ವಿದ್ಯಾರ್ಥಿಗಳು (Fresh) ಅರ್ಜಿಗಳನ್ನು ತಮ್ಮ ಎಲ್ಲಾ ಅಗತ್ಯ ವಿವರಗಳೊಂದಿಗೆ ಎನ್.ಎಸ್.ಪಿ. 2.0 ಪೋರ್ಟಲ್‍ನ (www.scholorships.gov.in) ನಲ್ಲಿ ಮಾಹಿತಿಯನ್ನು ಅ.31ರೊಳಗೆ ಅಪ್‍ಲೋಡ್ ಮಾಡಬೇಕು. ನಂತರ ಪ್ರೌಢಶಾಲಾ, ಪದವಿ ಪೂರ್ವ ಕಾಲೇಜು ಮುಖ್ಯಸ್ಥರು ಸದರಿ ಮಾಹಿತಿಯನ್ನು ಪರಿಶೀಲಿಸಿ ಅನುಮೋದನೆ ನೀಡಿ ಅರ್ಜಿಗಳನ್ನು ಜಿಲ್ಲಾ ಹಂತಕ್ಕೆ ಕಳುಹಿಸಬೇಕು.

ವಿದ್ಯಾರ್ಥಿಗಳು, ಪೋಷಕರು, ಶಾಲಾ, ಕಾಲೇಜುಗಳ ಮುಖ್ಯಸ್ಥರುಗಳು ತುರ್ತಾಗಿ ಆನ್‍ಲೈನ್‍ನಲ್ಲಿ ಮಾಹಿತಿಯನ್ನು ಅಪ್‍ಲೋಡ್ ಮಾಡದಿದ್ದಲ್ಲಿ ವಿದ್ಯಾರ್ಥಿ ವೇತನ ಮಂಜೂರು ಮಾಡುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲ್ಲೂಕು ನೋಡಲ್ ಅಧಿಕಾರಿಗಳು ಹಾಗೂ ಹೆಚ್. ಗಂಗಾಧರ್ ಜಿಲ್ಲಾ ನೋಡಲ್ ಅಧಿಕಾರಿಗಳು ಡಯಟ್ ಹಾಸನ (ದೂ.ಸಂಖ್ಯೆ: 9886197410) ನ್ನು ಸಂಪರ್ಕಿಸಬಹುದಾಗಿದೆ ಎಂದು ಡಯಟ್‍ನ ಪ್ರಾಂಶುಪಾಲರಾದ ಪುಟ್ಟರಾಜು ಡಿ.ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here