ಶಿರಾಡಿ ಘಾಟ್‌ನಲ್ಲಿ  ಭೂಕುಸಿತ ಉಂಟಾಗುತ್ತಿರುವ ಸ್ಥಳಗಳಲ್ಲಿ ‘ಮೈಕ್ರೋ ಫಿಲ್ಲಿಂಗ್‌ ಅಂಡ್‌ ಸಾಯಿಲ್‌ ನೈಲಿಂಗ್‌ 36ಕೋಟಿ ಮಂಜೂರು

0

ಬೆಳಗಾವಿ(ಸುವರ್ಣ ವಿಧಾನಸೌಧ)/ಹಾಸನ : ರಾಜ್ಯದ 18 ಘಾಟ್‌ ರಸ್ತೆಗಳ ಸುರಕ್ಷತೆಗಾಗಿ ರಾಷ್ಟ್ರೀಯ ಹೆದ್ದಾರಿ ವಲಯ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳ ಅಡಿ  ಬರುವ ಘಾಟ್ ರಸ್ತೆಗಳ ಅಭಿವೃದ್ಧಿಗೆ ಅಂದಾಜು 2,00 ಕೋಟಿ ₹.,

ಅಕಾಲಿಕ ಮಳೆ , ಪ್ರಕೃತಿ ವಿಕೋಪಕ್ಕೆ ಅತಿ ಹೆಚ್ಚು ಭೂಕುಸಿತಕ್ಕೆ ಒಳಗಾಗುತ್ತಿರುವ ನಮ್ಮ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಶಿರಾಡಿ ಘಾಟ್, ನೆರೆಜಿಲ್ಲೆ ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್‌ಗಳಲ್ಲಿ ಕಾಮಗಾರಿಗಳನ್ನು ಕೂಡಲೇ ಆರಂಭಿಸಲು ಬೆಳಗಾವಿಯ ವಿಕಾಸ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಬಿಜೆಪಿಯ ಉಮಾನಾಥ ಕೋಟ್ಯಾನ್‌ ಅವರ ಪ್ರಶ್ನೆಗೆ PWD (ಲೊಕೋಪಯೋಗಿ) ಸಚಿವ ಸಿ.ಸಿ.ಪಾಟೀಲ್ ಉತ್ತರಿಸಿದ್ದಾರೆ.,

ಶಿರಾಡಿ ಘಾಟ್‌ನಲ್ಲಿ ಕಾಮಗಾರಿ‌ ಇಂತಿರಬಹುದು :

• ಭೂಕುಸಿತ ಉಂಟಾಗುತ್ತಿರುವ ಈ ಸ್ಥಳಗಳಲ್ಲಿ ‘ಮೈಕ್ರೋ ಫಿಲ್ಲಿಂಗ್‌ ಜೊತೆ ಸಾಯಿಲ್‌ ನೈಲಿಂಗ್‌’ ತಂತ್ರಜ್ಞಾನ ಉಪಯೋಗಿಸಿ ಅತಿ ಹೆಚ್ಚು ವಾಹನ ದಟ್ಟಣೆಗೆ ತೊಡಕಾಗದಂತೆ ಎಚ್ಚರವಹಿಸಲು ಈ ರಸ್ತೆ ಅಭವೃದ್ಧಿಗೆ 36 ಕೋಟಿ ₹ ಮಂಜೂರು ಆಗಿದೆ.,  ಸದ್ಯದಲ್ಲೇ ಕಾಮಗಾರಿಗೆ ಆದೇಶ ಅಧಿಕೃತವಾಗಿ ಹೊತಡಿಸಲಾಗುವ ಸಾಧ್ಯತೆ ಇದೆ.,ಇನ್ನು ಚಾರ್ಮಾಡಿ ಘಾಟ್‌ನಲ್ಲಿ 6 ಕಣಿವೆ ಸ್ಥಳಗಳಲ್ಲಿ ಭೂಕುಸಿತ ಉಂಟಾಗಿದ್ದ ಜಾಗಗಳಲ್ಲಿ ‘ಮೈಕ್ರೋ ಫಿಲ್ಲಿಂಗ್‌ ಜೊತೆ ಶಿರಾಡಿ ಮಾದರಿ ಸಾಯಿಲ್‌ ನೈಲಿಂಗ್‌’ ತಂತ್ರಜ್ಞಾನ ಬಳಸಿ 19 ಕೋಟಿ ₹ ವೆಚ್ಚದಲ್ಲಿ 13km ರಸ್ತೆ ಸುಭದ್ರ ಪಡಿಸಬೇಕು ಎಂದು ಸಮೀಕ್ಷಿಸಲಾಗಿದೆ.

LEAVE A REPLY

Please enter your comment!
Please enter your name here